ಹೆಬ್ಬನಹಳ್ಳಿಯಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಸಾವು; ಸಿಎಂ ಸೂಚನೆ ಮೇರೆಗೆ ಸ್ಥಳಕ್ಕೆ ಬಂದ ಉಸ್ತುವಾರಿ ಸಚಿವರಿಂದ ಸಮಸ್ಯೆ ಪರಿಹಾರದ ಭರವಸೆ
ಸಿಎಂ ಸೂಚನೆ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಮಧ್ಯರಾತ್ರಿ 11.50ಕ್ಕೆ ಸ್ಥಳಕ್ಕೆ ಭೇಟಿ ನೀಡಿದರು. ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು.
ಹಾಸನ: ಜಿಲ್ಲೆಗೂ ಕಾಡಾನೆ ಸಂಘರ್ಷಕ್ಕೂ ಎಡೆಬಿಡದ ನಂಟು, ಕೇವಲ ಇಪ್ಪತ್ತು ವರ್ಷದಲ್ಲಿ ಜಿಲ್ಲೆಯಲ್ಲಿ 76 ಜನರ ಬಲಿಯಾಗಿದೆ. ಪ್ರತಿ ಬಲಿ ಆದಾಗಲು ಸರ್ಕಾರದ ಶಾಶ್ವತ ಪರಿಹಾರದ ಮಾತನಾಡುತ್ತೆ, ಸೂಕ್ತ ಪರಿಹಾರದ ಭರವಸೆಯನ್ನೂ ನೀಡುತ್ತೆ. ಸರ್ಕಾರಗಳು ಬದಲಾಗಿ ಹೋಗಿವೆ, ಹತ್ತಾರು ಸಚಿವರು ಬಂದು ಹೋಗಿದ್ದಾರೆ ಆದ್ರೆ ಸಮಸ್ಯೆ ಹೆಚ್ಚಾಗಿದೆಯೇ ಹೊರತು ಪರಿಹಾರದ ಪ್ರಯತ್ನ ಆದಂತೆ ಕಾಣ್ತಿಲ್ಲ. ಈ ಹಿನ್ನೆಲೆ ಹೆಬ್ಬನಹಳ್ಳಿಯಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿಯಾಗಿದಕ್ಕೆ ಹೆಬ್ಬನಹಳ್ಳಿಯಲ್ಲಿ ಗ್ರಾಮಸ್ಥರು ಮೃತ ದೇಹ ಇಟ್ಟು ಅಹೋರಾತ್ರಿ ಧರಣಿ ನಡೆಸಿದರು.
ಪ್ರತಿಭಟನಾಕಾರರ ಮನವೊಲಿಸಲು ಸಚಿವರನ್ನು ಕಳಿಸಿದ ಸಿಎಂ
ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ, ರಾತ್ರೋರಾತ್ರಿ ಪ್ರತಿಭಟನಾಕಾರರ ಮನವೊಲಿಸಲು ಉಸ್ತುವಾರಿ ಸಚಿವರನ್ನ ಸಿಎಂ ಕಳಿಸಿದ್ದಾರೆ. ಸಿಎಂ ಸೂಚನೆ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಮಧ್ಯರಾತ್ರಿ 11.50ಕ್ಕೆ ಸ್ಥಳಕ್ಕೆ ಭೇಟಿ ನೀಡಿದರು. ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಫೋನ್‌ನಲ್ಲಿ ಧರಣಿನಿರತರ ಜತೆ ಸಿಎಂ, ಸಚಿವ ಅಶೋಕ್ ಚರ್ಚೆ ನಡೆಸಿದರು. ನವೆಂಬರ್ 3ರಂದು ಕಾಡಾನೆ ಹಾವಳಿ ಸಂಬಂಧ ಸಕಲೇಶಪುರದಲ್ಲಿ ಸಭೆ ನಡೆಸುವುದಾಗಿ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ. ದೂರವಾಣಿ ಮೂಲಕ ಪ್ರತಿಭಟನಾಕಾರರ ಜೊತೆ ಮಾತಾಡಿರೋ ಸಿಎಂ ಹಾಗೂ ಕಂದಾಯ ಸಚಿವ ಅಶೋಕ್ ಅವರು ಸಭೆ ಮೂಲಕ ಸಮಸ್ಯೆಗೆ ಕೊನೆ ಹಾಡುವುದಾಗಿ ಭರವಸೆ ನೀಡಿದ್ದಾರೆ.
ಬೆಳಗ್ಗೆ ಮನು ಎಂಬ ವ್ಯಕ್ತಿಯನ್ನ ತುಳಿದು ಕಾಡಾನೆ ಸಾಯಿಸಿತ್ತು. ಘಟನೆ ನಡೆದ ಬಳಿಕ ಹಾಸನಕ್ಕೆ ಭೇಟಿ ನೀಡಿದ್ರೂ ಸ್ಥಳಕ್ಕೆ ಉಸ್ತುವಾರಿ ಸಚಿವ ತೆರಳಿರಲಿಲ್ಲ. ಸ್ಥಳಕ್ಕೆ ಸಚಿವರು ಬರುವಂತೆ ಪ್ರತಿಭಟನಾಕಾರರು ಪಟ್ಟುಹಿಡಿದಿದ್ದರು. ಪ್ರತಿಭಟನಾಕಾರರಿಗೆ ಮಣಿದು ಸಚಿವರನ್ನು ಸಿಎಂ ಕಳಿಸಿದ್ದಾರೆ. ಇದನ್ನೂ ಓದಿ: Karnataka Rain: ಕರ್ನಾಟಕದ ಕರಾವಳಿ, ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಇಂದಿನಿಂದ ಮತ್ತೆ ಮಳೆಯ ಅಬ್ಬರ
ಇನ್ನು ಭೇಟಿ ವೇಳೆ ಮಾತನಾಡಿದ ಉಸ್ತುವಾರಿ ಸಚಿವ ಗೋಪಾಲಯ್ಯ, ಬೆಳಗ್ಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯುತ್ತಿರುವ ಸಂದರ್ಭದಲ್ಲಿ ಧ್ವಜಾರೋಹಣ ಆದ್ಮೇಲೆ ಈಗಾಗಿದೆ ಅಂತಾ ವಿಷಯ ಗೊತ್ತಾಯ್ತು. ಕಾರ್ಯಕ್ರಮದ ಮಧ್ಯದಲ್ಲಿಯೇ ಡಿಸಿಎಫ್ ನ ಕಳುಹಿಸಿದೆ. ಕಾರ್ಯಕ್ರಮ ಮುಗಿದ ಮೇಲೆ ಡಿಸಿ, ಎಸ್ಪಿ, ಸಿಇಓ ಎಲ್ಲರನ್ನೂ ಸ್ಥಳಕ್ಕೆ ಹೋಗಬೇಕು ಅಂತಾ ಹೇಳಿದ್ದೆ. ನಾನು ಮುಖ್ಯಮಂತ್ರಿಗಳ ಜೊತೆ ಮಾತಾಡಿ ಬರಬೇಕೆಂಬ ಉದ್ದೇಶದಿಂದ ಹೋಗಿದ್ದೆ. ಏನಾದ್ರೂ ಒಂದು ಪರಿಹಾರ ಸಿಗಬೇಕು. ನಾನು ಬಂದು ಆಶ್ವಾಸನೆ ಕೊಟ್ಟು ಹೋಗೋದು ದೊಡ್ಡ ವಿಚಾರ ಅಲ್ಲ. ದೊಡ್ಡವರ ಜೊತೆ ಮಾತಾಡಿ ಬರಬೇಕೆಂಬ ಉದ್ದೇಶದಿಂದಲೇ ಬೆಂಗಳೂರಿಗೆ ಹೋಗಿದ್ದು ಅದು ಬಿಟ್ಟು ಬೇರೆ ಏನೂ ಇಲ್ಲ. ಮುಖ್ಯಮಂತ್ರಿಗಳ ಜೊತೆಯೂ ಮಾತಾಡಿದ್ದೇನೆ. ಸಂಘಟನೆಯವರ ಜೊತೆ ನೀವು ಮಾತಾಡಬೇಕು ಅಂತಾ ಸಿಎಂಗೆ ಹೇಳಿದೆ. ನಾನು ಮಾತಾಡ್ತೇನೆ ನೀನು ಸ್ಥಳಕ್ಕೆ ಹೋಗು ಅಂತಾ ಕಳಿಸಿದ್ರು ಆಮೇಲೆ ನಾನು ಬಂದೆ. 15 ಲಕ್ಷ ಪರಿಹಾರ ಕೊಡಬೇಕು ಅಂತಾ ಕಳೆದ ವಿಧಾನಸಭೆಯಲ್ಲಿಯೇ ತೀರ್ಮಾನ ಆಗಿದೆ. ಅದು ಫೈನಾನ್ಸ್ ಗೆ ಹೋಗಿದೆ ಎರಡುಮೂರು ದಿನದಲ್ಲಿ ಅದನ್ನ ಅಪ್ರೂವ್ ಮಾಡಿಸುತ್ತೇವೆ.
ತಾತ್ಕಾಲಿಕವಾಗಿ ಬೆಳಗ್ಗೆಯೇ ಜಿಲ್ಲಾಧಿಕಾರಿಯವರಿಗೆ ಆ ಕುಟುಂಬದ ಹೆಣ್ಣುಮಗಳಿಗೆ ಸಕಲೇಶಪುರದಲ್ಲಿಯೇ ಒಂದು ಹುದ್ದೆ ಕೊಡಿ, ಇದನ್ನ ಪರ್ಮನೆಂಟ್ ಮಾಡಬೇಕಾದರೆ ಸಾಕಷ್ಟು ಕಾನೂನು ಕ್ರಮ ಇದೆ. ಕಾನೂನು ವಿಧಿವಿಧಾನ ಇದೆ, ಅದನ್ನ ನಾಳೆಯೇ ಮಾಡಲು ಆಗಲ್ಲ. ಅದನ್ನ ಮಾಡಲೇಬೇಕು ಅನ್ನೋದನ್ನ ಅಧಿಕಾರಿಗಳ ಸಭೆ ಕರೆದಾಗ ಮುಖ್ಯಮಂತ್ರಿಗಳು ಸ್ಪಂದಿಸುತ್ತಾರೆ. ವಿಧಿವಿಧಾನಗಳ ಪ್ರಕಾರವೇ ಮಾಡಬೇಕಾಗುತ್ತದೆ. ಕಾರ್ಯಮುಗಿದ ತಕ್ಷಣವೇ ಸಕಲೇಶಪುರದಲ್ಲಿ ಕೊಡೋದಕ್ಕೆ ಈಗಾಗಲೇ ಡಿಸಿ, ಎಸ್ಪಿ, ಸಿಇಓ ಅವರಿಗೆ ಹೇಳಿದ್ದೇನೆ. ಇನ್ನು ಎರಡರಿಂದ ಮೂರು ದಿನದಲ್ಲಿ ಹಿರಿಯ ಅಧಿಕಾರಿಗಳ ತಂಡ ಇಲ್ಲಿಗೆ ಬಂದು ಇದನ್ನ ಏನು ಮಾಡಬೇಕು ಅಂತಾ ಸಭೆ ಮಾಡುತ್ತಾರೆ. ಆಮೇಲೆ ಮುಖ್ಯಮಂತ್ರಿಗಳ ಜೊತೆ ಸಭೆ ಮಾಡಿ. ಇವನ್ನ ಹಂತಹಂತವಾಗಿ ಬಗೆಹರಿಸುತ್ತೇವೆ ಎಂದರು.
ಘಟನೆ ಹಿನ್ನೆಲೆ
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದ ಸಮೀಪದ ಕುಟುಂಬ ಸದಸ್ಯರ ಜೊತೆಗೆ ಚಾಮುಂಡಿದೇವರ ಪೂಜೆಗೆಂದು ಹೊರಟಿದ್ದ ಕಾಫಿ ಬೆಳೆಗಾರನನ್ನ ಅಡ್ಡಗಟ್ಟಿದ ಒಂಟಿ ಸಲಗ ತುಳಿದು ಕೊಂದಿತ್ತು. ಘಟನೆ ಬಳಿಕ ಸ್ಥಳಕ್ಕೆ ಯಾರೂ ಬರದ ಹಿನ್ನೆಲೆ ರೊಚ್ಚಿಗೆದ್ದ ಜನರು ಮೃತದೇಹ ಇಟ್ಟುಕೊಂಡು ಅಹೋರಾತ್ರಿ ಹೋರಾಟ ಆರಂಭಿಸಿದ್ದರು. ಜಿಲ್ಲೆಯಲ್ಲಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಬಂದಿಲ್ಲ ಎಂದು ಕಿಡಿಕಾರಿದ್ದು ಡಿಸಿ ಎಸ್ಪಿ, ಶಾಸಕರ ಮನವೊಲಿಕೆಗೂ ಬಗ್ಗೆದೆ ಹೊರಾಟ ಮುಂದುವರೆದಿದ್ದರು.
Published On - 7:59 am, Wed, 2 November 22