ಅವನೇನು ಸಮಾಜಕ್ಕೆ ರೋಲ್ ಮಾಡೆಲಾ? ದರ್ಶನ್ ವಿರುದ್ಧ ಸಚಿವ ಕೆಎನ್ ರಾಜಣ್ಣ ಗರಂ

| Updated By: ಆಯೇಷಾ ಬಾನು

Updated on: Aug 29, 2024 | 1:45 PM

ಅವನೇನು ಸಮಾಜಕ್ಕೆ ರೋಲ್ ಮಾಡೆಲ್ಲ? ಬರೀ ಅವನದ್ದೇ ಸುದ್ದಿ. ಒಳ್ಳೆಯ ಕಲಾವಿದ ಅಂತ ಎಲ್ಲರೂ ಒಪ್ಪುತ್ತೀವಿ. ಒಳ್ಳೆಯ ಕಲಾವಿದ ಜನರು ಇಷ್ಟ ಪಡ್ತಾರೆ ಅಂತ ಮಾಡಬಾರದ್ದನ್ನ ಮಾಡಿದ್ರೆ ಕಾನೂನು ಕ್ರಮ ತಗೊಳುತ್ತೆ ಎಂದು ಹಾಸನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ದರ್ಶನ್ ವಿಚಾರಕ್ಕೆ ಗರಂ ಆಗಿದ್ದಾರೆ.

ಅವನೇನು ಸಮಾಜಕ್ಕೆ ರೋಲ್ ಮಾಡೆಲಾ? ದರ್ಶನ್ ವಿರುದ್ಧ ಸಚಿವ ಕೆಎನ್ ರಾಜಣ್ಣ ಗರಂ
ಕೆಎನ್ ರಾಜಣ್ಣ
Follow us on

ಹಾಸನ, ಆಗಸ್ಟ್​.29: ದೇಶದಲ್ಲಿ ದರ್ಶನ್ (Darshan Thoogudeepa) ಸುದ್ದಿ ಒಂದೇ ಇರೋದಾ? ಬೆಳಿಗ್ಗೆ ಎದ್ದರೆ ಟಿವಿಯಲ್ಲಿ ಅದೇ ಬರ್ತಿದೆ. ಅವನೇನು ಸಮಾಜಕ್ಕೆ ರೋಲ್ ಮಾಡೆಲ್ಲ? ಒಳ್ಳೆಯ ಕಲಾವಿದ ಜನರು ಇಷ್ಟ ಪಡ್ತಾರೆ ಅಂತ ಮಾಡಬಾರದ್ದನ್ನ ಮಾಡಿದ್ರೆ ಕಾನೂನು ಕ್ರಮ ತಗೊಳುತ್ತೆ ಎಂದು ಹಾಸನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ (KN Rajanna) ದರ್ಶನ್ ವಿಚಾರಕ್ಕೆ ಗರಂ ಆಗಿದ್ದಾರೆ. ನಿನ್ನೆ ನಿಧನರಾದ ಹಾಸನದ ಸಮಾಜಸೇವಕ ಮಹಂತಪ್ಪ ಅವರ ಅಂತಿಮ‌ ದರ್ಶನ ಪಡೆದ ಸಚಿವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಲೆ ಕೇಸ್​ನಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಸೇರಿದ್ದ ನಟ ದರ್ಶನ್ ಅವರು ಜೈಲಿನಲ್ಲಿ ರೌಡಿಗಳ ಜೊತೆ ಕಾಫಿ, ಸಿಗರೇಟು ಸೇದುತ್ತ ಕೂತಿದ್ದ ರಾಜಾತಿಥ್ಯದ ಫೋಟೋವೊಂದು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ದರ್ಶನ್ ಅವರನ್ನು ಬಳ್ಳಾರಿಯ ಜೈಲಿಗೆ ಶಿಫ್ಟ್ ಮಾಡಿದ್ದಾರೆ. ರಾತ್ರೋರಾತ್ರಿ ದರ್ಶನ್ ಅವರನ್ನು ಸಾಗಿಸಿದ್ದಾರೆ. ಈ ಸುದ್ದಿ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಬಗ್ಗೆ ಮಾತನಾಡಿದ ಸಚಿವ ಕೆ.ಎನ್.ರಾಜಣ್ಣ ಅವರು ಗರಂ ಆಗಿದ್ದಾರೆ.

ದರ್ಶನ್ ಪ್ರಕರಣದ ಬಗ್ಗೆ ಮಾತನಾಡಿದ ಸಚಿವ ಕೆ.ಎನ್.ರಾಜಣ್ಣ ಗರಂ ಆಗಿದ್ದಾರೆ. ದೇಶದಲ್ಲಿ ದರ್ಶನದ್ದು ಒಂದೇ ಇರೋದಾ, ಬೆಳಿಗ್ಗೆ ಎದ್ದರೆ ಟಿವಿಯಲ್ಲಿ ತೋರುಸ್ತೀರಾ. ಅವನೇನು ಸಮಾಜಕ್ಕೆ ರೋಲ್ ಮಾಡೆಲ್ಲ? ಬರೀ ಅವನದ್ದೇ ಸುದ್ದಿ. ಒಳ್ಳೆಯ ಕಲಾವಿದ ಅಂತ ಎಲ್ಲರೂ ಒಪ್ಪುತ್ತೀವಿ. ಒಳ್ಳೆಯ ಕಲಾವಿದ ಜನರು ಇಷ್ಟ ಪಡ್ತಾರೆ ಅಂತ ಮಾಡಬಾರದ್ದನ್ನ ಮಾಡಿದ್ರೆ ಕಾನೂನು ಕ್ರಮ ತಗೊಳುತ್ತೆ. ಅದನ್ನು ಬೆಳಿಗ್ಗೆ, ಸಾಯಂಕಾಲ ತೋರಿಸುತ್ತಾ ಇದ್ದರೆ ನೋಡಲು ಅಸಹ್ಯ ಆಗುತ್ತೆ ಎಂದರು.

ಇದನ್ನೂ ಓದಿ: ದರ್ಶನ್ ತೂಗುದೀಪ: ಡಿ ಬಾಸ್​ನನ್ನು ಮುಸುಕು ಹಾಕಿ ಕರೆತಂದಿದ್ದು ತೀವ್ರ ನಿರಾಶೆಯುಂಟು ಮಾಡಿದೆ ಎಂದ ಅಭಿಮಾನಿಗಳು

ಮುಂಜಾನೆ ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ದರ್ಶನ್​ ಕರೆತಂದಿದ್ದ ಪೊಲೀಸರು, ಆಂಧ್ರ ಗಡಿ ಮೂಲಕ ಗಣಿನಾಡಿಗೆ ಎಂಟ್ರಿಕೊಟ್ರು. ಮುಂದೆ ಎರಡು ಎಸ್ಕಾರ್ಟ್​ ಮಧ್ಯ ಟಿಟಿಯಲ್ಲಿ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್​ ಇದ್ದ ವಾಹನದ ಹಿಂದೆ ಮತ್ತೊಂದು ಎಸ್ಕಾರ್ಟ್,​ ಬೆಳಗ್ಗೆ 9.50 ರ ಸುಮಾರಿಗೆ ಬಳ್ಳಾರಿ ಜೈಲಿಗೆ ಆಗಮಿಸಿತು.

ಬಳ್ಳಾರಿ ಜೈಲಿಗೆ ದರ್ಶನ್​ ಎಂಟ್ರಿ ಕೊಟ್ಟ ಬೆನ್ನಲ್ಲೇ ಡೈರಿಯಲ್ಲಿ ಸಿಬ್ಬಂದಿ ಆರೋಪಿ ಹೆಸರು ನಮೂದಿಸಿದ್ದಾರೆ. ತಂದೆ ಹಾಗೂ ತಾಯಿ ಹೆಸರು, ವಿಳಾಸ, ಯಾವ ಪ್ರಕರಣ, ಎಲ್ಲಿಂದ ಬಂದಿರೋದು ಅನ್ನೋದನ್ನೂ ಬರೆದು, ಬಳಿಕ ದರ್ಶನ್​ಗೆ ಮೆಡಿಕಲ್​ ಚೆಕಪ್​ ಮಾಡಿಸಿದ್ದಾರೆ. ವೈದ್ಯಕೀಯ ತಪಾಸಣೆ ನಂತ್ರ ಸೆಂಟ್ರಲ್​ ಜೈಲಿನ ಸೆಲ್​ಗೆ ದರ್ಶನ್​ನನ್ನ ಕಳಿಸಿದ್ದಾರೆ.

ಬ್ರ್ಯಾಂಡೆಡ್​ ಟೀ ಶರ್ಟ್​ ಧರಿಸಿ ಪೊಲೀಸ್​ ವಾಹನದಿಂದ ಇಳಿದ ದರ್ಶನ್​ ಕೊರಳ ಕಾಲರ್​​ನಲ್ಲಿ ಕೂಲಿಂಗ್​ ಗ್ಲಾಸ್ ಇತ್ತು. ಎಡಗೈಗೆ ಕ್ರೇಪ್​ ಬ್ಯಾಂಡ್​ ಹಾಕಲಾಗಿದ್ದು, ಮತ್ತೊಂದು ಕೈಯಲ್ಲಿ ವಾಟರ್​ ಬಾಟಲ್​, ಬೆಡ್​ಶೀಟ್ ಹಿಡಿದಿದ್ದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:25 pm, Thu, 29 August 24