ಹಾಸನ: ಕಲ್ಲಿನಿಂದ ಹೊಡೆದು ಶಾಸಕ ಪ್ರೀತಂಗೌಡ ಭಾವಚಿತ್ರ ಹಾನಿ ಮಾಡಿರುವ ಕೃತ್ಯ ಹಾಸನ ನಗರದ ಎಂ.ಜಿ.ರಸ್ತೆಯಲ್ಲಿ ನಡೆದಿದೆ. ಹಾಸನದ ಬಡಾವಣೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಕಿಡಿಗೇಡಿಗಳು ಶಾಸಕ ಪ್ರೀತಂಗೌಡ ಭಾವಚಿತ್ರ ಹಾನಿ ಮಾಡಿ ಎಸ್ಕೇಪ್ ಆಗಿದ್ದಾರೆ.
ಹಾಸನ ನಗರದಲ್ಲಿ ಉದ್ಘಾಟನೆಗೆ ಸಿದ್ದವಾಗಿದ್ದ ಎಂಜಿ ರಸ್ತೆಯ ಫುಡ್ ಕೋರ್ಟ್ ನಲ್ಲಿ ಅಳವಡಿಸಲಾಗಿದ್ದ ಬೋರ್ಡ್ ಗೆ ಹಾನಿ ಮಾಡಿರುವ ಕಿಡಿಗೇಡಿಗಳು ಅದರಲ್ಲಿದ್ದ ಶಾಸಕ ಪ್ರೀತಂಗೌಡ ಭಾವಚಿತ್ರವನ್ನು ಒಡೆದು ಹಾಕಿದ್ದಾರೆ. ನೆನ್ನೆ ರಾತ್ರಿ ಕಿಡಿಗೇಡಿಗಳು ಶಾಸಕರ ಭಾವಚಿತ್ರ ಹಾನಿಗೊಳಿಸಿದ್ದು ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸುಮಾರು ನೂರು ಮೀಟರ್ ಉದ್ದಕ್ಕೆ ನಗರದ ಮಹಾತ್ಮ ಗಾಂದಿ ರಸ್ತೆಯಲ್ಲಿ ಫುಡ್ ಕೋರ್ಟ್ ನಿರ್ಮಾಣ ಮಾಡಲಾಗಿದೆ. ನಗರದ ವಿವಿಧೆಡೆ ಬೀದಿ ಬದಿಯಲ್ಲಿ ಅಹಾರ ಪದಾರ್ಥ ಮಾರಾಟ ಮಾಡೋ ಸಣ್ಣ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈಗಾಗಲೇ ನಗರದ ಸಾಲಗಾಮೆ ರಸ್ತೆಯಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಒಳಗೊಂಡ ಅತ್ಯಾಧುನಿಕ ಫುಡ್ ಕೋರ್ಟ್ ನಿರ್ಮಾಣ ಅಗಿದೆ.
ಇದೆ ಮಾದರಿಯಲ್ಲಿ ಎಂಜಿ ರಸ್ತೆಯಲ್ಲೂ ಫುಡ್ ಕೋರ್ಟ್ ನಿರ್ಮಾಣ ಕಾಮಗಾರಿ ಬಹುತೇಕ ಮುಗಿದಿದ್ದು ಉದ್ಘಾಟನೆಗೆ ರೆಡಿಯಾಗಿದೆ. ನೆರಳು, ನೀರು, ಸುಸಜ್ಜಿತ ವ್ಯವಸ್ಥೆಯೊಂದಿಗೆ ಒಂದೇ ಕಡೆ ಜನರಿಗೆ ಅನುಕೂಲ ಆಗೋ ನಿಟ್ಟಿನ ಯೋಜನೆ ಉದ್ಘಾಟನೆಗೂ ಮುನ್ನವೇ ಐದು ಕಡೆ ಅಳವಡಿಸಿರೋ ಭಾವಚಿತ್ರ ಸಹಿತ ಬೋರ್ಡ್ಗೆ ಎರಡು ಕಡೆ ಕಲ್ಲೆಸೆದಿರೋ ಕಿಡಿಗೇಡಿಗಳು ಶಾಸಕ ಪ್ರೀತಂಗೌಡ ಭಾವಚಿತ್ರ ಹಾನಿಗೊಳಿಸಿದ್ದಾರೆ. ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕರು ಇದು ಅಭಿವೃದ್ಧಿ ಸಹಿಸದ ವಿಪಕ್ಷ ನಾಯಕರ ಹಾಗು ಕಾರ್ಯಕರ್ತರ ಕೃತ್ಯ ಎಂದು ಅಸಮದಾನ ಹೊರ ಹಾಕಿ ದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಸಿದ್ದಾರೆ.
ಇನ್ನು ಈ ಕೃತ್ಯದ ಬಗ್ಗೆ ಮಾತನಾಡಿದ ಬಿಜೆಪಿ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ಹಾಸನದಲ್ಲಿ ಪ್ರೀತಂಗೌಡರು ಶಾಸಕರಾದ ಬಳಿಕ ಅಭಿವೃದ್ಧಿ ಕಾರ್ಯಗಳು ಹೆಚ್ಚಾಗಿವೆ. ನಗರದಲ್ಲಿ ಎಲ್ಲೆಡೆ ಪ್ರಗತಿ ಆಗುತ್ತಿದೆ ಇದನ್ನು ಸಹಿಸದ ವಿರೋಧ ಪಕ್ಷದವರ ಕೃತ್ಯ ಇದು ಎನ್ನೋ ಅನುಮಾನ ಇದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇವೆ. ಯಾರೇ ಈ ಕೃತ್ಯ ಎಸಗಿದ್ದರೂ ಅವರ ವಿರುದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಕಲ್ಲಿನಿಂದ ಹೊಡೆದು ಶಾಸಕ ಪ್ರೀತಂಗೌಡ ಭಾವಚಿತ್ರ ಹಾನಿ
ಇದನ್ನೂ ಓದಿ: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪತ್ನಿ ಮೇಲೆ ಗುಂಡಿನ ದಾಳಿ; ಮಾಜಿ ಪತಿಯನ್ನು ಟೀಕಿಸಿ, ಹೇಡಿಗಳ ರಾಜ್ಯವೆಂದ ರೇಹಮ್ ಖಾನ್