ಕಾಂಗ್ರೆಸ್ಗೆ ತಾಕತ್ತಿದ್ದರೆ ಒಕ್ಕಲಿಗರು, ಲಿಂಗಾಯತರನ್ನು ಹೊರತುಪಡಿಸಿ ಸಿಎಂ ಮಾಡಲಿ; ರೇವಣ್ಣ ಸವಾಲ್
ಬಿಜೆಪಿ ಸರ್ಕಾರ ಬಂದಾಗಲೆಲ್ಲಾ ನಮ್ಮ ಜಿಲ್ಲೆಯ ಯೋಜನೆಗೆ ಅಡ್ಡಿ ಮಾಡಿದ್ದಾರೆ. ಈಗ ಹೊಸ ಸಿಎಂ ಏನು ಮಾಡುತ್ತಾರೋ ನೋಡೋಣ. ಅವರು ಇದನ್ನೇ ಮುಂದುವರೆಸಿದರೆ ಹೋರಾಟ ಅನಿವಾರ್ಯವಾಗಲಿದೆ.
ಹಾಸನ: ಯಡಿಯೂರಪ್ಪ ಸಿಎಂ ಆಗಿದ್ದ ಕಾಲದಲ್ಲಿ ಹಾಸನ ಜಿಲ್ಲೆಯ ಎಲ್ಲಾ ಯೋಜನೆಗೆ ತಡೆ ನೀಡಿದ್ದರು ಅಂತ ಮಾಜಿ ಸಚಿವ ರೇವಣ್ಣ ಹೇಳಿಕೆ ನೀಡಿದ್ದಾರೆ. ರಾಜಕೀಯ ದ್ವೇಷ ಮಾಡಲ್ಲ ಎಂದು ಯೋಜನೆ ತಡೆ ಹಿಡಿದರು. ಹಾಸನಕ್ಕೆ ಮಂಜೂರಾಗಿದ್ದ ತೋಟಗಾರಿಕೆ ಕಾಲೇಜು ತಡೆ ಹಿಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದ ರೇವಣ್ಣ, ಸಿಂದಗಿಯಲ್ಲಿ ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಾರೋ ಗೊತ್ತಿಲ್ಲ ಅಂತ ಹೇಳಿದರು.
ಬಿಜೆಪಿ ಸರ್ಕಾರ ಬಂದಾಗಲೆಲ್ಲಾ ನಮ್ಮ ಜಿಲ್ಲೆಯ ಯೋಜನೆಗೆ ಅಡ್ಡಿ ಮಾಡಿದ್ದಾರೆ. ಈಗ ಹೊಸ ಸಿಎಂ ಏನು ಮಾಡುತ್ತಾರೋ ನೋಡೋಣ. ಅವರು ಇದನ್ನೇ ಮುಂದುವರೆಸಿದರೆ ಹೋರಾಟ ಅನಿವಾರ್ಯವಾಗಲಿದೆ. ಈ ಸರ್ಕಾರ ಬಡ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಕೊಡುತ್ತಿಲ್ಲ. ಈ ಸರ್ಕಾರ ಪಾಪರ್ ಆಗಿದೆ ಎಂದು ಹೇಳಿ ಬಿಡಲಿ ಎಂದು ಕಿಡಿಕಾರಿದ ರೇವಣ್ಣ, ಸರ್ಕಾರಕ್ಕೆ ನಾಚಿಕೆಯಾಗಬೇಕು, ಗೌರವ ಇದ್ದರೆ ಹಳ್ಳಿ ಜನರ ಕ್ಷಮೆ ಕೇಳಿ ಎಂದು ಆಗ್ರಹಿಸಿದರು.
ಕೋಮುವಾದಿಗಳನ್ನ ದೂರ ಇಡಬೇಕು ಎಂದು ಒಂದು ರಾಷ್ಟ್ರೀಯ ಪಕ್ಷ ಹೇಳುತ್ತೆ. ಅದಕ್ಕಾಗಿಯೇ ಕುಮಾರಣ್ಣನ ಕಾಲು ಹಿಡಿದು ಅಧಿಕಾರ ಮಾಡೋಣ ಅಂದಿದ್ದರು. ಈಗ ಅದೇ ಕೋಮುವಾದಿಗಳ ಪಕ್ಷದವರನ್ನ ಕರೆತಂದು ಚುನಾವಣೆ ಮಾಡ್ತೀವಿ ಅಂತಾರೆ ಅಂತ ಕಾಂಗ್ರೆಸ್ ನಾಯಕರ ಬಗ್ಗೆ ಮಾಜಿ ಸಚಿವ ರೇವಣ್ಣ ಲೇವಡಿ ಮಾಡಿದರು.
ಅರವತ್ತು ವರ್ಷ ಕಾಂಗ್ರೆಸ್ ಈ ದೇಶ ಆಳಿದೆ. ಆದರೆ ಯಾರನ್ನ ಗುರುತಿಸಿದ್ದೀರಾ ಹೇಳಿ? ಎಂದು ರೇವಣ್ಣ ಪ್ರಶ್ನಿಸಿದ್ದಾರೆ. ಕೇವಲ ಅಲ್ಪಸಂಖ್ಯಾತರಿಂದ ಓಟ್ ಹಾಕಿಸಿಕೊಳ್ಳುತ್ತೀರಾ. ಅವರಿಗೆ ಅವಕಾಶ ನೀಡುವುದಿಲ್ಲ. ನಾವು ಸಿಂದಗಿಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೇಟ್ ಕೊಟ್ಟಿದ್ದೇವೆ. ಆ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಮತಗಳೆ 45 ಸಾವಿರ ಇದೆ. ಹಾಗಾಗಿ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ನೆಹರು ಕಾಂಗ್ರೆಸ್ ಈಗಿಲ್ಲ, ಇದು ಬರೀ ಡೋಂಗಿ ಕಾಂಗ್ರೆಸ್. ಬರೀ ಪ್ರಚಾರಕ್ಕೆ ಇವರು ಇರೋದು ಅಂತ ಕಾಂಗ್ರೆಸ್ ನಾಯಕರ ವಿರುದ್ಧ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ಗೆ ತಾಕತ್ತಿದ್ದರೆ ಒಕ್ಕಲಿಗರು, ಲಿಂಗಾಯತರನ್ನು ಹೊರತುಪಡಿಸಿ ಸಿಎಂ ಮಾಡಲಿ. ಹಿಂದುಳಿದ ವರ್ಗದವರನ್ನ ಸಿಎಂ ಮಾಡುತ್ತೀವಿ ಅಂತಾ ಘೋಷಣೆ ಮಾಡಲಿ ನೋಡೋಣ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ.
ಎಲ್ಲಾ ಸಮುದಾಯದಲ್ಲೂ ಬಡವರಿದ್ದಾರೆ. ಹಳ್ಳಿ ಜನರನ್ನ ನೋಡಿದರೆ ಗೊತ್ತಾಗುತ್ತದೆ. ಬ್ರಾಹ್ಮಣರು ತೋಟ ಮಾರಿಕೊಂಡು ಬೆಂಗಳೂರಲ್ಲಿ ಗಂಟೆ ಬಾರಿಸುತ್ತಿದ್ದಾರೆ. ಆರತಿ ತಟ್ಟೆಗೆ ಹಣ ಬಿದ್ದರೆ ಜೀವನ ನಡೆಸುಬಹುದು. ಎಲ್ಲಾ ವರ್ಗದ ಬಡವರ ಕಡೆಗೂ ಕಣ್ಣು ಹಾಯಿಸಬೇಕಿದೆ. ಬಡವರನ್ನ ಗುರುತಿಸಿ ಅವರಿಗೆ ಯಾವ ಸೌಲಭ್ಯ ಕೊಡಬೇಕು. ಓಟಿಗಾಗಿ ಒಂದು ಸಮಾಜಕ್ಕೆ ಗುರಿ ಇಡಬೇಡಿ ಅಂತ ಮಾಜಿ ಸಚಿವ ರೇವಣ್ಣ ಹೇಳಿದರು.
ಇದನ್ನೂ ಓದಿ
‘ಜಗತ್ತನ್ನು ಬದಲಾಯಿಸಬೇಕಾದರೆ ನಾನು ನನ್ನನ್ನು ಬದಲಾಯಿಸಿಕೊಳ್ಳಬೇಕು’; ವಿಚ್ಛೇದನದ ನಂತರ ಸಮಂತಾ ಮೊದಲ ಮಾತು
ಯಾರ ವಿರುದ್ಧ ನಿಮ್ಮ ಪ್ರತಿಭಟನೆ: ಕೃಷಿ ಕಾಯ್ದೆ ವಿರೋಧಿ ಪ್ರತಿಭಟನೆಯ ಔಚಿತ್ಯವನ್ನೇ ಪ್ರಶ್ನಿಸಿದ ಸುಪ್ರೀಂಕೋರ್ಟ್