‘ಜಗತ್ತನ್ನು ಬದಲಾಯಿಸಬೇಕಾದರೆ ನಾನು ನನ್ನನ್ನು ಬದಲಾಯಿಸಿಕೊಳ್ಳಬೇಕು’; ವಿಚ್ಛೇದನದ ನಂತರ ಸಮಂತಾ ಮೊದಲ ಮಾತು

‘ಜಗತ್ತನ್ನು ಬದಲಾಯಿಸಬೇಕಾದರೆ ನಾನು ನನ್ನನ್ನು ಬದಲಾಯಿಸಿಕೊಳ್ಳಬೇಕು’; ವಿಚ್ಛೇದನದ ನಂತರ ಸಮಂತಾ ಮೊದಲ ಮಾತು
ಸಮಂತಾ

ಅಕ್ಟೋಬರ್​ 3 ಸಮಂತಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಹೆಸರು ಬದಲಿಸಿದ್ದಾರೆ. ಎಸ್ ಎಂದು ಇದ್ದ ಹೆಸರನ್ನು ಸಮಂತಾ ಎಂದು ಮಾಡಿದ್ದಾರೆ.

TV9kannada Web Team

| Edited By: Rajesh Duggumane

Oct 04, 2021 | 4:10 PM

ಸಮಂತಾ ಅಕ್ಕಿನೇನಿ ಅವರು ನಾಗ ಚೈತನ್ಯ ಜತೆ ವಿಚ್ಛೇದನ ಪಡೆದ ವಿಚಾರವನ್ನು ಇತ್ತೀಚೆಗೆ ಸೋಶಿಯಲ್​ ಮೀಡಿಯಾದಲ್ಲಿ ಅಧಿಕೃತ ಮಾಡಿದ್ದರು. ಈ ವಿಚಾರ ಕೇಳಿ ಅಭಿಮಾನಿಗಳು ಹಾಗೂ ಸಾಕಷ್ಟು ಸೆಲೆಬ್ರಿಟಿಗಳು ಬೇಸರ ಹೊರಹಾಕಿದ್ದರು. ದಾಂಪತ್ಯ ಮುರಿದು ಕೊಂಡಿದ್ದೇಕೆ ಎನ್ನುವ ಬಗ್ಗೆ ಯಾರಿಂದಲೂ ಸ್ಪಷ್ಟನೆ ಸಿಕ್ಕಿಲ್ಲ. ಹೀಗಿರುವಾಗಲೇ ಸಮಂತಾ ಹೊಸ ಪೋಸ್ಟ್​ ಹಾಕಿದ್ದಾರೆ. ವಿಚ್ಛೇದನದ ನಂತರ ಅವರು ಹಾಕುತ್ತಿರುವ ಮೊದಲ ಪೋಸ್ಟ್ ಇದಾಗಿದೆ.

ಸಮಂತಾ ವಿಮಾನದಲ್ಲಿ ಎಲ್ಲಿಯೋ ತೆರಳಿದ್ದಾರೆ. ವಿಮಾನದ ಕಿಟಕಿಯಿಂದ ಹೊರಗಿನ ಪ್ರಪಂಚವನ್ನು ಅವರು ನೋಡುತ್ತಿದ್ದಾರೆ. ರಾತ್ರಿಯಾಗಿದ್ದರಿಂದ ಇಡೀ ನಗರ ಬೆಳಕಿನಿಂದ ಹೊಳೆಯುತ್ತಿದೆ. ಈ ಪೋಸ್ಟ್​ಗೆ ಅವರು ಇಂಗ್ಲಿಷ್​ನ ಗೀತೆಯನ್ನು ಹಾಕಿದ್ದಾರೆ. ‘ಜಗತ್ತನ್ನು ಬದಲಾಯಿಸಬೇಕಾದರೆ ನಾನು ನನ್ನನ್ನು ಬದಲಾಯಿಸಿಕೊಳ್ಳಬೇಕು..’ ಎಂಬ ಸಾಲಿನೊಂದಿಗೆ ಈ ಹಾಡು ಪ್ರಾರಂಭವಾಗುತ್ತದೆ.

ವಿಚ್ಛೇದನಕ್ಕೂ ತಿಂಗಳು ಮೊದಲು ಸಮಂತಾ ಅವರು ಅಕ್ಕಿನೇನಿ ಸರ್​ ನೇಮ್​ ಅನ್ನು ಸೋಶಿಯಲ್​ ಮೀಡಿಯಾ ಖಾತೆಯಿಂದ ತೆಗೆದು ಹಾಕಿದ್ದರು. ಅಲ್ಲದೆ ‘ಎಸ್​’ ಎಂದಷ್ಟೇ ಇಟ್ಟಿದ್ದರು. ಈ ಮೂಲಕ ವಿಚ್ಛೇದನ ಸುದ್ದಿ ಹುಟ್ಟಿಕೊಳ್ಳುವಂತೆ ಮಾಡಿದ್ದರು. ಈಗ ವಿಚ್ಛೇದನ ಪಡೆದ ಮರುದಿನ ಸಮಂತಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಹೆಸರು ಬದಲಿಸಿದ್ದಾರೆ.

ಅಕ್ಟೋಬರ್​ 3 ಸಮಂತಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಹೆಸರು ಬದಲಿಸಿದ್ದಾರೆ. ಎಸ್ ಎಂದು ಇದ್ದ ಹೆಸರನ್ನು ಸಮಂತಾ ಎಂದು ಮಾಡಿದ್ದಾರೆ. ಮದುವೆಗೂ ಮೊದಲು ಸೋಶಿಯಲ್​ ಮೀಡಿಯಾದಲ್ಲಿ ಅವರ ಹೆಸರು ಸಮಂತಾ ರುತ್​ ಪ್ರಭು ಎಂಬುದಾಗಿ ಇತ್ತು. ಈಗ ಅವರು ಆ ಹೆಸರಿಗೆ ಮರಳಿಲ್ಲ.

samantha

ಸಮಂತಾ ಟ್ವಿಟರ್​ ಖಾತೆ

ಅಕ್ಟೋಬರ್​ 2ರಂದು ಈ ಜೋಡಿ ವಿಚ್ಛೇದನದ ಬಗ್ಗೆ ಘೋಷಣೆ ಮಾಡಿತ್ತು. ‘ಸಾಕಷ್ಟು ಆಲೋಚನೆ ಮಾಡಿದ ನಂತರ ನಾವಿಬ್ಬರು ಪತಿ-ಪತ್ನಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ದಶಕಗಳ ಕಾಲ ಸ್ನೇಹಿತರಾಗಿ ಇದ್ದಿದ್ದಕ್ಕೆ ನಾವಿಬ್ಬರೂ ಅದೃಷ್ಟ ಮಾಡಿದ್ದೆವು. ಆ ಸ್ನೇಹವೇ ನಮ್ಮ ಸಂಬಂಧದ ಶಕ್ತಿಯಾಗಿತ್ತು. ಯಾವಾಗಲೂ ನಮ್ಮ ನಡುವೆ ವಿಶೇಷ ಬಂಧ ಇರಲಿದೆ ಎಂದು ನಂಬಿದ್ದೇವೆ. ಈ ಕಷ್ಟದ ಸಂದರ್ಭದಲ್ಲಿ ನಮಗೆ ಬೆಂಬಲ ನೀಡಿ ಅಂತ ಅಭಿಮಾನಿಗಳು, ಮಾಧ್ಯಮದವರು ಮತ್ತು ಹಿತೈಷಿಗಳಲ್ಲಿ ಮನವಿ ಮಾಡುತ್ತೇವೆ. ಜೀವನದಲ್ಲಿ ಮುಂದಕ್ಕೆ ಸಾಗಲು ನಮಗೆ ಬೇಕಾಗಿರುವ ಖಾಸಗಿತನಕ್ಕೆ ಅವಕಾಶ ಮಾಡಿಕೊಡಿ ಅಂತ ಕೇಳಿಕೊಳ್ಳುತ್ತೇವೆ’ ಎಂದು ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದರು.

ಇದನ್ನೂ ಓದಿ: ವಿಚ್ಛೇದನದ ಮರುದಿನವೇ ಹೆಸರು ಬದಲಿಸಿಕೊಂಡ ನಟಿ ಸಮಂತಾ

Follow us on

Related Stories

Most Read Stories

Click on your DTH Provider to Add TV9 Kannada