ವಿಚ್ಛೇದನದ ಮರುದಿನವೇ ಹೆಸರು ಬದಲಿಸಿಕೊಂಡ ನಟಿ ಸಮಂತಾ

2017ರ ಅ.6ರಂದು ಹಿಂದೂ ಸಂಪ್ರದಾಯದ ಪ್ರಕಾರ ಇವರಿಬ್ಬರ ಮದುವೆ ನಡೆದಿತ್ತು. ಅ.7ರಂದು ಕ್ರೈಸ್ತ ಸಂಪ್ರದಾಯದಂತೆ ಮದುವೆ ಶಾಸ್ತ್ರಗಳನ್ನು ನೆರವೇರಿಸಲಾಗಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಈ ಜೋಡಿ ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿತ್ತು.

ವಿಚ್ಛೇದನದ ಮರುದಿನವೇ ಹೆಸರು ಬದಲಿಸಿಕೊಂಡ ನಟಿ ಸಮಂತಾ
ಸಮಂತಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Oct 03, 2021 | 9:02 PM

ವಿಚ್ಛೇದನಕ್ಕೂ ತಿಂಗಳು ಮೊದಲು ಸಮಂತಾ ಅವರು ಅಕ್ಕಿನೇನಿ ಸರ್​ ನೇಮ್​ ಅನ್ನು ಸೋಶಿಯಲ್​ ಮೀಡಿಯಾ ಖಾತೆಯಿಂದ ತೆಗೆದು ಹಾಕಿದ್ದರು. ಅಲ್ಲದೆ ‘ಎಸ್​’ ಎಂದಷ್ಟೇ ಇಟ್ಟಿದ್ದರು. ಈ ಮೂಲಕ ವಿಚ್ಛೇದನ ಸುದ್ದಿ ಹುಟ್ಟಿಕೊಳ್ಳುವಂತೆ ಮಾಡಿದ್ದರು. ಈಗ ವಿಚ್ಛೇದನ ಪಡೆದ ಮರುದಿನ ಸಮಂತಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಹೆಸರು ಬದಲಿಸಿದ್ದಾರೆ.

ಇಂದು (ಅಕ್ಟೋಬರ್​ 3) ಸಮಂತಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಹೆಸರು ಬದಲಿಸಿದ್ದಾರೆ. ಎಸ್ ಎಂದು ಇದ್ದ ಹೆಸರನ್ನು ಸಮಂತಾ ಎಂದು ಮಾಡಿದ್ದಾರೆ. ಮದುವೆಗೂ ಮೊದಲು ಸೋಶಿಯಲ್​ ಮೀಡಿಯಾದಲ್ಲಿ ಅವರ ಹೆಸರು ಸಮಂತಾ ರುತ್​ ಪ್ರಭು ಎಂಬುದಾಗಿ ಇತ್ತು. ಈಗ ಅವರು ಆ ಹೆಸರಿಗೆ ಮರಳಿಲ್ಲ.

‘ಅಕ್ಟೋಬರ್​ 2ರಂದು ಈ ಜೋಡಿ ವಿಚ್ಛೇದನದ ಬಗ್ಗೆ ಘೋಷಣೆ ಮಾಡಿತ್ತು. ‘ಸಾಕಷ್ಟು ಆಲೋಚನೆ ಮಾಡಿದ ನಂತರ ನಾವಿಬ್ಬರು ಪತಿ-ಪತ್ನಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ದಶಕಗಳ ಕಾಲ ಸ್ನೇಹಿತರಾಗಿ ಇದ್ದಿದ್ದಕ್ಕೆ ನಾವಿಬ್ಬರೂ ಅದೃಷ್ಟ ಮಾಡಿದ್ದೆವು. ಆ ಸ್ನೇಹವೇ ನಮ್ಮ ಸಂಬಂಧದ ಶಕ್ತಿಯಾಗಿತ್ತು. ಯಾವಾಗಲೂ ನಮ್ಮ ನಡುವೆ ವಿಶೇಷ ಬಂಧ ಇರಲಿದೆ ಎಂದು ನಂಬಿದ್ದೇವೆ. ಈ ಕಷ್ಟದ ಸಂದರ್ಭದಲ್ಲಿ ನಮಗೆ ಬೆಂಬಲ ನೀಡಿ ಅಂತ ಅಭಿಮಾನಿಗಳು, ಮಾಧ್ಯಮದವರು ಮತ್ತು ಹಿತೈಷಿಗಳಲ್ಲಿ ಮನವಿ ಮಾಡುತ್ತೇವೆ. ಜೀವನದಲ್ಲಿ ಮುಂದಕ್ಕೆ ಸಾಗಲು ನಮಗೆ ಬೇಕಾಗಿರುವ ಖಾಸಗಿತನಕ್ಕೆ ಅವಕಾಶ ಮಾಡಿಕೊಡಿ ಅಂತ ಕೇಳಿಕೊಳ್ಳುತ್ತೇವೆ’ ಎಂದು ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದರು.

2017ರ ಅ.6ರಂದು ಹಿಂದೂ ಸಂಪ್ರದಾಯದ ಪ್ರಕಾರ ಇವರಿಬ್ಬರ ಮದುವೆ ನಡೆದಿತ್ತು. ಅ.7ರಂದು ಕ್ರೈಸ್ತ ಸಂಪ್ರದಾಯದಂತೆ ಮದುವೆ ಶಾಸ್ತ್ರಗಳನ್ನು ನೆರವೇರಿಸಲಾಗಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಈ ಜೋಡಿ ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿತ್ತು. ಅಷ್ಟರಲ್ಲಾಗಲೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇದು ಅಭಿಮಾನಿಗಳ ಪಾಲಿಗೆ ತೀವ್ರ ನಿರಾಸೆ ಉಂಟು ಮಾಡಿದೆ.

ಇದನ್ನೂ ಓದಿ: ಸಮಂತಾಗೆ ಸಿಗುತ್ತಿರುವ ಜೀವನಾಂಶದ ಮೊತ್ತದ ಬಗ್ಗೆ ಹೊರಬಿತ್ತು ಅಚ್ಚರಿಯ ಮಾಹಿತಿ

ಮೋಸಗಾರರು ಏಳಿಗೆಯಾಗಲ್ಲ ಎಂದ ನಟ ಸಿದ್ದಾರ್ಥ್‌; ಸಮಂತಾರನ್ನು ನೆನಪು ಮಾಡಿಕೊಂಡ ನೆಟ್ಟಿಗರು

Published On - 8:37 pm, Sun, 3 October 21