AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮಂತಾಗೆ ಸಿಗುತ್ತಿರುವ ಜೀವನಾಂಶದ ಮೊತ್ತದ ಬಗ್ಗೆ ಹೊರಬಿತ್ತು ಅಚ್ಚರಿಯ ಮಾಹಿತಿ

 ವಿಚ್ಛೇದನದ ಪಡೆದ ನಂತರ ಹೆಂಡತಿಗೆ ಮುಂದಿನ ಜೀವನ ನಿರ್ವಹಣೆಗೆ ಪತಿ ಜೀವನಾಂಶ ನೀಡುತ್ತಾನೆ. ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನದ ನಂತರ ಸ್ಯಾಮ್​ಗೆ ಬರೋಬ್ಬರಿ 200 ಕೋಟಿ ಜೀವನಾಂಶ ಸಿಗಲಿದೆ ಎಂದು ವರದಿ ಆಗಿತ್ತು.

ಸಮಂತಾಗೆ ಸಿಗುತ್ತಿರುವ ಜೀವನಾಂಶದ ಮೊತ್ತದ ಬಗ್ಗೆ ಹೊರಬಿತ್ತು ಅಚ್ಚರಿಯ ಮಾಹಿತಿ
ನಾಗ ಚೈತನ್ಯ - ಸಮಂತಾ
TV9 Web
| Edited By: |

Updated on: Oct 03, 2021 | 2:20 PM

Share

ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನದ ನಂತರ ಸಾಕಷ್ಟು ವರದಿಗಳು ಹರಿದಾಡುತ್ತಲೇ ಇವೆ. ಇವರ ದಾಂಪತ್ಯ ಅಂತ್ಯವಾಗಲು ಕಾರಣವಾದ ಅಂಶಗಳು ಏನು ಎಂಬುದನ್ನು ಅಭಿಮಾನಿಗಳು ಪಟ್ಟಿ ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ಅವರಿಗೆ ಸಿಗಬೇಕಿರುವ ಜೀವನಾಂಶದ ಬಗ್ಗೆ ಅಚ್ಚರಿಯ ಮಾಹಿತಿಯೊಂದು ಹೊರ ಬಿದ್ದಿದೆ. ಈ ಬಗ್ಗೆ ಸಮಂತಾ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಎಲ್ಲರೂ ಭೇಷ್​ ಎನ್ನುತ್ತಿದ್ದಾರೆ.

ವಿಚ್ಛೇದನದ ಪಡೆದ ನಂತರ ಹೆಂಡತಿಗೆ ಮುಂದಿನ ಜೀವನ ನಿರ್ವಹಣೆಗೆ ಪತಿ ಜೀವನಾಂಶ ನೀಡುತ್ತಾನೆ. ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನದ ನಂತರ ಸ್ಯಾಮ್​ಗೆ ಬರೋಬ್ಬರಿ 200 ಕೋಟಿ ಜೀವನಾಂಶ ಸಿಗಲಿದೆ ಎಂದು ವರದಿ ಆಗಿತ್ತು. ಆದರೆ, ಸಮಂತಾ ಅವರು ಸಾಕಷ್ಟು ಆಲೋಚನೆ ಮಾಡಿ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಅಕ್ಕಿನೇನಿ ಕುಟುಂಬದ ಕಡೆಯಿಂದ ಒಂದು ರೂಪಾಯಿಯನ್ನು ಸ್ವೀಕರಿಸದಿರಲು ಅವರು ನಿರ್ಧರಿಸಿದ್ದಾರೆ.

ಸಮಂತಾ ಬಹುಬೇಡಿಕೆಯ ನಟಿ ಆಗಿರುವುದರಿಂದ ವಿಚ್ಛೇದನದ ಬಳಿಕ ಜೀವನ ನಿರ್ವಹಣೆ ಕಷ್ಟವಾಗುವುದಿಲ್ಲ. ಸಿನಿಮಾ ಮಾತ್ರವಲ್ಲದೇ ವೆಬ್​ ಸಿರೀಸ್​ಗಳಿಂದಲೂ ಅವರಿಗೆ ಸಿಕ್ಕಾಪಟ್ಟೆ ಆಫರ್​ ಬರುತ್ತಿದೆ. ಈ ವರ್ಷ ಬಿಡುಗಡೆಯಾದ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್ ಸರಣಿ ಯಶಸ್ಸಿನ ನಂತರ ಸಮಂತಾ ಇಮೇಜ್​ ಬದಲಾಗಿದೆ. ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವುದರಿಂದ ವೈಯಕ್ತಿಕವಾಗಿ ಅವರು ಕೋಟ್ಯಾಂತರ ರೂಪಾಯಿ ಆಸ್ತಿ ಹೊಂದಿದ್ದಾರೆ. ಈ ಕಾರಣಕ್ಕೆ ಅವರು ಜೀವನಾಂಶ ಪಡೆಯುತ್ತಿಲ್ಲ ಎನ್ನಲಾಗಿದೆ.

‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ನಲ್ಲಿ ಸಮಂತಾ ಸಿಕ್ಕಾಪಟ್ಟೆ ಬೋಲ್ಡ್​ ಆಗಿ ನಟಿಸಿದ್ದರು. ಕೆಲವು ಇಂಟಿಮೇಟ್​ ದೃಶ್ಯಗಳಲ್ಲೂ ಅವರು ಕಾಣಿಸಿಕೊಂಡಿದ್ದರು. ಅಂತಹ ಇನ್ನೂ ಕೆಲವು ದೃಶ್ಯಗಳಿಗೆ ರಿಲೀಸ್​ಗೂ ಮೊದಲೇ ನಿರ್ದೇಶಕರು ಕತ್ತರಿ ಹಾಕಿದರು ಎಂಬ ಮಾತಿದೆ. ಅವರು ಇಂಥ ಪಾತ್ರ ಮಾಡಿದ್ದು ಕೂಡ ಸಂಸಾರ ಹಾಳಾಗಲು ಕಾರಣ ಎನ್ನುವ ಮಾತಿದೆ. ಆದರೆ, ಈ ಬಗ್ಗೆ ಯಾರೂ ಮೌನ ಮುರಿದಿಲ್ಲ.

ಇದನ್ನೂ ಓದಿ: ‘ಮಹಿಳೆಯರನ್ನು ಬಟ್ಟೆಯಂತೆ ಬದಲಾಯಿಸುವವರ ಮೇಲೆ ದಯೆ ತೋರಬೇಡಿ’; ನಾಗ ಚೈತನ್ಯಗೆ ಕಂಗನಾ ಟಾಂಟ್​ 

ಸಮಂತಾ ಮತ್ತು ನಾಗ ಚೈತನ್ಯ ಡಿವೋರ್ಸ್​ಗೆ ಇದುವೇ ಕಾರಣ? ಅಕ್ಕಿನೇನಿ ಕುಟುಂಬದಲ್ಲಿ ಅಸಲಿಗೆ ಆಗಿದ್ದೇನು?