AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ನರಕದಲ್ಲಿ ನಿಶ್ಚಯವಾಗಿರುತ್ತದೆ!; ಸಮಂತಾ- ನಾಗಚೈತನ್ಯ ಡೈವೋರ್ಸ್ ಬಗ್ಗೆ ರಾಮಗೋಪಾಲ್ ವರ್ಮ ಶಾಕಿಂಗ್ ಹೇಳಿಕೆ

Samantha- Naga Chaitanya Divorce: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬುದೆಲ್ಲ ಸುಳ್ಳು. ಮದುವೆ ನರಕದಲ್ಲಿ ನಿಶ್ಚಯವಾಗಿರುತ್ತದೆ, ವಿಚ್ಛೇದನ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ. ಮದುವೆಯೆಂಬ ರೋಗಕ್ಕೆ ವಿಚ್ಛೇದನವೇ ಔಷಧಿ ಎಂದು ರಾಮ್ ಗೋಪಾಲ್ ವರ್ಮ ಹೇಳಿದ್ದಾರೆ.

ಮದುವೆ ನರಕದಲ್ಲಿ ನಿಶ್ಚಯವಾಗಿರುತ್ತದೆ!; ಸಮಂತಾ- ನಾಗಚೈತನ್ಯ ಡೈವೋರ್ಸ್ ಬಗ್ಗೆ ರಾಮಗೋಪಾಲ್ ವರ್ಮ ಶಾಕಿಂಗ್ ಹೇಳಿಕೆ
ಸಮಂತಾ, ನಾಗ ಚೈತನ್ಯ (ಸಂಗ್ರಹ ಚಿತ್ರ)
TV9 Web
| Edited By: |

Updated on:Oct 04, 2021 | 4:18 PM

Share

ಟಾಲಿವುಡ್​ನ ತಾರಾ ಜೋಡಿ ಸಮಂತಾ- ನಾಗಚೈತನ್ಯ ತಮ್ಮ 4 ವರ್ಷದ ವೈವಾಹಿಕ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ಪ್ರೇಮಿಗಳಾಗಿದ್ದ ಇವರಿಬ್ಬರು 2017ರಲ್ಲಿ ಮದುವೆಯಾಗಿದ್ದರು. ಆದರೆ, 2 ದಿನಗಳ ಹಿಂದೆ ಪರಸ್ಪರ ಒಪ್ಪಿಗೆ ಮೇರೆ ಡೈವೋರ್ಸ್ ಪಡೆಯುತ್ತಿರುವುದಾಗಿ ಸೋಷಿಯಲ್ ಮೀಡಿಯಾ ಮೂಲಕ ಘೋಷಿಸಿದ್ದರು. ಸಮಂತಾ- ನಾಗಚೈತನ್ಯ ವಿಚ್ಛೇದನ ಪಡೆಯುತ್ತಿರುವ ವಿಷಯ ಕೇಳಿ ಅವರ ಅಭಿಮಾನಿಗಳಿಗೆ ಬಹಳ ಶಾಕ್ ಆಗಿದೆ. ಈ ನಿರ್ಧಾರದಿಂದ ತಮಗೂ ಬೇಸರವಾಗಿರುವುದಾಗಿ ನಾಗಚೈತನ್ಯನ ತಂದೆ ಅಕ್ಕಿನೇನಿ ನಾಗಾರ್ಜುನ ಹೇಳಿಕೊಂಡಿದ್ದರು. ಆದರೆ, ಈ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮ, ‘ಮದುವೆಗಿಂತಲೂ ವಿಚ್ಛೇದನ ಪಡೆಯುವಾಗ ಹೆಚ್ಚು ಸಂಭ್ರಮಿಸಬೇಕು. ವಿಚ್ಛೇದನ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ’ ಎಂದಿದ್ದಾರೆ.

ಸಮಂತಾ- ನಾಗಚೈತನ್ಯ ದಂಪತಿಯ ವಿಚ್ಛೇದನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಮ್ ಗೋಪಾಲ್ ವರ್ಮ, ‘ಮದುವೆಗಿಂತಲೂ ವಿಚ್ಛೇದನದ ಬಗ್ಗೆ ನಮಗೆ ಹೆಚ್ಚು ಖುಷಿ ಇರಬೇಕು. ಏಕೆಂದರೆ, ಮದುವೆಯಲ್ಲಿ ಮುಂದಿನ ಜೀವನ ಹೇಗಿರುತ್ತದೆ ಎಂಬ ಸ್ಪಷ್ಟ ಕಲ್ಪನೆ ಇರುವುದಿಲ್ಲ. ಆದರೆ, ಡೈವೋರ್ಸ್ ಪಡೆದ ಮೇಲೆ ನೀವು ಸಂಪೂರ್ಣವಾಗಿ ಸ್ವತಂತ್ರರಾಗುತ್ತೀರಿ, ಮದುವೆಯಾದಾಗ ನೀವೇನು ಅನುಭವಿಸಿರುತ್ತೀರೋ ಅದರಿಂದ ಹೊರಬರುತ್ತೀರಿ. ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬುದೆಲ್ಲ ಸುಳ್ಳು. ಮದುವೆ ನರಕದಲ್ಲಿ ನಿಶ್ಚಯವಾಗಿರುತ್ತದೆ, ವಿಚ್ಛೇದನ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ. ಮದುವೆಯೆಂಬ ರೋಗಕ್ಕೆ ವಿಚ್ಛೇದನವೇ ಔಷಧಿ’ ಎಂದು ರಾಮ್ ಗೋಪಾಲ್ ವರ್ಮ ಹೇಳಿದ್ದಾರೆ.

‘ಎಷ್ಟೋ ಮದುವೆಗಳು ಆ ಮದುವೆಗಾಗಿ ಅವರು ನಡೆಸಿದ ತಯಾರಿ, ಮಾಡುವ ಸಾಂಪ್ರದಾಯಿಕ ಕಾರ್ಯಕ್ರಮಗಳಷ್ಟು ದಿನವೂ ಉಳಿಯುವುದಿಲ್ಲ. ನಾಲ್ಕೈದು ದಿನ ಸಂಭ್ರಮದಿಂದ ಏನೇನೋ ಶಾಸ್ತ್ರಗಳನ್ನು ಇಟ್ಟುಕೊಂಡು ಮದುವೆಯಾಗುವ ನಾವು ಡೈವೋರ್ಸ್ ಪಡೆಯುವಾಗ ಕೂಡ ಸಂಗೀತ್ ಕಾರ್ಯಕ್ರಮ ಇಡಬೇಕು. ಮದುವೆಯೆಂಬ ಬಂಧನದಿಂದ ಮುಕ್ತರಾಗುವ ಗಂಡು- ಹೆಣ್ಣು ಡ್ಯಾನ್ಸ್ ಮಾಡಿ, ಎಂಜಾಯ್ ಮಾಡಿ ಸ್ವತಂತ್ರರಾಗಬೇಕು’ ಎಂದು ಕೂಡ ರಾಮ್ ಗೋಪಾಲ್ ವರ್ಮ ಹೇಳಿದ್ದಾರೆ.

ಅಂದಹಾಗೆ, ನಾಗಚೈತನ್ಯ ಮತ್ತು ಸಮಂತಾ ಮದುವೆಯಾದ ನಾಲ್ಕು ವರ್ಷಗಳ ನಂತರ ಡೈವೋರ್ಸ್ ಪಡೆದು ದೂರವಾಗುತ್ತಿದ್ದಾರೆ. ಇತ್ತೀಚೆಗೆ ತಮ್ಮ ಸೋಷಿಯಲ್ ಮೀಡಿಯಾ ಅಕೌಂಡ್​ನಲ್ಲಿ ತಮ್ಮ ಹೆಸರಿನ ಮುಂದಿದ್ದ ಅಕ್ಕಿನೇನಿ ಹೆಸರನ್ನು ತೆಗೆದುಹಾಕಿದ್ದ ಸಮಂತಾ ಇದೀಗ ಅಧಿಕೃತವಾಗಿ ತಮ್ಮ ವಿಚ್ಛೇದನದ ಬಗ್ಗೆ ಘೋಷಿಸಿಕೊಂಡಿದ್ದಾರೆ.

2 ದಿನಗಳ ಹಿಂದೆ ಸೋಷಿಯಲ್ ಮೀಡಿಯಾ ಮೂಲಕ ತಾವು ದೂರವಾಗುತ್ತಿರುವ ವಿಷಯವನ್ನು ಅಧಿಕೃತವಾಗಿ ತಿಳಿಸಿದ್ದ ಸಮಂತಾ ಹಾಗೂ ನಾಗಚೈತನ್ಯ, ನಾವಿಬ್ಬರೂ ಬಹಳ ಯೋಚನೆ ಮಾಡಿ ದೂರವಾಗಲು ನಿರ್ಧರಿಸಿದ್ದೇವೆ. ದಶಕಗಳ ಕಾಲ ನಾವಿಬ್ಬರೂ ಸ್ನೇಹಿತರಾಗಿದ್ದುದು ನಮ್ಮ ಅದೃಷ್ಟ. ಆ ಸಂಬಂಧ ಮುಂದೆಯೂ ಗಟ್ಟಿಯಾಗಿ ಮುಂದುವರಿಯಲಿದೆ ಎಂದು ಭಾವಿಸುತ್ತೇವೆ. ನಮ್ಮ ಕಷ್ಟದ ಸಮಯದಲ್ಲಿ ಸಹಕಾರ ನೀಡಿದ ಮತ್ತು ನಮ್ಮ ಖಾಸಗಿತನವನ್ನು ಗೌರವಿಸಿದ ಸ್ನೇಹಿತರು, ಅಭಿಮಾನಿಗಳು, ಮಾಧ್ಯಮ ಮಿತ್ರರಿಗೆ ಧನ್ಯವಾದಗಳು ಎಂದು ಬರೆದು ಇಬ್ಬರೂ ಪೋಸ್ಟ್ ಮಾಡಿದ್ದರು.

ಇದನ್ನೂ ಓದಿ: ‘ಜಗತ್ತನ್ನು ಬದಲಾಯಿಸಬೇಕಾದರೆ ನಾನು ನನ್ನನ್ನು ಬದಲಾಯಿಸಿಕೊಳ್ಳಬೇಕು’; ವಿಚ್ಛೇದನದ ನಂತರ ಸಮಂತಾ ಮೊದಲ ಮಾತು

ವಿಚ್ಛೇದನದ ಮರುದಿನವೇ ಹೆಸರು ಬದಲಿಸಿಕೊಂಡ ನಟಿ ಸಮಂತಾ

Published On - 4:15 pm, Mon, 4 October 21

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!