ಇಡೀ ರಾಜ್ಯದಲ್ಲಿ ಏಕೈಕ ಎಂಪಿ ಗೆಲ್ಲಿಸಿಕೊಂಡವರು ರೇವಣ್ಣ: ಬಿಜೆಪಿ ಶಾಸಕ ಪ್ರೀತಂಗೌಡ ಬಹುಪರಾಕ್

ರೇವಣ್ಣ ಅವರು ಜಿಲ್ಲೆಯಲ್ಲಿ ಅವರದ್ದೇ ಆದ ಶಕ್ತಿ ಇಟ್ಟುಕೊಂಡಿದ್ದಾರೆ. ಇಡೀ ರಾಜ್ಯದಲ್ಲಿ ಏಕೈಕ ಎಂಪಿ ಗೆಲ್ಲಿಸಿಕೊಂಡವರು ರೇವಣ್ಣ, ಅವರು ಒಂದು ಶಕ್ತಿ, ಅವರಿಂದಲೇ ಜೆಡಿಎಸ್ ಅಭ್ಯರ್ಥಿ ಗೆಲ್ಲುತ್ತಿದ್ದರು ಎಂದು ಬಿಜೆಪಿ ಶಾಸಕ ಪ್ರೀತಂಗೌಡ ಹೇಳಿದ್ದಾರೆ.

ಇಡೀ ರಾಜ್ಯದಲ್ಲಿ ಏಕೈಕ ಎಂಪಿ ಗೆಲ್ಲಿಸಿಕೊಂಡವರು ರೇವಣ್ಣ: ಬಿಜೆಪಿ ಶಾಸಕ ಪ್ರೀತಂಗೌಡ ಬಹುಪರಾಕ್
ಪ್ರೀತಂಗೌಡ, ರೇವಣ್ಣ
Follow us
ಕಿರಣ್ ಹನುಮಂತ್​ ಮಾದಾರ್
|

Updated on:Apr 13, 2023 | 1:02 PM

ಹಾಸನ: ‘ಯಾರೇ ಅಭ್ಯರ್ಥಿಯಾದರೂ ಒಂದು ಲಕ್ಷ ಓಟು ಪಡೆದುಕೊಳ್ಳಬೇಕು ಎಂದು ಕಾರ್ಯಕರ್ತರು ನಿರ್ಧರಿಸಿದ್ದಾರೆ ಎಂದು ಬಜೆಪಿ ಶಾಸಕ ಪ್ರೀತಂಗೌಡ(Preethamgowda) ಹೇಳಿದರು.  ರೇವಣ್ಣ(H. D. Revanna) ಸ್ಪರ್ಧಿಸಿದರೆ ಐವತ್ತು ಸಾವಿರ ಮತಗಳ ಲೀಡ್‌ನಿಂದ ಗೆಲ್ಲುತ್ತೇನೆ ಎಂಬ ಸವಾಲು ವಿಚಾರವಾಗಿ ಮಾತನಾಡಿದ ಅವರು ‘ಹದಿನೆಂಟು ತಿಂಗಳ ಹಿಂದೆ ಸವಾಲು ಹಾಕಿದ್ದೆ. ಆಗ ಯಾರು ಉತ್ತರ ಕೊಡಬೇಕು ಕೊಟ್ಟರೆ ಅದಕ್ಕೆ ಮಾನ್ಯತೆ ಇರುತ್ತಿತ್ತು. ಈಗ ಅದು ಅಪ್ರಸ್ತುತ, ಈಗ ಅವರು ಮಾತನಾಡಿದರೆ ನಾನು ಚರ್ಚೆ ಮಾಡುತ್ತೇನೆ. ಐವತ್ತು ಸಾವಿರ ಮತಗಳ ಲೀಡ್‌ಗೆ ಈಗಲೂ ಬದ್ದ, ಮುಂದಿನ ಚುನಾವಣೆಗೂ ಅವಕಾಶ ಕೋಡುತ್ತೇನೆ ಎಂದರು.

ಇಂದು ಹಾಸನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರೀತಂಗೌಡ ಅವರು ‘ರೇವಣ್ಣ ಅವರು ಜಿಲ್ಲೆಯಲ್ಲಿ ಅವರದ್ದೇ ಆದ ಶಕ್ತಿ ಇಟ್ಟುಕೊಂಡಿದ್ದಾರೆ. ಇಡೀ ರಾಜ್ಯದಲ್ಲಿ ಏಕೈಕ ಎಂಪಿ ಗೆಲ್ಲಿಸಿಕೊಂಡವರು ರೇವಣ್ಣ ಅವರು, ಎಂಪಿ, ಎಂಎಲ್‌ಸಿ ಚುನಾವಣೆಯಲ್ಲಿ ಇಬ್ಬರು ಮಕ್ಕಳನ್ನು ಗೆಲ್ಲಿಸಿಕೊಂಡಿದ್ದಾರೆ. ರೇವಣ್ಣ ಅವರು ಒಂದು ಶಕ್ತಿ, ಅವರಿಂದಲೇ ಜೆಡಿಎಸ್ ಅಭ್ಯರ್ಥಿ ಗೆಲ್ಲುತ್ತಿದ್ದರು. ಅವರ ಬೆಂಬಲ ಇಲ್ಲದಿದ್ದರೆ ಜೆಡಿಎಸ್ ಅಭ್ಯರ್ಥಿ ಇಪ್ಪತ್ತು ಸಾವಿರ ಓಟು ಪಡೆದುಕೊಳ್ಳತ್ತಾರೆ. ರೇವಣ್ಣ ಬೆಂಬಲ ಇಲ್ಲದೆ ಸ್ಪರ್ಧೆ ಮಾಡಿದ್ರೆ ಅವರ ಅಭ್ಯರ್ಥಿ ಠೇವಣಿ ಕಳೆದುಕೊಳ್ಳುತ್ತಾರೆ. ಹಿರಿಯ ನಾಯಕರು, ಅವರ ಶಕ್ತಿ ಹಾಗಾಗಿ ಅವರಿಗೆ ಗೌರವ ಕೊಡುತ್ತೇನೆ. ಸವಾಲೇ ಬೇರೆ ರೇವಣ್ಣ ಅವರ ಶಕ್ತಿನೇ ಬೇರೆ, ಯಾರೂ ಅಲ್ಲೆಗಳಿಯಬಾರದು ಎಂದು ಪರೋಕ್ಷವಾಗಿ ರೇವಣ್ಣ ಅವರದ್ದು ಕುಟುಂಬ ರಾಜಕಾರಣ ಎಂದು ಪ್ರೀತಂಗೌಡ ಕಾಲೆಳೆದಿದ್ದಾರೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ: ಇದೇ ಮೊದಲ ಬಾರಿಗೆ ಆನ್ ಲೈನ್​ ಮೂಲಕ ಸಲ್ಲಿಸಲು ಅವಕಾಶ

ಇನ್ನು ಚಾಮುಂಡೇಶ್ವರಿ, ಹುಣಸೂರು, ಚಾಮರಾಜನಗರಕ್ಕೆ ನಾಮಪತ್ರ ಸಲ್ಲಿಸುವಾಗ ಹೋಗುವಂತೆ ಹೈಕಮಾಂಡ್ ನನಗೆ ಸೂಚಿಸಿದೆ. ಮೊದಲ ಬಾರಿ ಸ್ಪರ್ಧೆ ಮಾಡಿದಾಗ ಶಾಸಕನಾಗಲು ಅವಕಾಶ, ಈಬಾರಿ ಗೆದ್ದರೆ ಸಚಿವರಾಗುತ್ತಾರೆ ಎಂಬ ಚರ್ಚೆ ಕುರಿತು‘ ನಾನು ರಾಜಕೀಯ ಸನ್ಯಾಸಿಯಲ್ಲ, ಗೆದ್ದರೆ ಸಚಿವ ಸ್ಥಾನ ಕೊಡಿ ಎಂದು ಕಾರ್ಯಕರ್ತರು ಕೇಳುತ್ತಾರೆ. ಕಾರ್ಯಕರ್ತರು ಕೇಳುವುದರಲ್ಲಿ ತಪ್ಪೇನಿದೆ ಹೇಳಿ ಎಂದು ಪ್ರೀತಂಗೌಡ ಹೇಳಿದ್ದಾರೆ.

‘ಕಳೆದ ಚುನಾವಣೆ ವೇಳೆ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇನೆ, ಧೂಳುಮುಕ್ತ, ಕಸಮುಕ್ತ ನಗರ, ರಿಂಗ್ ರೋಡ್, ಏರ್‌ಪೋರ್ಟ್, 24 ಗಂಟೆ ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಲಾಗಿದೆ. ಯಡಿಯೂರಪ್ಪ ಅವರ ಆಶೀರ್ವಾದ, ವಿಜಯೇಂದ್ರ ಅವರ ಶಕ್ತಿಯಿಂದ ಈ‌ ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಾಯಿತು ಎಂದರು.

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್  ಮಾಡಿ

Published On - 12:57 pm, Thu, 13 April 23

ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ