ಹಾಸನಕ್ಕೂ, ಹೊಳೆನರಸೀಪುರಕ್ಕೂ ಏನು ಸಂಬಂಧ? ಶಾಸಕ ರೇವಣ್ಣಗೆ ಕಂದಾಯ ಸಚಿವ ಅಶೋಕ್ ನೇರ ಪ್ರಶ್ನೆ
ಹಾಸನಕ್ಕೂ, ಹೊಳೆನರಸೀಪುರಕ್ಕೂ ಏನು ಸಂಬಂಧ ರೇವಣ್ಣನವರೇ? ಎಂದು ನೇರವಾಗಿ ಪ್ರಶ್ನಿಸಿರುವ ಸಚಿವ ಅಶೋಕ್ ಅಭಿವೃದ್ಧಿ ಕೆಲಸಗಳಿಗೆ ಯಾರೂ ತೊಂದರೆ ನೀಡಬಾರದು. ಹಾಸನದಲ್ಲಿ ಆಡಳಿತಸೌಧ ನಿರ್ಮಿಸಿದರೆ ನಿಮಗ್ಯಾಕೆ ಹೊಟ್ಟೆ ಉರಿ? ಎಂದು ಸಚಿವ ಅಶೋಕ್ ಪ್ರಶ್ನಿಸಿದ್ದಾರೆ
ಹಾಸನ: ಹಾಸನದಲ್ಲಿ ತಾಲೂಕು ಕಚೇರಿ ಮತ್ತು ಡಿಸಿ ಕಚೇರಿ ನಿರ್ಮಾಣ ವಿಚಾರವಾಗಿ ನೂತನ ಕಟ್ಟಡಗಳ ನಿರ್ಮಾಣಕ್ಕೆ ಹೊಳೆನರಸೀಪುರ ಶಾಸಕ ಹೆಚ್.ಡಿ. ರೇವಣ್ಣ ವಿರೋಧ ವ್ಯಕ್ತಪಡಿಸಿದ್ದು ಸ್ಥಳೀಯ ಅಧಿಕಾರಿಗಳ ವಿರುದ್ಧ ವಾಚಾಗೋಚರವಾಗಿ ಬೈದಾಡಿದ್ದಾರೆ. ಹಾಸನ ಡಿಸಿ ಕಛೇರಿ ಮತ್ತು ತಾಲ್ಲೂಕು ಕಛೇರಿ ತೆರವಿಗೆ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಿಗೇ ಹಾಸನದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರು ರೇವಣ್ಣ ವರ್ತನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಹಾಸನಕ್ಕೂ, ಹೊಳೆನರಸೀಪುರಕ್ಕೂ ಏನು ಸಂಬಂಧ ರೇವಣ್ಣನವರೇ? ಎಂದು ನೇರವಾಗಿ ಪ್ರಶ್ನಿಸಿರುವ ಸಚಿವ ಅಶೋಕ್ ಅಭಿವೃದ್ಧಿ ಕೆಲಸಗಳಿಗೆ ಯಾರೂ ತೊಂದರೆ ನೀಡಬಾರದು. ಹಾಸನದಲ್ಲಿ ಆಡಳಿತಸೌಧ ನಿರ್ಮಿಸಿದರೆ ನಿಮಗ್ಯಾಕೆ ಹೊಟ್ಟೆ ಉರಿ? ನಿಮ್ಮ ಕೈಯಲ್ಲಿ ಮಾಡಲು ಆಗದಿದ್ದರೂ, ಯಾಕೆ ಕಲ್ಲು ಹಾಕೋ ಕೆಲಸ ಮಾಡ್ತೀರಾ? ನಿಮ್ಮ ಕ್ಷೇತ್ರವನ್ನು ನೋಡಿಕೊಳ್ಳಿ, ಇಲ್ಲಿಯವರೆಗೂ ಬರೋದು ಬೇಡ ಎಂದು ಮಾಜಿ ಸಚಿವ ಹೆಚ್. ಡಿ.ರೇವಣ್ಣಗೆ ಸಚಿವ ಅಶೋಕ್ ಟಾಂಗ್ ನೀಡಿದ್ದಾರೆ. ಅವರ ಅವಧಿಯಲ್ಲಿ ಈ ಕೆಲಸ ಮಾಡಿಲ್ಲ ಅಂತ ಬೇಸರ ಇರಬಹುದು. ನಾನೇ ಮಾಡಿದ್ದು ಅನ್ನೋ ಮೈಂಡ್ ಸೆಟ್ನಿಂದ ರೇವಣ್ಣ ಹೊರಬರಲಿ ಎಂದು ಸಚಿವ ಅಶೋಕ್ ಕಿವಿಮಾತು ಹೇಳಿದರು.
ಮಾಜಿ ಸಚಿವ ರೇವಣ್ಣ ವಿಷಾದ: ಇನ್ನು, ಹಾಸನದ ಟ್ರಕ್ ಟರ್ಮಿನಲ್ ನಿರ್ಮಾಣ ವಿಚಾರವಾಗಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ (ಇಓ) ಯಶ್ವಂತ್ ಗೆ ಮಂಗಳವಾರ ನಿಂದನೆ ಮಾಡಿದ ವಿಚಾರವಾಗಿ ಇದೀಗತಾನೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ರೇವಣ್ಣ ಅವರು ಜಿಲ್ಲಾಧಿಕಾರಿಯವರು ಬೇರೆ ಸ್ಥಳದಲ್ಲಿ ಟ್ರಕ್ ಟರ್ಮಿನಲ್ ಮಾಡ್ತೀನಿ ಅಂದಿದ್ದರು. ಆದರೆ ಮತ್ತೆ ಅದೇ ಸ್ಥಳದಲ್ಲಿ ಮತ್ತೆ ಕಾಮಗಾರಿ ಮಾಡೋಕೆ ಮುಂದಾದಾಗ ನನಗೆ ಕೋಪ ಬಂದಿದೆ. ನಾನು ಹಾಗೆ ಮಾತನಾಡಿದ್ದರ ಬಗ್ಗೆ ನಾನು ಅಲ್ಲೇ ಡಿಸಿ ಹಾಗೂ ಇಓ ಗೆ ಹೇಳಿದೆ. ನಾನು ಸಿಟ್ಟಿನಲ್ಲಿ ಆಡಿದ ಮಾತಿಗೆ ಬೇಜಾರು ಮಾಡಿಕೊಳ್ಳದಂತೆ ಹೇಳಿದ್ದೆ. ನಾನು ಉದ್ದೇಶಪೂರ್ವಕವಾಗಿ ಹಾಗೆ ಮಾತಾಡಿಲ್ಲ ಎಂದು ಇಓ ಬಗ್ಗೆ ಆಡಿದ ಮಾತಿಗೆ ಮಾಜಿ ಸಚಿವ ರೇವಣ್ಣ ವಿಷಾದ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹಾಸನ ಜನರೆದುರೇ ತಾ.ಪಂ. ಅಧಿಕಾರಿಗೆ ಏಕವಚನದಲ್ಲಿ ತರಾಟೆ, ಜಿಲ್ಲಾಧಿಕಾರಿಗೂ ವಾರ್ನ್ ಮಾಡಿದ ಜೆಡಿಎಸ್ ಶಾಸಕ ರೇವಣ್ಣ
Published On - 2:18 pm, Wed, 27 April 22