ಹೆಚ್ಡಿ ರೇವಣ್ಣಗೆ ಶಿಕ್ಷಣ ಎಂದರೆ ಏನೆಂದು ಗೊತ್ತಿಲ್ಲ; ತಮ್ಮ ಬಗ್ಗೆ ಟೀಕೆ ಮಾಡಿದ್ದ ರೇವಣ್ಣಗೆ ತಿರುಗೇಟು ಕೊಟ್ಟ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್
ರಾಜ್ಯದಲ್ಲಿ ಉನ್ನತ ಶಿಕ್ಷಣ ಇಡೀ ದೇಶದಲ್ಲಿ ಒಳ್ಳೆ ರೀತಿಯಲ್ಲಿ ಇದೆ. ರೇವಣ್ಣಗೆ ಇದನ್ನೆಲ್ಲಾ ಸಹಿಸೋಕೆ ಆಗ್ತಿಲ್ಲ. ಏನಪ್ಪಾ ನಾವು ಇಷ್ಟು ವರ್ಷ ಆಡಳಿತ ಮಾಡಿದ್ದು ಇವರ ಸ್ಪೀಡಿಗೆ ನಾವಿಲ್ಲವಲ್ಲ. ಅಡ್ರಸ್ ಗೆ ಇಲ್ಲದಂತೆ ಹೋಗಿದಿನಲ್ಲಾ ನನ್ನ ಅಡ್ರಸ್ ಹುಡುಕ ಬೇಕಲ್ಲಾ ಎಂದು ಸಮಸ್ಯೆ ಆಗಿದೆ. -ಅಶ್ವಥ್ ನಾರಾಯಣ್
ಹಾಸನ: ರೇವಣ್ಣಗೆ ಶಿಕ್ಷಣ ಎಂದರೆ ಏನೆಂದು ಗೊತ್ತಿಲ್ಲ. ನಾಲ್ಕು ಕಟ್ಟೆ ಕಟ್ಟೊದೆ ಶಿಕ್ಷಣ ಅಂದುಕೊಂಡಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ತಮ್ಮ ಬಗ್ಗೆ ಟೀಕೆ ಮಾಡಿದ್ದ ಮಾಜಿ ಸಚಿವ ರೇವಣ್ಣಗೆ ತಿರುಗೇಟು ನೀಡಿದ್ದಾರೆ. ರೇವಣ್ಣಗೆ ಶಿಕ್ಷಣ ಎಂದರೆ ಏನೆಂದು ಗೊತ್ತಿಲ್ಲ. ನಾಲ್ಕು ಕಟ್ಟೆ ಕಟ್ಟೊದೆ ಶಿಕ್ಷಣ ಅಂದುಕೊಂಡಿದ್ದಾರೆ. ಯುವಕರಿಗೆ ಭರವಸೆ ಮೂಡಿಸೋ ಕೆಲಸ ಆಗಬೇಕು. ಮಾಜಿ ಪ್ರದಾನಿ ದೇವೇಗೌಡರ ಬಗ್ಗೆ ನಮಗೆ ಅಪಾರ ಗೌರವ ಇದೆ. ಆದರೆ ರೇವಣ್ಣ, ಕುಮಾರಸ್ವಾಮಿ ಅಂತಹವರಿಗೆ ಯಾವ ರೀತಿ ಕೆಲಸ ಮಾಡಬೇಕು. ಯಾವ ರೀತಿ ಸುಧಾರಣೆ ಆಡಳಿತ ಕೊಡಬೇಕು ಎನ್ನುವ ಕಲ್ಪನೆ ಇಲ್ಲಾ.
ರಾಜ್ಯದಲ್ಲಿ ಉನ್ನತ ಶಿಕ್ಷಣ ಇಡೀ ದೇಶದಲ್ಲಿ ಒಳ್ಳೆ ರೀತಿಯಲ್ಲಿ ಇದೆ. ರೇವಣ್ಣಗೆ ಇದನ್ನೆಲ್ಲಾ ಸಹಿಸೋಕೆ ಆಗ್ತಿಲ್ಲ. ಏನಪ್ಪಾ ನಾವು ಇಷ್ಟು ವರ್ಷ ಆಡಳಿತ ಮಾಡಿದ್ದು ಇವರ ಸ್ಪೀಡಿಗೆ ನಾವಿಲ್ಲವಲ್ಲ. ಅಡ್ರಸ್ ಗೆ ಇಲ್ಲದಂತೆ ಹೋಗಿದಿನಲ್ಲಾ ನನ್ನ ಅಡ್ರಸ್ ಹುಡುಕ ಬೇಕಲ್ಲಾ ಎಂದು ಸಮಸ್ಯೆ ಆಗಿದೆ. ಅವರ ಆತ್ಮವಿಶ್ವಾಸಕ್ಕೆ ಧಕ್ಕೆಯಾಗಿದೆ ಅವರು ಲೆಕ್ಕಕ್ಕೇ ಇಲ್ಲ ಎಂದು ರೇವಣ್ಣ ವಿರುದ್ಧ ಡಾ.ಅಶ್ವಥ್ ನಾರಾಯಣ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರೇವಣ್ಣ ಪಾಪ ಧಕ್ಷ ಪ್ರಾಮಾಣಿಕ, ಸಜ್ಜನ, ಪಕ್ಷಪಾತ ಇಲ್ಲದೆ ಕೆಲಸ ಮಾಡಿರೋರು. ಅವರು ಹೇಗೆಂದು ಅವರ ಊರಿನವರಿಗೆ, ಜೊತೆಯಲ್ಲಿ ಇರುವವರಿಗೆ, ರಾಜ್ಯದ ಜನರಿಗೆ ಗೊತ್ತಿದೆ. ನನ್ನ ಬಗ್ಗೆ ಮಾತನಾಡುವ ನೈತಿಕತೆ, ಅರ್ಹತೆ, ಭದ್ದತೆ ಇಲ್ಲ. ಅವರು ಇನ್ನೂ ತುಂಬಾ ಇಂಪ್ರೂವ್ ಆಗಬೇಕಿದೆ ಎಂದು ಅಶ್ವಥ್ ನಾರಾಯಣ್ ಲೇವಡಿ ಮಾಡಿದ್ದಾರೆ.
ಅಧಿಕಾರ ದುರ್ಬಳಕೆ ಮಾಡಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಆಗುತ್ತೆ ಸರ್ಕಾರಿ ಹುದ್ದೆ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದರೆ ಕ್ಷಮಿಸುವ ಪ್ರಶ್ನೆಯೇ ಇಲ್ಲ. ಉಪ್ಪು ತಿಂದವನು ನೀರು ಕುಡಿಯಲೇ ಬೇಕು. ಕಾನೂನು ಪ್ರಕಾರ ಅಧಿಕಾರ ದುರ್ಬಳಕೆ ಮಾಡಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಆಗುತ್ತೆ ಎಂದ ಸಚಿವ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ. ಪಿಎಸ್ಐ ನೇಮಕಾತಿಯಲ್ಲಿ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆಗೆ ನೋಟಿಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿರುವ ಸಚಿವರು, ಏನಾಗಿದೆ ಎಂದು ಅವರೇ ಬಂದು ಹೇಳಬೇಕು ಅಲ್ಲವೇ. ನಾನು ಆರೋಪ ಮಾಡಿದ್ದೆ ನನ್ನ ಕರಿಲೇ ಇಲ್ಲಾ ಅಂದರೆ ಏನು ಮಾಡೋದು. ನೋಟಿಸ್ ಕೊಟ್ಟಿರೊದು ಕ್ರೈಂ ಮಾಡಿದಿಯಾ ಅಂತಲ್ಲ. ನಿಮ್ಮ ಬಳಿ ಇರೋ ಮಾಹಿತಿ ಕೊಡಿ ಎಂದು. ಎಲ್ಲವೂ ಆನ್ ರೆಕಾರ್ಡ್ ಬರಬೇಕು. ಅಲ್ಲವೇ ಗಾಳಿಯಲ್ಲಿ ಗುಂಡು ಹೊಡೆದರೆ ಆಗುತ್ತಾ. ಬರಬೇಕು ಧೈರ್ಯ ವಾಗಿ ಬಂದು ಹೇಳಬೇಕು. ಇಂತಿಂತ ಸಾಕ್ಷಿ ಇದೆ ಎಂದು ಹೇಳಿಬೇಕು. ಸರ್ಕಾರ ನಡೆಸಿದವರೇ ಹೀಗೆ ಹೇಳಿದ್ರೆ ಏನು ಹೇಳೋಣ ಎಂದರು.
ರಾಜ್ಯದಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿಯಲ್ಲಿ ಭ್ರಷ್ಟಾಚಾರ ಆರೋಪ ವಿಚಾರಕ್ಕೆ ಸಂಬಂಧಿಸಿ ಹಾಸನದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ ನಾರಾಯಣ್ ಹೇಳಿಕೆ ನೀಡಿದ್ದಾರೆ. ಈಗಾಗಲೆ ಭೌತಶಾಸ್ತ್ರ ವಿಷಯದಲ್ಲಿ ದೂರು ಬಂದಿತ್ತು. ದೂರು ಕೇಳಿ ಬಂದ ತಕ್ಷಣ ಕ್ರಮ ವಹಿಸಲಾಗಿದೆ. ವಿಚಾರಣೆ ನಡೆಯುತ್ತಿದ್ದು ತನಿಖೆ ಪೂರ್ಣಗೊಂಡ ಬಳಿಕ ಕ್ರಮ ಆಗಲಿದೆ. ಭ್ರಷ್ಟಾಚಾರವನ್ಮು ಕಾಂಗ್ರೆಸ್ ಬೆಳೆಸಿಬಿಟ್ಟಿದೆ. ಭ್ರಷ್ಟಾಚಾರ ಒಂದು ಸಂಸ್ಕ್ರತಿಯಾಗಿ ಬೆಳೆದಿದೆ. ಇದನ್ನು ಸರಿಮಾಡೋಕೆ ನಮ್ಮ ಪ್ರಧಾನಿಯವರು ಹೋರಾಟ ಮಾಡುತ್ತಿದ್ದಾರೆ. ಹಣವನ್ಮು ಅಕೌಂಟಬಲ್ ಮಾಡಲು ಎಲ್ಲಾ ರೀತಿಯ ಕ್ರಮ ಆಗಿದೆ. ಭ್ರಷ್ಟಾಚಾರ ಸಂಪೂರ್ಣ ನಿರ್ಮೂಲನೆ ಮಾಡಲು ಎಲ್ಲಾ ಪ್ರಯತ್ನ ಆಗಿದೆ. ಈ ದಿಕ್ಕಿನಲ್ಲಿ ನಮ್ಮ ಸಿಎಂ ಅವರು ಗುತ್ತಿಗೆ ದಾರರನ್ನು ಕರೆಸಿ ನೇರವಾಗಿ ಮಾತಾಡಿದ್ದಾರೆ. ಹಣ ಮಾಡಬೇಕು ಎನ್ನೋದು ಒಂದು ಖಾಯಿಲೆ ಅದು ಕೆಲವರಿಗೆ ಇದೆ. ಗೃಹ ಸಚಿವರು ಪರೀಕ್ಷಾ ಅಕ್ರಮದ ಬಗ್ಗೆ ತಮಗೆ ಮಾಹಿತಿ ಬರುತ್ತಲೆ ಕ್ರಮ ವಹಿಸಿದ್ದಾರೆ. ನಾವು ಎಲ್ಲೊ ಒಂದು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಮಾಡುವಾಗ ಕಾಪಿ ಹೊಡೆಸಿಬಿಟ್ಟರೆ ಏನು ಮಾಡೋಕೆ ಆಗುತ್ತೆ ಎಂದು ಪ್ರಾಧ್ಯಾಪಕರ ಹುದ್ದೆ ನೇಮಕದ ಅಕ್ರಮದ ಬಗ್ಗೆ ನಡೆಯುತ್ತಿರೊ ಚರ್ಚೆ ಬಗ್ಗೆ ಅಸಹಾಯಕತೆಯ ಉತ್ತರ ನೀಡಿದ ಸಚಿವರು.
ಇದನ್ನೂ ಓದಿ: ಪ್ರಧಾನಿ ಮೋದಿ ನೇತೃತ್ವದ 2ನೇ ಅವಧಿ ಸರ್ಕಾರಕ್ಕೆ ಮೂರು ವರ್ಷ; ಭರ್ಜರಿಯಾಗಿ ಆಚರಣೆ ಮಾಡಲು ನಿರ್ಧರಿಸಿದ ಬಿಜೆಪಿ