ಸೂರಜ್ ರೇವಣ್ಣ ವಿರುದ್ಧದ ಎರಡನೇ ಕೇಸ್ ಕೂಡ ಸಿಐಡಿಗೆ ಹಸ್ತಾಂತರಿಸಿದ ಸರ್ಕಾರ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 26, 2024 | 7:20 PM

ಅಸಹಜ ಲೈಂಗಿಕ ದೌರ್ಜನ್ಯ ಆರೋಪದ ಹಿನ್ನಲೆ ವಿಧಾನ ಪರಿಷತ್​ ಸದಸ್ಯ ಸೂರಜ್​ ರೇವಣ್ಣ ಅವರನ್ನು ಬಂಧಿಸಲಾಗಿದೆ. ಜೊತೆಗೆ ಅವರ ಮೇಲೆ ದಾಖಲಾಗಿದ್ದ ಮೊದಲ ಕೇಸ್​ನ್ನು ಸಿಐಡಿಗೆ ಹಸ್ತಾಂತರಿಸಲಾಗಿತ್ತು. ಅದರಂತೆ ನಿನ್ನೆ(ಜೂ.25) ಕೂಡ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಈ ಕುರಿತು ಮತ್ತೊಂದು ಕೇಸ್​ ದಾಖಲಾಗಿತ್ತು. ಇದೀಗ ಅದನ್ನೂ ಕೂಡ ಸಿಐಡಿಗೆ ಹಸ್ತಾಂತರಿಸಿ ಸರ್ಕಾರ ಆದೇಶಿಸಿದೆ.

ಸೂರಜ್ ರೇವಣ್ಣ ವಿರುದ್ಧದ ಎರಡನೇ ಕೇಸ್ ಕೂಡ ಸಿಐಡಿಗೆ ಹಸ್ತಾಂತರಿಸಿದ ಸರ್ಕಾರ
ಸೂರಜ್​ ರೇವಣ್ಣ
Follow us on

ಹಾಸನ, ಜೂ.26: ವಿಧಾನ ಪರಿಷತ್ ಸದಸ್ಯ​ ಡಾ.ಸೂರಜ್ ರೇವಣ್ಣ(Suraj Revanna Case) ವಿರುದ್ಧದ ಅಸಹಜ ಲೈಂಗಿಕ ದೌರ್ಜನ್ಯ ಆರೋಪದ ಎರಡನೇ ಕೇಸ್ ಕೂಡ ಸಿಐಡಿ(CID)ಗೆ ಹಸ್ತಾಂತರ ಮಾಡಿ ಸರ್ಕಾರ ಆದೇಶಿಸಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಜೂ.22 ರಂದು ಮೊದಲ ಕೇಸ್ ದಾಖಲಾಗಿತ್ತು. ಇದಾದ ಮಾರನೇ ದಿನ ಜೂ.23ರಂದು ಪ್ರಕರಣದ ತನಿಖೆ ಸಿಐಡಿಗೆ ಹಸ್ತಾಂತರ ಮಾಡಿ ಆದೇಶಿಸಿತ್ತು.

ಎರಡನೇ ಕೇಸ್ ಕೂಡ ಸಿಐಡಿಗೆ ಹಸ್ತಾಂತರ

ಇನ್ನು ಹೊಳೆನರಸೀಪುರ ಗ್ರಾ. ಠಾಣೆಯಲ್ಲಿ ನಿನ್ನೆ(ಜೂ.25) ಮತ್ತೊಂದು ಕೇಸ್ ದಾಖಲಾದ ಹಿನ್ನಲೆ ಎರಡನೇ ಪ್ರಕರಣವನ್ನು ಕೂಡ ಸಿಐಡಿಗೆ ಹಸ್ತಾಂತರ ಮಾಡಿ ಆದೇಶಿಸಲಾಗಿದೆ. ಅದರಂತೆ ಪ್ರಕರಣದ ಕಡತಗಳನ್ನು ಸಿಐಡಿಗೆ ಪೊಲೀಸರು ಹಸ್ತಾಂತರಿಸಲಿದ್ದಾರೆ. ಇನ್ನು ಮೊದಲ ಪ್ರಕರಣದಲ್ಲಿ ಅರಕಲಗೂಡು ಮೂಲದ ಯುವಕ ದೂರು ನೀಡಿದ್ದರೆ,  2ನೇ ಪ್ರಕರಣದಲ್ಲಿ ಹೊಳೆನರಸೀಪುರ ಮೂಲದ ಯುವಕ ದೂರು ನೀಡಿದ್ದ. ಇದೀಗ ಎರಡೂ ಪ್ರಕರಣಗಳ ತನಿಖೆ ಸಿಐಡಿಗೆ ಹಸ್ತಾಂತರ ಮಾಡಲಾಗಿದೆ.‘

ಇದನ್ನೂ ಓದಿ:ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಕೇಸ್; ತನಿಖಾಧಿಕಾರಿಗಳ ನೇಮಕ, ಬಾಡಿ ವಾರಂಟ್ ಸಲ್ಲಿಕೆ

ಇನ್ನು ನಿನ್ನೆಯಷ್ಟೇ ಸೂರಜ್​ ವಿರುದ್ದ ದೂರು ನೀಡಿದ್ದ ಸಂತ್ರಸ್ಥ ಮಾತನಾಡಿ, ‘ನಾಲ್ಕು ವರ್ಷಗಳ ಹಿಂದೆ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ನನ್ನ ಮನಸ್ಸಿನಲ್ಲೆ ನೋವು ಇಟ್ಟುಕೊಂಡು ಸುಮ್ಮನಿದ್ದೆ. ಈಗ ಸಮಯ ಬಂದಿದೆ ದೂರು ಕೊಟ್ಟಿದ್ದೇನೆ.  ನಾನು ಈಗಲೂ ಜೆಡಿಎಸ್ ಕಾರ್ಯಕರ್ತ, ಲೋಕಸಭಾ ಚುನಾವಣಾ ವೇಳೆಯಲ್ಲೂ ಅವರ ಜೊತೆ ಓಡಾಡಿದ್ದೇನೆ. ನಾನು ದೂರು ನೀಡಿರುವುದರ ಹಿಂದೆ ಬೇರೆ ಯಾರೂ ಇಲ್ಲ. ನಾನೇ ಸ್ವ ಇಚ್ಚೆ ಬಂದು ದೂರು ಕೊಟ್ಟಿದ್ದೇನೆ ಎಂದು ಹೇಳಿಕೊಂಡಿದ್ದ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:15 pm, Wed, 26 June 24