ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಕೇಸ್; ತನಿಖಾಧಿಕಾರಿಗಳ ನೇಮಕ, ಬಾಡಿ ವಾರಂಟ್ ಸಲ್ಲಿಕೆ
ಹೊಳೆನರಸೀಪುರ ಗ್ರಾ. ಠಾಣೆ ಪೊಲೀಸರು ತಡರಾತ್ರಿ ಸಿಐಡಿ ಕಚೇರಿಗೆ ಕೇಸ್ ಫೈಲ್ ಹಸ್ತಾಂತರಿಸಿದ್ದಾರೆ. ಪ್ರಕರಣದ ಎಸ್ಪಿಪಿಯಾಗಿ ಅಶೋಕ್ ನಾಯಕ್ ನೇಮಕಗೊಂಡಿದ್ದು ಪ್ರಕರಣ ಸಂಬಂಧ ಅಶೋಕ್ ನಾಯಕ್ ವಾದ ಮಂಡಿಸಲಿದ್ದಾರೆ. ಇನ್ನು ಪ್ರಕರಣದ ತನಿಖಾಧಿಕಾರಿಗಳಾಗಿ ಸಿಐಡಿ ಎಸ್ಪಿ ವೆಂಕಟೇಶ್, ಡಿವೈಎಸ್ಪಿ ಉಮೇಶ್, ಇನ್ಸ್ಪೆಕ್ಟರ್ ನರೇಂದ್ರ ಬಾಬು ನೇಮಕಗೊಂಡಿದ್ದಾರೆ.
ಹಾಸನ, ಜೂನ್.24: ಸಲಿಂಗ ಕಾಮ ಕೇಸ್ನಲ್ಲಿ ಹೆಚ್.ಡಿ.ರೇವಣ್ಣ ಪುತ್ರ, ಜೆಡಿಎಸ್ ಎಂಎಲ್ಸಿ ಸೂರಜ್ ರೇವಣ್ಣ (Suraj Revanna) ಜೈಲು ಸೇರಿದ್ದಾರೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ನಿನ್ನೆ ರಾತ್ರಿಯಿಂದಲೇ ಪರಪ್ಪನ ಅಗ್ರಹಾರ ಕ್ವಾರಂಟೈನ್ ಸೆಲ್ನಲ್ಲಿ ಸೂರಜ್ಗೆ ವಿಚಾರಣಾಧೀನ ಕೈದಿ ನಂಬರ್ 6141 ಕೊಡಲಾಗಿದೆ. ಮತ್ತೊಂದೆಡೆ ಪ್ರಕರಣದಲ್ಲಿ ಹಲವು ಅನುಮಾನಗಳೇ ಶುರುವಾಗಿದೆ.
ಹೊಳೆನರಸೀಪುರ ಗ್ರಾ. ಠಾಣೆ ಪೊಲೀಸರು ತಡರಾತ್ರಿ ಸಿಐಡಿ ಕಚೇರಿಗೆ ಕೇಸ್ ಫೈಲ್ ಹಸ್ತಾಂತರಿಸಿದ್ದಾರೆ. ಪ್ರಕರಣದ ಎಸ್ಪಿಪಿಯಾಗಿ ಅಶೋಕ್ ನಾಯಕ್ ನೇಮಕಗೊಂಡಿದ್ದು ಪ್ರಕರಣ ಸಂಬಂಧ ಅಶೋಕ್ ನಾಯಕ್ ವಾದ ಮಂಡಿಸಲಿದ್ದಾರೆ. ಇನ್ನು ಪ್ರಕರಣದ ತನಿಖಾಧಿಕಾರಿಗಳಾಗಿ ಸಿಐಡಿ ಎಸ್ಪಿ ವೆಂಕಟೇಶ್, ಡಿವೈಎಸ್ಪಿ ಉಮೇಶ್, ಇನ್ಸ್ಪೆಕ್ಟರ್ ನರೇಂದ್ರ ಬಾಬು ನೇಮಕಗೊಂಡಿದ್ದಾರೆ. ಸದ್ಯ ತನಿಖಾ ತಂಡ ಕೋರ್ಟ್ಗೆ ಬಾಡಿ ವಾರಂಟ್ ಮನವಿ ಸಲ್ಲಿಸಿದೆ. ಬಾಡಿ ವಾರಂಟ್ ಮೂಲಕ ಸೂರಜ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತೆ.
ಸೂರಜ್ನನ್ನೇ ಟ್ರ್ಯಾಪ್ ಮಾಡಿದ್ನಾ ಆಪ್ತ ಶಿವಕುಮಾರ್?
ಅಸಹಜ ಲೈಂಗಿಕ ದೌರ್ಜನ್ಯ ಕೇಸ್ನಲ್ಲಿ ಸೂರಜ್ ರೇವಣ್ಣ ಜೈಲುಪಾಲಾದ್ರೆ. ಇತ್ತಾ ಇದೀಗ ಹತ್ತಾರು ಅನುಮಾನಗಳೇ ಹುಟ್ಟಿಕೊಂಡಿದೆ. ಅಸಲಿಗೆ ಪ್ರಕರಣ ಬೆಳಕಿಗೆ ಬಂದಿದ್ದೇ ಸೂರಜ್ ರೇವಣ್ಣನ ಆಪ್ತ ಶಿವಕುಮಾರ್ ಕೊಟ್ಟ ಒಂದು ದೂರಿನಿಂದ. ಜೂನ್ 21ರಂದು ಪೊಲೀಸ್ ಠಾಣೆಗೆ ಆಗಮಿಸಿದ್ದ ಸೂರಜ್ ಆಪ್ತ ಶಿವಕುಮಾರ್ ದೂರು ಕೊಡ್ತಾನೆ. ಸೂರಜ್ಗೆ ಬ್ಲ್ಯಾಕ್ಮೇಲ್ ಮಾಡಲಾಗ್ತಿದೆ ಅಂತಾ ದೂರು ಕೊಟ್ಟಿದ್ದಾರೆ. ಆದ್ರೆ ಅದೇ ದೂರು ಇದೀಗ ಎಂಎಲ್ಸಿ ಸೂರಜ್ ರೇವಣ್ಣಗೆ ಉರುಳಾಗಿದೆ. ಜೈಲು ಸೇರೋ ಪರಿಸ್ಥಿತಿಯೂ ಬಂದಿದೆ.
ಇದನ್ನೂ ಓದಿ: ಸೂರಜ್ ರೇವಣ್ಣನನ್ನು ಬೆಂಗಳೂರಿಗೆ ಕರೆತಂದ ಪೊಲೀಸರು, ಸಾಯಂಕಾಲ ನ್ಯಾಯಾಲಯದ ಮುಂದೆ ಹಾಜರು
ಕೋಟಿ ಕೋಟಿ ಹಣಕ್ಕೆ ಬೇಡಿಕೆ ಇಟ್ಟು ಸೂರಜ್ಗೆ ಖೆಡ್ಡಾ!?
ಪ್ರಜ್ವಲ್ ರೇವಣ್ಣ ಪ್ರಕರಣ ಮಾಜಿ ಚಾಲಕನಿಂದಲೇ ಬಯಲಾಗಿತ್ತು. ಇದೀಗ ಸೂರಜ್ ರೇವಣ್ಣ ಪ್ರಕರಣವೂ ಆಪ್ತನಿಂದ ಬಯಲಾಗಿದೆ. ಅಸಲಿಗೆ ದೂರು ಕೊಟ್ಟು ನಾಪತ್ತೆಯಾಗಿರೋ ಶಿವಕುಮಾರ್, ಜೊತೆಗಿದ್ದುಕೊಂಡೇ ಖೆಡ್ಡಾ ತೋಡಿದ್ನಾ ಅನ್ನೋ ಪ್ರಶ್ನೆ ಎದ್ದಿದೆ. ಕೋಟಿ ಕೋಟಿ ಹಣಕ್ಕೆ ಬೇಡಿಕೆ ಇಟ್ಟು ಸೂರಜ್ ರೇವಣ್ಣರನ್ನ ಖೆಡ್ಡಾಗೆ ಕೆಡವಲಾಯ್ತಾ? ಅನ್ನೋ ಶಂಕೆಯೂ ವ್ಯಕ್ತವಾಗ್ತಿದೆ. ಯಾಕೆಂದ್ರೆ ನಾಪತ್ತೆಯಾಗಿರೋ ಶಿವರಾಜ್ ಕುಮಾರ್, ಸಂಸದ ಶ್ರೇಯಸ್ ಪಟೇಲ್ ಪರ ಕೆಲಸ ಮಾಡಿದ್ದ ಬಿಜೆಪಿ ಟೀಂ ಜೊತೆಗೆ ಗುರುತಿಸಿಕೊಂಡಿದ್ದ. ಇದಕ್ಕೆ ಸಾಕ್ಷಿ ಎಂಬಂತೆ ಜೊತೆಗಿರೋ ಫೋಟೋ, ವಿಡಿಯೋಗಳು ಕೂಡ ವೈರಲ್ ಆಗಿದೆ. ನಾಪತ್ತೆಯಾಗಿರೋ ಶಿವಕುಮಾರ್ ಪತ್ತೆಯಾದ್ರೆ ಎಲ್ಲವೂ ಬಯಲಾಗಲಿದೆ.
ಶಿವಕುಮಾರ್ ವಿರುದ್ಧವೂ ಸಂತ್ರಸ್ತನಿಂದ ದೂರು ದಾಖಲು!
ಇದೀಗ ಪ್ರಕರಣದಲ್ಲಿ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ದೂರು ಕೊಟ್ಟ ಶಿವಕುಮಾರ್ ವಿರುದ್ಧ ಸಂತ್ರಸ್ತ ದೂರು ಕೊಟ್ಟಿದ್ದಾನೆ. ಪ್ರಕರಣದಲ್ಲಿ ಶಿವಕುಮಾರ್ 2ನೇ ಆರೋಪಿಯಾಗಿದ್ದಾನೆ. ನನಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಶಿವಕುಮಾರ್ಗೆ ಹೇಳಿದ್ದೆ, ದೈಹಿಕ ಹಿಂಸೆ ಆಗಿದ್ರೂ ಆತ ಆಸ್ಪತ್ರೆಗೆ ಹೋಗಲು ಬಿಟ್ಟಿರಲಿಲ್ಲ, ಆರೋಪಿ ಶಿವಕುಮಾರ್ ನನ್ನನ್ನು ಲಾಡ್ಜ್ನಲ್ಲಿ ಕೂಡಿ ಹಾಕಿದ್ದ ಅಂತಾ ಸಂತ್ರಸ್ತ ಆರೋಪಿಸಿದ್ದಾನೆ. ಇದಿಷ್ಟೇ ಅಲ್ಲ, ಲಾಡ್ಜ್ನಲ್ಲಿ ನನ್ನಿಂದ 1000 ಹಣ ಪಡೆದು ನನಗೆ ಊಟದ ವ್ಯವಸ್ಥೆ ಮಾಡಿದ್ದ, ಇನ್ನು ಸೂರಜ್ ರೇವಣ್ಣ ಜೊತೆ ನನಗೆ ಫೋನ್ನಲ್ಲಿ ಮಾತನಾಡಿಸಿದ್ದ, 2 ಕೋಟಿ ಹಣ, ಕೆಲಸ ಕೊಡಿಸುವುದಾಗಿ ಕೂಡ ಹೇಳಿದ್ರು, ನಾನು ಒಪ್ಪದಿದ್ದಾಗ ನೀನು ಯಾರ ಬಳಿಯಾದ್ರು ಬಾಯಿ ಬಿಟ್ರೆ, ನಿನ್ನನ್ನು ಮುಗಿಸುತ್ತಾರೆ ಎಂದು ಶಿವಕುಮಾರ್ ಕೊಲೆ ಬೆದರಿಕೆ ಹಾಕಿದ್ದಾರೆ. ನಂತರ ಅಲ್ಲಿಂದ ತಪ್ಪಿಸಿಕೊಂಡು ಸಂಬಂಧಿಕರ ಮನೆಗೆ ಹೋದೆ ಅಂತಾ ಸಂತ್ರಸ್ತನ ದೂರಿನಲ್ಲಿ ಉಲ್ಲೇಖವಾಗಿದೆ.
ಸಂತ್ರಸ್ತ, ಸೂರಜ್ ಮಾತಾಡಿದ್ದು ಎನ್ನಲಾದ ಆಡಿಯೋ ಸ್ಫೋಟ!
ಸಂತ್ರಸ್ತ, ಸೂರಜ್ ಮಾತನಾಡಿದ್ದು ಎನ್ನಲಾದ ಆಡಿಯೋವೊಂದು ವೈರಲ್ ಆಗ್ತಿದೆ. ಆಡಿಯೋದಲ್ಲಿ ಸಂತ್ರಸ್ತನಿಗೆ ಸೂರಜ್ ರೇವಣ್ಣ, ಹಣ, ಕೆಲಸದ ಆಮಿಷ ಒಡ್ಡಿರೋದು ಬಯಲಾಗಿದೆ.
ಒಟ್ಟಾರೆಯಾಗಿ ಹೆಚ್.ಡಿ.ರೇವಣ್ಣ ಕುಟುಂಬಕ್ಕೆ ಒಂದಲ್ಲ ಒಂದು ಸಂಕಷ್ಟಗಳು ಎದುರಾಗ್ತಾನೆ ಇದೆ. ಇದೀಗ ಸಲಿಂಗ ಕಾಮ ಆರೋಪದಲ್ಲಿ ಸೂರಜ್ ರೇವಣ್ಣ ಕಂಬಿ ಎಣಿಸೋ ಪರಿಸ್ಥಿತಿ ಸೃಷ್ಟಿಯಾಗಿದೆ. ಇತ್ತಾ ಸೂರಜ್ ರೇವಣ್ಣ ಪರ ದೂರು ಕೊಟ್ಟು ನಾಪತ್ತೆಯಾಗಿರೋ ಆಪ್ತ ಶಿವಕುಮಾರ್ ನಡೆ ನಿಗೂಢವಾಗಿದೆ. ಆತ ಪತ್ತೆಯಾದ ಬಳಿಕವೇ ಎಲದಕ್ಕೂ ಉತ್ತರ ಸಿಗಲಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ