ಹಾಸನ: ಅರಣ್ಯಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಸಕಲೇಶಪುರ(Sakleshpura) ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸೋಮನಹಳ್ಳಿ ಗ್ರಾಮದ ಪುನೀತ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಇನ್ನು ಪುನೀತ್ ಅಕ್ರಮವಾಗಿ ಮರ ಕಡಿದ ಕೇಸ್ನ ಆರೋಪಿಯಾಗಿದ್ದಾನೆ. ಈ ಹಿನ್ನಲೆ ಅರಣ್ಯಾಧಿಕಾರಿ ಕಿರುಕುಳಕ್ಕೆ ಬೇಸತ್ತು ಪುನೀತ್ ಒಂದೂವರೆ ಲಕ್ಷ ಹಣ ನೀಡಿದ್ದಾನೆಂದು ಪುನೀತ್ ಸಂಬಂಧಿಕರು ಆರೋಪಿಸಿದ್ದಾರೆ.
ಅರಣ್ಯ ಇಲಾಖೆಯ ಸೋಷಿಯಲ್ ಗಾರ್ಡ್ ಆಗಿರುವ ಪರಮೇಶ್ ಎಂಬಾತನಿಗೆ ಪುನೀತ್ ಹಣ ನೀಡಿದ್ದಾನೆಂದು ಆತನ ಸಂಬಂಧಿಕರು ಆರೋಪಿಸಿದ್ದು, ಅದರ ಜೊತೆಗೆ ಹಣ ನೀಡುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ. ಈ ಹಿನ್ನಲೆ ಸಂಬಂಧಿಕರು ವಿಡಿಯೋ, ಆಡಿಯೋ ಸಮೇತ ಸಕಲೇಶಪುರ ಪೊಲೀಸ್ ಠಾಣೆ ಹಾಗೂ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಸದ್ಯ ಪುನೀತ್ಗೆ ಹಾಸನ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇದನ್ನೂ ಓದಿ:ರಾಜಕೀಯ ತಿರುವು ಪಡೆದುಕೊಂಡ KSRTC ಬಸ್ ಚಾಲಕ ಆತ್ಮಹತ್ಯೆ ಯತ್ನ ಕೇಸ್, ವರ್ಗಾವಣೆ ಆದೇಶಕ್ಕೆ ತಡೆ
ಬೆಂಗಳೂರು: ನಗರದ ಸುಬ್ರಹ್ಮಣ್ಯನಗರ ಪಾರ್ಕ್ ಬಳಿಯ 3 ಅಂತಸ್ತಿನ ಕಟ್ಟಡದ ನೆಲಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸ್ಥಳಕ್ಕಾಗಮಿಸಿದ 2 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುತ್ತಿದ್ದು, ಕಟ್ಟಡದಲ್ಲಿದ್ದ ಜನರನ್ನು ತೆರವುಗೊಳಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ಬೆಂಕಿಯ ತೀವ್ರತೆಗೆ ದಟ್ಟ ಹೊಗೆ ಇಡೀ ಕಟ್ಟಡವನ್ನ ವ್ಯಾಪಿಸಿದೆ. ಘಟನಾ ಸ್ಥಳಕ್ಕೆ ಸುಬ್ರಹ್ಮಣ್ಯನಗರ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇನ್ನು ನೆಲಮಹಡಿಯಲ್ಲಿ ಶಾಮಿಯಾನ ಸಂಬಂಧಿತ ವಸ್ತುಗಳನ್ನ ಸಂಗ್ರಹಿಸಿಡಲಾಗಿತ್ತು. ಬೆಂಕಿಯ ತೀವ್ರತೆಗೆ ಶಾಮಿಯಾನ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಇನ್ನು ಇದು ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ನಿಂದ ಸಂಭವಿಸಿರುವ ಘಟನೆ ಎಂದು ಹೇಳಲಾಗುತ್ತಿದೆ. ಇನ್ನು ಘಟನೆ ಹಿನ್ನೆಲೆ 25 ಲಕ್ಷ ಕ್ಕೂ ಅಧಿಕ ವಸ್ತುಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ