ಸಾಲಬಾಧೆ ತಾಳಲಾರದೆ ಹಾವೇರಿಯಲ್ಲಿ ನೇಣಿಗೆ ಶರಣಾದ ರೈತ

ಫಕ್ಕೀರಪ್ಪ ಓಲೇಕಾರ ಸುಮಾರು 6 ಲಕ್ಷ ಬ್ಯಾಂಕ್ ಮತ್ತು ಕೈಸಾಲ ಮಾಡಿಕೊಂಡಿದ್ದರು. ಭಾರಿ ಮಳೆಯಿಂದ ಮೆಕ್ಕೆಜೋಳ ಬೆಳೆ ಹಾಳಾದ ಹಿನ್ನೆಲೆ ಸಾಲ ತೀರಿಸಲಾಗದೆ ಮನನೊಂದು ರೈತ ನೇಣಿಗೆ ಕೊರಳೊಡ್ಡಿದ್ದಾರೆ.

ಸಾಲಬಾಧೆ ತಾಳಲಾರದೆ ಹಾವೇರಿಯಲ್ಲಿ ನೇಣಿಗೆ ಶರಣಾದ ರೈತ
ಸಾಂದರ್ಭಿಕ ಚಿತ್ರ

ಹಾವೇರಿ: ಇತ್ತೀಚೆಗೆ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಸಾಲಬಾಧೆ ತಾಳಲಾರದೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಯಕಲಾಸಪುರದಲ್ಲಿ ರೈತರೊಬ್ಬರು ನೇಣಿಗೆ ಶರಣಾಗಿದ್ದಾರೆ. 58 ವರ್ಷದ ಫಕ್ಕೀರಪ್ಪ ಓಲೇಕಾರ ಎಂಬುವವರು ಆತ್ನಹತ್ಯೆಗೆ ಶರಣಾದ ರೈತ. ಫಕ್ಕೀರಪ್ಪ ಓಲೇಕಾರ ಸುಮಾರು 6 ಲಕ್ಷ ಬ್ಯಾಂಕ್ ಮತ್ತು ಕೈಸಾಲ ಮಾಡಿಕೊಂಡಿದ್ದರು. ಭಾರಿ ಮಳೆಯಿಂದ ಮೆಕ್ಕೆಜೋಳ ಬೆಳೆ ಹಾಳಾದ ಹಿನ್ನೆಲೆ ಸಾಲ ತೀರಿಸಲಾಗದೆ ಮನನೊಂದು ರೈತ ನೇಣಿಗೆ ಕೊರಳೊಡ್ಡಿದ್ದಾರೆ.

ರೈತ ನಾಪತ್ತೆ
ತೋಟಕ್ಕೆ ನೀರು ಬಿಡಲು ಹೋದ ರೈತರೊಬ್ಬರು ನಾಪತ್ತೆಯಾಗಿದ್ದಾರೆ. ತೋಟದ ಬಳಿಯೇ ರೈತನ ಬೈಕ್ ನಿಂತಿದೆ. ಆದರೆ ರೈತ ಎಲ್ಲಿಗೆ ಹೋಗಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಆತಂಕದಲ್ಲಿ ಕುಟುಂಬ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ. ದಾವಣಗೆರೆ ತಾಲೂಕಿನ ವಡೇರಹಳ್ಳಿ ಗ್ರಾಮದ ನಿವಾಸಿ ಶ್ರೀನಿವಾಸ್ (42) ಎಂಬುವವರು ನಾಪತ್ತೆಯಾದ ರೈತ.

ರೈತ ಶ್ರೀನಿವಾಸ್ ಅಕ್ಟೋಬರ್ 31ರ ಸಂಜೆ ತೋಟಕ್ಕೆ ನೀರು ಬಿಡಲು ಹೋಗಿದ್ದರು. ಅಂದು ನಾಪತ್ತೆಯಾದ ರೈತ ಈವರೆಗೂ ಪತ್ತೆಯಾಗಿಲ್ಲ. ಹುಡುಕಾಡಿ ಸುಸ್ತಾದ ಪತ್ನಿ ಕುಮಾರಿ ಹಾಗೂ ಸಂಬಂಧಿಕರು ಹದಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಾಪತ್ತೆಯಾಗಿರುವ ರೈತ

ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ ಬಳಿಯ ಕಟ್ಟಡದಲ್ಲಿ  ಬೊಮ್ಮೇನಹಳ್ಳಿಯ ವೆಂಕಟೇಶ್(35) ಶವ ಪತ್ತೆಯಾಗಿದೆ. ‘ನನ್ನ ಸಾವಿಗೆ ಪೊಲೀಸರೇ ಕಾರಣ’ವೆಂದು ವ್ಯಕ್ತಿ ಶವ ಪತ್ತೆಯಾದ ಸ್ಥಳದಲ್ಲಿಯೇ ಗೋಡೆ ಬರಹ ಕೂಡಾ ಪತ್ತೆಯಾಗಿದೆ.

ಇದನ್ನೂ ಓದಿ

ಕೋಲಾರ: ಭಾರೀ ಮಳೆಗೆ ಕೊಳೆಯುತ್ತಿರುವ ಹೂವಿನ ಬೆಳೆ; ರೈತರು ಕಂಗಾಲು

‘ಗಂಧದ ಗುಡಿ’ಯಂತೆಯೇ ಮತ್ತೊಂದು ಮಹತ್ತರ ಯೋಜನೆಯ ತಯಾರಿಯಲ್ಲಿದ್ದ ಪುನೀತ್; ಅಪ್ಪು ಕನಸನ್ನು ಹಂಚಿಕೊಂಡ ನವೀನ್ ಸಜ್ಜು

Click on your DTH Provider to Add TV9 Kannada