AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡಿದು ಚಿತ್​ ಆಗಿ, ಪೆಟ್ರೋಲ್ ಬಂಕ್‌ನಲ್ಲಿ ಕೆಳಗೆ ಬಿದ್ದಿದ್ದ ಕೆಇಬಿ ನೌಕರ: ಹಿಂಬಾಲಿಸಿ ಬಂದು ಆತನಿಂದ 11 ಲಕ್ಷ ಎಗರಿಸಿದರು!

ಕೆಇಬಿ ನೌಕರ ಸಂತೋಷ್ ಜನವರಿ 27 ರಂದು ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ಮನೆಗೆ ಹೊರಟಿದ್ದರು. ನಡುವೆ ಹಣದ ಸಮೇತ ಬಾರ್‌ಗೆ ತೆರಳಿ ಕಂಠಪೂರ್ತಿ ಕುಡಿದಿದ್ದರು. ಸಂತೋಷ್ ಬಳಿ ಹಣ ಇರುವುದನ್ನು ಬಾರ್‌‌ನಲ್ಲಿ ಗಮನಿಸಿದ್ದ ಪ್ರಸನ್ನ, ತನ್ನ ಸ್ನೇಹಿತ ಮಂಜುನಾಥ್‌ಗೆ ಕರೆ ಮಾಡಿ ಸಂತೋಷ್‌ನನ್ನು ಹಿಂಬಾಲಿಸಿದ್ದರು.

ಕುಡಿದು ಚಿತ್​ ಆಗಿ, ಪೆಟ್ರೋಲ್ ಬಂಕ್‌ನಲ್ಲಿ ಕೆಳಗೆ ಬಿದ್ದಿದ್ದ ಕೆಇಬಿ ನೌಕರ: ಹಿಂಬಾಲಿಸಿ ಬಂದು ಆತನಿಂದ 11 ಲಕ್ಷ ಎಗರಿಸಿದರು!
ಕುಡಿದ ಮತ್ತಿನಲ್ಲಿ ಪೆಟ್ರೋಲ್ ಬಂಕ್‌ನಲ್ಲಿ ಕೆಳಗೆ ಬಿದ್ದಿದ್ದ ಕೆಇಬಿ ನೌಕರ: ಆತನನ್ನು ಹಿಂಬಾಲಿಸಿ 11 ಲಕ್ಷ ಎಗರಿಸಿದ ಕದೀಮರು
TV9 Web
| Updated By: ಸಾಧು ಶ್ರೀನಾಥ್​|

Updated on:Feb 05, 2022 | 12:45 PM

Share

ಹಾಸನ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬರು ಪೆಟ್ರೋಲ್ ಬಂಕ್‌ನಲ್ಲಿ ಹಣ ಇಟ್ಟು, ಕೆಳಗೆ ಬಿದ್ದಿದ್ದರು. ಆದರೆ ಅವರನ್ನು ಹಿಂಬಾಲಿಸಿ ಬಂದಿದ್ದ ಖದೀಮರು ಅವರಿಂದ 11 ಲಕ್ಷ ರೂಪಾಯಿ ಎಗರಿಸಿ, ಪರಾರಿಯಾಗಿದ್ದರು. ಕೊನೆಗೆ ಅವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಯಾತನಹಳ್ಳಿ ಗ್ರಾಮದ ಪ್ರಸನ್ನ ಹಾಗೂ ಜೋಡಿ ಕೃಷ್ಣಾಪುರ ಗ್ರಾಮದ ಮಂಜುನಾಥ್ ಬಂಧಿತ ಆರೋಪಿಗಳು. ಆರೋಪಿಗಳು ಕೆಇಬಿ ನೌಕರ ಸಂತೋಷ್ ಎಂಬುವವರಿಗೆ ಸೇರಿದ ಹಣವನ್ನು ಎಗರಿಸಿದ್ದರು.

ಕೆಇಬಿ ನೌಕರ ಸಂತೋಷ್ ಜನವರಿ 27 ರಂದು ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ಮನೆಗೆ ಹೊರಟಿದ್ದರು. ನಡುವೆ ಹಣದ ಸಮೇತ ಬಾರ್‌ಗೆ ತೆರಳಿ ಕಂಠಪೂರ್ತಿ ಕುಡಿದಿದ್ದರು. ಸಂತೋಷ್ ಬಳಿ ಹಣ ಇರುವುದನ್ನು ಬಾರ್‌‌ನಲ್ಲಿ ಗಮನಿಸಿದ್ದ ಪ್ರಸನ್ನ, ತನ್ನ ಸ್ನೇಹಿತ ಮಂಜುನಾಥ್‌ಗೆ ಕರೆ ಮಾಡಿ ಸಂತೋಷ್‌ನನ್ನು ಹಿಂಬಾಲಿಸಿದ್ದರು.

ಹಣದ‌ ಸಮೇತ ಪೆಟ್ರೋಲ್ ಹಾಕಿಸಲು ಸಂತೋಷ್ ಹಾಸನದ ಬಿ. ಕಾಟಿಹಳ್ಳಿಯ ಅರಸೀಕೆರೆ ರಸ್ತೆಯ ಪೆಟ್ರೋಲ್ ಬಂಕ್​ಗೆ ತೆರಳಿದ್ದ. ಆದರೆ ಕುಡಿದ ಮತ್ತಿನಲ್ಲಿ ಪೆಟ್ರೋಲ್ ಬಂಕ್‌ನಲ್ಲೇ ಹಣ ಇಟ್ಟು, ಕೆಳಗೆ ಬಿದ್ದುಬಿಟ್ಟಿದ್ದ. ಕಂಠಪೂರ್ತಿ ಕುಡಿದಿದ್ದರಿಂದ ಬಂಕ್‌ನಲ್ಲೇ ನಿದ್ರೆಗೆ ಜಾರಿದ್ದ ಸಂತೋಷ್! ಆದರೆ ಆತನನ್ನು ಹಿಂಬಾಲಿಸಿದ್ದ ಕಳ್ಳರು ಪೆಟ್ರೋಲ್ ಬಂಕ್ ಹೊರಗೆ ಕಾಯುತ್ತಿದ್ದರು. ಸುಮಾರು 45 ನಿಮಿಷ ಆದರೂ ಸುಖನಿದ್ರೆಯಲ್ಲಿದ್ದ ಸಂತೋಷ ಪೆಟ್ರೋಲ್ ಬಂಕ್‌ನಿಂದ ಹೊರಗೆ ಬಂದಿರಲಿಲ್ಲ.

ಆಗ ಪ್ರಸನ್ನ ಮತ್ತು ಮಂಜುನಾಥ್ ಬಂಕ್‌ ಒಳಗೆ ಪ್ರವೇಶಿಸಿದ್ದಾರೆ. ಬಂದವರೇ ಕೆಳಗೆಬಿದ್ದಿದ್ದ ಸಂತೋಷನಿಂದ ಹಣ ಎಗರಿಸಿ ಎಸ್ಕೇಪ್ ಆಗಿದ್ದಾರೆ. ಇಡೀ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಎಚ್ಚೆತ್ತ ಸಂತೋಷ, ಬಡಾವಣೆ ಪೊಲೀಸ್ ಠಾಣೆಗೆ ತೆರಳಿ ಹಿಂಗಿಂಗೆಲ್ಲಾ ಆಯ್ತು ಅಂತಾ ದೂರು ನೀಡಿದ್ದಾನೆ. ಸಿಸಿಟಿವಿ ನೆರವಿನೊಂದಿಗೆ ಪ್ರಕರಣ ಭೇದಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 9,12,000 ಲಕ್ಷ ರೂ ನಗದು, ಎರಡು ಮೊಬೈಲ್ ಹಾಗೂ ಒಂದು ಪಲ್ಸರ್ ಬೈಕ್ ವಶ ಪಡಿಸಿಕೊಂಡಿದ್ದಾರೆ.

ಅತ್ತಿಬೆಲೆ ಟೋಲ್ ಬಳಿ ಎಸ್​ಯುವಿ ಕಾರು ಡಿಕ್ಕಿ, ಅಪರಿಚಿತ ಪಾದಚಾರಿ ಸ್ಥಳದಲ್ಲಿಯೇ ಸಾವು ಆನೇಕಲ್: ರಾಜಧಾನಿ ಬೆಂಗಳೂರಿನ ಹೊರವಲಯದಲ್ಲಿ ಟೋಲ್ ಬಳಿ ಎಸ್​ಯುವಿ ಕಾರು ಡಿಕ್ಕಿಯಾಗಿ ಅಪರಿಚಿತ ಪಾದಚಾರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹೊಸೂರು ಮುಖ್ಯ ರಸ್ತೆಯ ಅತ್ತಿಬೆಲೆ ಟೋಲ್ ಬಳಿ (attibele toll gate) ಎಸ್​ಯುವಿ ಕಾರು ಡಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ಎಸ್​ಯುವಿ ಕಾರು ಮತ್ತು ಅದರ ಚಾಲಕನನ್ನು ಅತ್ತಿಬೆಲೆ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಸುಮಾರು 30 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ರಸ್ತೆ ದಾಟುವ ವೇಳೆ ಮಹೀಂದ್ರಾ ಎಸ್​ಯುವಿ ಕಾರಿಗೆ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ. KA-03 NK-6988 ನಂಬರಿನ ಮಹೀಂದ್ರಾ ಎಸ್ ಯುವಿ ಕಾರು ಇದಾಗಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಪಾದಚಾರಿ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

Also Read: ನಾನು ವಿಧಾನಸೌಧದಲ್ಲಿ ಹಿಜಾಬ್ ಧರಿಸಿಯೇ ಕೂರುತ್ತೇನೆ, ಧೈರ್ಯವಿದ್ರೆ ಯಾರಾದರೂ ತಡೆಯಲಿ: ಶಾಸಕಿ ಖನೀಜ್ ಪಾತೀಮಾ ಸವಾಲ್

Published On - 12:43 pm, Sat, 5 February 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ