ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಎಚ್​ಡಿ ರೇವಣ್ಣಗೆ ಬಿಗ್ ಶಾಕ್ ಕೊಟ್ಟ ಹೈಕೋರ್ಟ್​

| Updated By: ರಮೇಶ್ ಬಿ. ಜವಳಗೇರಾ

Updated on: Jun 02, 2024 | 1:33 PM

ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಎಚ್​ಡಿ ರೇವಣ್ಣ ಅವರು ಜಾಮೀನು ಪಡೆದುಕೊಂಡು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಆದ್ರೆ, ಇದನ್ನು ಎಸ್​ಐಟಿ ಪ್ರಶ್ನಿಸಿದ್ದು, ಇದೀಗ ಹೈಕೋರ್ಟ್​, ರೇವಣ್ಣಗೆ ಬಿಗ್ ಶಾಕ್ ಕೊಟ್ಟಿದೆ.

ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಎಚ್​ಡಿ ರೇವಣ್ಣಗೆ ಬಿಗ್ ಶಾಕ್ ಕೊಟ್ಟ  ಹೈಕೋರ್ಟ್​
ಎಚ್​ಡಿ ರೇವಣ್ಣ
Follow us on

ಹಾಸನ/ಬೆಂಗಳೂರು, (ಜೂನ್ 02): ಸಂತ್ರಸ್ತ ಮಹಿಳೆ ಕಿಡ್ನ್ಯಾಪ್ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡೆಗಡೆಯಾಗಿರುವ ಶಾಸಕ ಎಚ್​ಡಿ ರೇವಣ್ಣಗೆ (HD Revanna ) ಹೈಕೋರ್ಟ್​ ನೋಟಿಸ್ ಜಾರಿ ಮಾಡಿದೆ. ಹೊಳೆನರಸೀಪುರ ಪೊಲೀಸ್ ಠಾಣೆ PSI ಅಜಯ್​​ ಅವರು ಇಂದು ಹರದನಹಳ್ಳಿ ಮನೆಯಲ್ಲಿ ರೇವಣ್ಣಗೆ ಹೈಕೋರ್ಟ್​ನ ನೊಟೀಸ್ ಮುಟ್ಟಿಸಿದ್ದು,ನೋಟಿಸ್ ತಲುಪಿದ ಐದು ದಿನದೊಳಗೆ ಹಾಜರಾಜಗಲು ಕೋರ್ಟ್ ನೋಟಿಸ್​ನಲ್ಲಿ ತಿಳಿಸಿದೆ. ರೇವಣ್ಣ ಅವರ ಜಾಮೀನು ಪ್ರಶ್ನಿಸಿ ಎಸ್​ಐಟಿ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್​ ಇದೀಗ ರೇವಣ್ಣಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.

ಮೈಸೂರಿನ ಕೆಆರ್​ಪೇಟೆಯಲ್ಲಿ ದಾಖಲಾಗಿರುವ ಸಂತ್ರಸ್ತ ಮಹಿಳೆ ಕಿಡ್ನ್ಯಾಪ್​ ಪ್ರಕರಣದಲ್ಲಿ ಎಚ್​ಡಿ ರೇವಣ್ಣ ಅವರನ್ನು ಎಸ್​ಐಟಿ ಬಂಧಿಸಿತ್ತು. ಆದ್ರೆ, ರೇವಣ್ಣ ಅವರು ಕೋರ್ಟ್​ನಿಂದ ಜಾಮೀನು ಪಡೆದುಕೊಂಡು ಜೈಲಿನಿಂದ ಆಚೆಬಂದಿದ್ದರು. ಆದ್ರೆ, ಇದೀಗ ಎಸ್ಐಟಿ ಅಧಿಕಾರಿಗಳು ರೇವಣ್ಣ ಅವರ ಜಾಮೀನು ಪ್ರಶ್ನಿಸಿ ಹೈಕೋರ್ಟ್​ ಅರ್ಜಿ ಸಲ್ಲಿಸಿದ್ದಾರೆ. ಇದರಿಂದ ರೇವಣ್ಣಗೆ ಮತ್ತೆ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ಮೊಂಡಾಟ: ಹಾಸನ ಲೋಕಸಭೆ ರಿಸಲ್ಟ್​ಗೂ ಮುನ್ನ ಎಸ್​ಐಟಿ ಮೆಗಾ ಪ್ಲಾನ್

ಇನ್ನು ಇದೇ ಮಹಿಳೆಯ ಅಪಹರಣ ಪ್ರಕರಣದಲ್ಲಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ವಜಾ ಮಾಡಿದೆ. ಈ ಹಿನ್ನೆಲೆಯಲ್ಲಿ ಎಸ್​ಐಟಿ ಅಧಿಕಾರಿಗಳು ಭವಾನಿ ರೇವಣ್ಣ ಅವರ ಬಂಧನಕ್ಕೆ ಮುಂದಾಗಿದ್ದಾರೆ. ಆದ್ರೆ, ಇದನ್ನು ಅರಿತ ಭವಾನಿ ರೇವಣ್ಣ ಅವರು ತಲೆಮರಿಸಿಕೊಂಡಿದ್ದಾರೆ.

Published On - 1:33 pm, Sun, 2 June 24