AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭವಾನಿಯವರು ಎರಡೂ ಮಂಡಿಗಳ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ: ರೇವಣ್ಣ ಪತ್ನಿಯ ಇನ್ನೊಬ್ಬ ಲಾಯರ್

ಭವಾನಿಯವರು ಎರಡೂ ಮಂಡಿಗಳ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ: ರೇವಣ್ಣ ಪತ್ನಿಯ ಇನ್ನೊಬ್ಬ ಲಾಯರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 01, 2024 | 8:07 PM

Share

ಅವರೆಲ್ಲಿದ್ದಾರೆ ಅಂತ ಗೊತ್ತಿದ್ರೆ ನೇರವಾಗಿ ಅಲ್ಲಿಗೆ ಹೊಗುತ್ತಿದ್ದೆ ಇಲ್ಲಿಗೆ ಬರುವ ಅವಶ್ಯಕತೆ ಇರಲಿಲ್ಲ ಅಂತ ಹೇಳುವ ಲಾಯರ್, ಬೆಳಗ್ಗೆಯಿಂದ ಕಾದರೂ ಭವಾನಿಯವರು ಭೇಟಿಯಾಗದ ಕಾರಣ ಎಸ್ಐಟಿ ಅಧಿಕಾರಿಗಳು ಏನು ಕ್ರಮ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ, ಇವತ್ತು ಮಹಜರ್ ಮಾಡಿಕೊಂಡು ಹೋಗಿದ್ದಾರೆ ಎನ್ನುತ್ತಾರೆ.

ಹಾಸನ: ಸುರಿಯುತ್ತಿರುವ ಮಳೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡುತ್ತಿರುವ ಇವರು ಸಹ ಹೆಚ್ ಡಿ ರೇವಣ್ಣರ (HD Revanna) ಪತ್ನಿ ಭವಾನಿ ರೇವಣ್ಣರ (Bhavani Revanna) ಲಾಯರ್. ಭವಾನಿ ತಮ್ಮೊಂದಿಗೆ ವಕೀಲರ ಪಟಾಲಂ ಇಟ್ಟುಕೊಂಡಂತಿದೆ. ಈ ವಕೀಲೆ ಸಹ ನಂಗೊತ್ತಿಲ್ಲ, ಮಾಹಿತಿಯಿಲ್ಲ ಎನ್ನುತ್ತಾರಾದರೂ ಕೆಲ ಬೇರೆ ಸಂಗತಿಗಳನ್ನು ಹೇಳುತ್ತಾರೆ. ಭವಾನಿಯವರ ಆರೋಗ್ಯ ಸರಿಯಿಲ್ಲ ಮತ್ತು ಕುಟುಂಬದಲ್ಲಿ ಸಾವಿನ ಪ್ರಕರಣ ನಡೆದಿರುವುದರಿಂದ ದುಃಖದಲ್ಲಿದ್ದಾರೆ ಎಂದು ಹೇಳುತ್ತಾರೆ. ಭವಾನಿ ಅವರ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡುವ ವಕೀಲಮ್ಮ ಅವರ ಎರಡೂ ಮಂಡಿಗಳ ಆಪರೇಶನ್ (knee operation) ಆಗಿದೆ ಎನ್ನುತ್ತಾರೆ. ಜೊತೆಗೆ ಅವರ ಅಣ್ಣ ತೀರಿಕೊಂಡಿರುವುದರಿಂದ ದುಃಖದಲ್ಲಿದ್ದಾರಂತೆ. ಅವರೆಲ್ಲಿದ್ದಾರೆ ಅಂತ ಗೊತ್ತಿದ್ರೆ ನೇರವಾಗಿ ಅಲ್ಲಿಗೆ ಹೊಗುತ್ತಿದ್ದೆ ಇಲ್ಲಿಗೆ ಬರುವ ಅವಶ್ಯಕತೆ ಇರಲಿಲ್ಲ ಅಂತ ಹೇಳುವ ಲಾಯರ್, ಬೆಳಗ್ಗೆಯಿಂದ ಕಾದರೂ ಭವಾನಿಯವರು ಭೇಟಿಯಾಗದ ಕಾರಣ ಎಸ್ಐಟಿ ಅಧಿಕಾರಿಗಳು ಏನು ಕ್ರಮ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ, ಇವತ್ತು ಮಹಜರ್ ಮಾಡಿಕೊಂಡು ಹೋಗಿದ್ದಾರೆ ಎನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ನಾಪತ್ತೆಯಾಗಿರುವ ಭವಾನಿ ರೇವಣ್ಣ ಹಾಗೂ ಕಾರು ಚಾಲಕನಿಗಾಗಿ ಎಸ್​ಐಟಿ ಹುಡುಕಾಟ