ಬೀದಿ ಬದಿಯಲ್ಲಿ ಮಲಗಿದ್ದ ವೃದ್ಧೆಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಹಾವೇರಿ ಜನ

ಬಿಸಿಲಿನ ಝಳಕ್ಕೆ ತೀವ್ರ ಅಸ್ವಸ್ಥರಾಗಿ ಮಲಗಿದ್ದ ವೃದ್ಧೆಯನ್ನು ನೋಡಿದ ಜನರು ಹಾಗೆ ಓಡಾಡುತ್ತಿದ್ದರು. ಹುಕ್ಕೇರಿ ಮಠದ ಬಳಿ ಇರುವ ಕೆಲವು ಮಹಿಳೆಯರು ಹಾಗೂ ಸ್ಥಳೀಯರು ವೃದ್ಧೆಯ ಪರಿಸ್ಥಿತಿ ಕಂಡು ಮಮ್ಮಲ ಮರುಗುತ್ತಿದ್ದರು.

ಬೀದಿ ಬದಿಯಲ್ಲಿ ಮಲಗಿದ್ದ ವೃದ್ಧೆಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಹಾವೇರಿ ಜನ
ರಸ್ತೆ ಬದಿಯಲ್ಲಿ ಮಲಗಿರುವ ವೃದ್ಧೆ, ವೃದ್ಧೆಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಜನ
Follow us
sandhya thejappa
|

Updated on: May 02, 2021 | 9:33 AM

ಹಾವೇರಿ: ಕಳೆದ ಕೆಲವು ತಿಂಗಳಿನಿಂದ ಕೊರೊನಾ ಎರಡನೇ ಅಲೆಯ ಅಬ್ಬರ ಹೆಚ್ಚಾಗುತ್ತಿದೆ. ಅದರಲ್ಲೂ ಯಾರನ್ನೂ ಮುಟ್ಟಿ ಆಸ್ಪತ್ರೆಗೆ ಸೇರಿಸಲು ಹಿಂದೇಟು ಹಾಕುವ ಪರಿಸ್ಥಿತಿ ಈಗ ರಾಜ್ಯದಲ್ಲಿ ನಿರ್ಮಾಣವಾಗಿದೆ. ಅನಾರೋಗ್ಯಕ್ಕೆ ಒಳಗಾದವರನ್ನು ಅವರ ಮನೆಯವರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಭಯಪಡುವ ವಾತಾವರಣವಿದೆ. ಆದರೆ ಹಾವೇರಿ ನಗರದಲ್ಲಿರುವ ಹುಕ್ಕೇರಿ ಮಠದ ಸಮೀಪ ಸುಮಾರು ಅರವತ್ತು ವರ್ಷದ ವೃದ್ಧೆಯೊಬ್ಬರು ಅಸ್ವಸ್ಥಗೊಂಡು ರಸ್ತೆ ಬದಿಯಲ್ಲಿರುವ ಚರಂಡಿ ಬಳಿ ಮಲಗಿದ್ದರು. ಆ ವೃದ್ಧೆಯನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಜನರು ಮಾನವೀಯತೆ ಮೆರೆದಿದ್ದಾರೆ.

ಬಿಸಿಲಿನ ಝಳಕ್ಕೆ ತೀವ್ರ ಅಸ್ವಸ್ಥರಾಗಿ ಮಲಗಿದ್ದ ವೃದ್ಧೆಯನ್ನು ನೋಡಿದ ಜನರು ಹಾಗೆ ಓಡಾಡುತ್ತಿದ್ದರು. ಹುಕ್ಕೇರಿ ಮಠದ ಬಳಿ ಇರುವ ಕೆಲವು ಮಹಿಳೆಯರು ಹಾಗೂ ಸ್ಥಳೀಯರು ವೃದ್ಧೆಯ ಪರಿಸ್ಥಿತಿ ಕಂಡು ಮಮ್ಮಲ ಮರುಗುತ್ತಿದ್ದರು. ಬಿಸಿಲಿನ ಬೇಗೆಯಿಂದ ರಕ್ಷಣೆ ಪಡೆಯಲು ಏನೇನೋ ಹಾಕಿಕೊಂಡು ಮಲಗಿದ್ದ ವೃದ್ಧೆಯನ್ನು ನೋಡಿದ ಮಹಿಳೆಯರು ಹಾಗೂ ಕೆಲವು ಸ್ಥಳೀಯರು ಆಸ್ಪತ್ರೆಗೆ ಸೇರಿಸುವ ಮನಸ್ಸು ಮಾಡಿದರು. ಕೆಲಕಾಲ ವೃದ್ಧೆಯನ್ನು ಸ್ಥಳಾಂತರ ಮಾಡಲು ಸೂಕ್ತ ವ್ಯವಸ್ಥೆಯಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಗಮನಿಸಿದ ಸ್ಥಳೀಯ ಯುವಕರಾದ ಕಿರಣ ಅಂಗಡಿ ಹಾಗೂ ಕೆಲವು ಸ್ಥಳೀಯರು ಸೇರಿಕೊಂಡು 108 ಅಂಬ್ಯುಲೆನ್ಸ್ ವಾಹನ ಕರೆಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಇದು ಸ್ಥಳೀಯರ ಮಾನವೀಯತೆಗೆ ಸಾಕ್ಷಿಯಾಗಿತ್ತು.

ಸ್ಥಳೀಯರು ಹಾಗೂ ಮಹಿಳೆಯರು ಸುಮಾರು ಎರಡು ಗಂಟೆಗಳ ಕಾಲ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನ ಪಟ್ಟರು. ಕೊನೆಗೂ ಹರಸಾಹಸ ಮಾಡಿ ವೃದ್ಧೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಕಾರ್ಯ ಮಾಡಿದ್ದಾರೆ. ಆದರೆ ತೀವ್ರ ಅನಾರೋಗ್ಯಕ್ಕೆ ಒಳಗಾದಂತೆ ಕಂಡುಬಂದ ವೃದ್ಧೆ ತನ್ನ ಮನೆಯವರ ಪರಿಚಯ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ. ಅದರಲ್ಲೂ ಬಿಸಿಲಿಗೆ ಬಹಳಷ್ಟು ಸುಸ್ತಾಗಿದ್ದರಿಂದ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿದೆವು. ಯಾರೇ ಆಗಲಿ ವಯಸ್ಸಾದ ತಂದೆ- ತಾಯಿ, ಅಜ್ಜಿಯರನ್ನು ಹೀಗೆ ಹೊರಗಡೆ ಬಿಡಬಾರದು. ವಯಸ್ಸಾದವರನ್ನು ಆರೈಕೆ ಮಾಡಬೇಕು. ಇಲ್ಲದಿದ್ದರೆ ಎಲ್ಲ ಇದ್ದರೂ ಏನೂ ಇಲ್ಲ ಎಂಬಂತಹ ನೋವಿನಲ್ಲಿ ದಿನಗಳನ್ನು ಕಳೆಯಬೇಕಾಗುತ್ತದೆ ಎಂದು ಸ್ಥಳೀಯ ಯುವಕ ಕಿರಣ ಅಂಗಡಿ ಅಭಿಪ್ರಾಯಪಟ್ಟರು.

ಇದನ್ನೂ ಓದಿ

ರೋಗಿಗಳ ನೆರವಿಗೆ ನಿಂತು, ಅನಾಥ ಶವಗಳಿಗೆ ಮುಕ್ತಿ ಕೊಡುತ್ತಿದ್ದಾರೆ ಹಾವೇರಿಯ ಅಬ್ದುಲ್ ಖಾದರ

ಕುಡಿಯುವ ನೀರಿಗಾಗಿ ಹಾಹಾಕಾರ; ಕೊರೊನಾ ಮರೆತು ನಾ ಮುಂದು ತಾ ಮುಂದು ಎಂದು ಮುಗಿಬಿದ್ದ ಜನ

(haveri People admitted old woman to hospital)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ