ಜೀವಂತವಾಗಿದೆಯೇ ಬಿಬಿಎಂಪಿ ಆರೋಗ್ಯ ವಿಭಾಗ? ಶವ ದಹನ ಹೊಗೆಯಿಂದ ಕಂಗಾಲಾಗಿದ್ದಾರೆ ಸ್ಥಳೀಯರು

ಕೆಂಗೇರಿ ಉಪನಗರ ಕೊಮ್ಮಘಟ್ಟ ರಸ್ತೆಯಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಪ್ರತಿನಿತ್ಯ 25ರಿಂದ 30 ಶವಗಳನ್ನು ದಹನ ಮಾಡಲಾಗುತ್ತಿದೆ. ಹೀಗಾಗಿ ಬೆಳಗ್ಗೆಯಿಂದ ರಾತ್ರಿಯವರೆಗೂ ನಿರಂತರವಾಗಿ ಚಿತಾಗಾರದಿಂದ ದಟ್ಟ ಹೊಗೆ ಹೊರ ಹೊಮ್ಮುತ್ತಿದೆ. ಇದರಿಂದಾಗಿ ಚಿತಾಗಾರದ ಸುತ್ತಮುತ್ತಲಿನ ಪ್ರದೇಶದಲ್ಲಿ ಹೊಗೆ ತುಂಬಿಕೊಂಡಿದ್ದು ಜನ ಆತಂಕಪಡುವ ಸ್ಥಿತಿ ನಿರ್ಮಾಣವಾಗಿದೆ.

ಜೀವಂತವಾಗಿದೆಯೇ ಬಿಬಿಎಂಪಿ ಆರೋಗ್ಯ ವಿಭಾಗ? ಶವ ದಹನ ಹೊಗೆಯಿಂದ ಕಂಗಾಲಾಗಿದ್ದಾರೆ ಸ್ಥಳೀಯರು
ಶವ ದಹನ ಹೊಗೆ ಹೊರ ಹೊಮ್ಮುತ್ತಿರುವುದು
Follow us
ಆಯೇಷಾ ಬಾನು
|

Updated on: May 02, 2021 | 10:27 AM

ಬೆಂಗಳೂರು: ಮಹಾಮಾರಿ ಕೊರೊನಾದ ಎರಡನೇ ಅಲೆಯ ಭೀಕರತೆ ಗಂಟೆ ಗಂಟೆಗೂ ಹೆಚ್ಚುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಿಲ್ಲರ್ ಕೊರೊನಾ ಮರಣ ಮೃದಂಗ ಬಾರಿಸುತ್ತಿದೆ. ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರ ನಡುವೆ ಕೊರೊನಾ ಮೃತರ ಶವಗಳ ದಹನದಿಂದ ಜನ ಸಾಮಾನ್ಯರಿಗೂ ಭಾರಿ ತೊಂದರೆ ಉಂಟಾಗುತ್ತಿದ್ದು ಚಿತಾಗಾರಗಳಿರುವ ಸುತ್ತಮುತ್ತಲಿನ ಪ್ರದೇಶ ದುರ್ನಾತ ಬೀರುತ್ತಿದೆ.

ಕೊವಿಡ್ನಿಂದ ಮೃತಪಟ್ಟವರ ದಹನ ಕ್ರಿಯೆಗೆಂದು ಸೂಚಿಸಲಾಗಿರುವ ಬೆಂಗಳೂರಿನ ಚಿತಾಗಾರಗಳಲ್ಲಿ ಪ್ರತಿ ದಿನವೂ 20-30 ಮೃತ ದೇಹಗಳನ್ನು ಸುಡಲಾಗುತ್ತಿದೆ. ಇದರಿಂದ ಮೃತದೇಹಗಳನ್ನು ತಂದು ಕ್ಯೂನಲ್ಲಿ ನಿಲ್ಲುವ ಸ್ಥಿತಿ ಕುಟುಂಬಸ್ಥರು, ಆಂಬ್ಯುಲೆನ್ಸ್ಗಳಿಗಿದ್ದರೆ.. ಕೊಂಚವೂ ಬಿಡುವಿಲ್ಲದೆ ತಿಂಡಿ-ಊಟಕ್ಕೂ ಸಮಯವಿಲ್ಲದೆ ದೇಹ ಸುಡುವ ಕಾರ್ಯದಲ್ಲಿ ಚಿತಾಗಾರ ಸಿಬ್ಬಂದಿ ಬೇಸತ್ತಿದ್ದಾರೆ. ಇದರ ನಡುವೆ ಚಿತಾಗಾರಗಳಿರುವ ಸುತ್ತಮುತ್ತಲಿನ ಪ್ರದೇಶಗಳ ಜನ ಮತ್ತೊಂದು ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ಕೆಂಗೇರಿ ಉಪನಗರ ಕೊಮ್ಮಘಟ್ಟ ರಸ್ತೆಯಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಪ್ರತಿನಿತ್ಯ 25ರಿಂದ 30 ಶವಗಳನ್ನು ದಹನ ಮಾಡಲಾಗುತ್ತಿದೆ. ಹೀಗಾಗಿ ಬೆಳಗ್ಗೆಯಿಂದ ರಾತ್ರಿಯವರೆಗೂ ನಿರಂತರವಾಗಿ ಚಿತಾಗಾರದಿಂದ ದಟ್ಟ ಹೊಗೆ ಹೊರ ಹೊಮ್ಮುತ್ತಿದೆ. ಇದರಿಂದಾಗಿ ಚಿತಾಗಾರದ ಸುತ್ತಮುತ್ತಲಿನ ಪ್ರದೇಶದಲ್ಲಿ ಹೊಗೆ ತುಂಬಿಕೊಂಡಿದ್ದು ಜನ ಆತಂಕಪಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಕಂಗೇರಿ ಚಿತಾಗಾರದಲ್ಲಿ 4ರಿಂದ 5 ಶವ ದಹನ ಮಾಡಲಾಗುತ್ತಿತ್ತು. ಈಗ ಇಲ್ಲಿ ಏಕಕಾಲದಲ್ಲಿ 2 ಶವ ಸಂಸ್ಕಾರಕ್ಕೆ ಅವಕಾಶವಿದೆ. ಗಂಟೆಗೆ 2 ಶವ ಸಂಸ್ಕಾರ ಆಗುತ್ತಿದೆ ಎಂದರೂ ದಿನ 14 -16ಗಂಟೆ ಅವಧಿಯಲ್ಲಿ 25 -30 ಕೊವಿಡ್ ಸೋಂಕಿನಿಂದ ಮೃತಪಟ್ಟವರ ಸಂಸ್ಕಾರ ನಡೆಯುತ್ತಿದೆ. ಪಿಪಿಇ ಕಿಟ್ ಸಹಿತ ಪಾರ್ಥಿವ ಶರೀರ ದಹನ ಮಾಡುತ್ತಿರುವುದರಿಂದ ಇಡೀ ಪ್ರದೇಶದಲ್ಲಿ ದುರ್ನಾತ ಬರುತ್ತಿದೆ.

ಬಂಡೇಮಠ, ವಿನಾಯಕ ನಗರ, ಸನ್ ಸಿಟಿ ಸೇರಿ ಕಂಗೇರಿ ಉಪನಗರದ ಹಲವು ಪ್ರದೇಶಗಳಲ್ಲಿ ಬೂದಿ, ಹೊಗೆ ವಾತಾವರಣ ಸೇರುತ್ತಿದೆ. ನೆಮ್ಮದಿಯಿಂದ ಉಸಿರಾಡಲೂ ಆಗದೆ ಬಡಾವಣೆಯ ಜನ ಮನೆ ಬಾಗಿಲು, ಕಿಟಕಿ ಹಾಕಿಕೊಂಡು ಜೀವನ ನಡೆಸಬೇಕಾದ ಸ್ಥಿತಿ ಬಂದಿದೆ. ಹೀಗೆ ನಿರಂತರವಾಗಿ ಶವ ಸಂಸ್ಕಾರದ ಹೊಗೆ ಕೆಂಗೇರಿ ಸುತ್ತಮುತ್ತಲ ಪ್ರದೇಶದಲ್ಲಿ ಆವರಿಸುತ್ತಿದ್ದರೆ ಅದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಆಗುವ ಹಾನಿ ಅಂದಾಜು ಮಾಡುವುದೂ ಕಷ್ಟಸಾಧ್ಯ. ಬಿಬಿಎಂಪಿಯಲ್ಲಿರುವ ಆರೋಗ್ಯ ಇಲಾಖೆ ಏನು ಮಾಡುತ್ತಿದೆ? ಎಂಬ ಪ್ರಶ್ನೆ ಎದುರಾಗಿದೆ. ಆದಷ್ಟು ಬೇಗ ಅಧಿಕಾರಿಗಳು ಈ ಸಮಸ್ಯೆ ಬಗ್ಗೆ ಚರ್ಚೆ ನಡೆಸಿ ಸಾರ್ವಜನಿಕರ ಆತಂಕವನ್ನು ದೂರ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇನ್ನು ಶವಸಂಸ್ಕಾರವನ್ನು ನಿರ್ವಹಿಸಲು ಇಲಾಖೆಯಿಂದ ನಿಯೋಜನೆಯಾಗಿರುವ ನೋಡಲ್ ಅಧಿಕಾರಿ ರಾಘವೇಂದ್ರ ಈ ಕುರಿತು ಮಾತನಾಡಿದ್ದು “ನಗರದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಚಿತಾಗಾರದಲ್ಲಿ ಅನಿವಾರ್ಯವಾಗಿ 25ರಿಂದ 30 ಶವಗಳ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ. ನಗರದ ಹೊರವಲಯದಲ್ಲಿ ಎರಡು ಚಿತಾಗಾರಗಳು ನಿರ್ಮಾಣವಾಗಿರುವುದರಿಂದ ಮುಂದಿನ ದಿನಗಳಲ್ಲಿ ಶವ ದಹನದ ಪ್ರಮಾಣ ಕಡಿಮೆಯಾಗಬವುದು” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸುಮನಹಳ್ಳಿ ಚಿತಾಗಾರದಲ್ಲಿ ಸಾಲು ಸಾಲು ಶವ | ಕರ್ಫ್ಯೂ ನಡುವೆಯೂ ಕೊರೊನಾ ರಣಕೇಕೆ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ