Kannada Sahitya Sammelana 2023: ರಾಜ್ಯದ ಪ್ರತಿಯೊಬ್ಬ ಸಂಸದ 3 ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳಿ- ಸಮ್ಮೇಳನದ ಸರ್ವಾಧ್ಯಕ್ಷ ದೊಡ್ಡರಂಗೇಗೌಡ ಕರೆ

ಏಲಕ್ಕಿ ನಗರಿ, ದಾಸ ಶ್ರೇಷ್ಠ ಕನಕದಾಸರ, ಸರ್ವಜ್ಞನ ನಾಡು ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ದೊಡ್ಡರಂಗೇಗೌಡರು ಮುಚ್ಚುತ್ತಿರುವ ಕನ್ನಡ ಶಾಲೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.

Kannada Sahitya Sammelana 2023: ರಾಜ್ಯದ ಪ್ರತಿಯೊಬ್ಬ ಸಂಸದ 3 ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳಿ- ಸಮ್ಮೇಳನದ ಸರ್ವಾಧ್ಯಕ್ಷ ದೊಡ್ಡರಂಗೇಗೌಡ ಕರೆ
Follow us
TV9 Web
| Updated By: ವಿವೇಕ ಬಿರಾದಾರ

Updated on:Jan 06, 2023 | 3:00 PM

ಹಾವೇರಿ: ರಾಜ್ಯದ ಪ್ರತಿಯೊಬ್ಬ ಸಂಸದ ಕೂಡ ಮೂರು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳಬೇಕು. ಆಗ ಕನ್ನಡ ಶಾಲೆಗಳು ಉಳಿಯುತ್ತವೆ ಎಂದು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ (86th akhil bharat kannada sahitya sammelana)ಸರ್ವಾಧ್ಯಕ್ಷ ದೊಡ್ಡರಂಗೇಗೌಡರು ಕರೆ ನೀಡಿದ್ದಾರೆ. ಹಿಂದೊಮ್ಮೆ ಒಬ್ಬ ಮುಖ್ಯಮಂತ್ರಿ ಕನ್ನಡದ ಶಾಲೆಗಳನ್ನು ಮುಚ್ಚಿಸಿದ್ದರು. ಒಂದು ಕನ್ನಡ ಶಾಲೆ ಮುಚ್ಚಿದಾಗ ನಾನು ಕಣ್ಣೀರು ಹಾಕಿದ್ದೆ ಎಂದು ವಿಷಾದ ವ್ಯಕ್ತಪಡಿಸಿದರು.

ಏಲಕ್ಕಿ ನಗರಿ, ದಾಸ ಶ್ರೇಷ್ಠ ಕನಕದಾಸರ, ಸರ್ವಜ್ಞನ ನಾಡು ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಈ ವೇಳೆ ಸರ್ವಾಧ್ಯಕ್ಷ ದೊಡ್ಡರಂಗೇಗೌಡರು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವ ವಿಚಾರವಾಗಿ ಮಾತನಾಡಿ ಪಕ್ಕದ ಕೇರಳದವರು ಶಾಸ್ತ್ರೀಯ ಭಾಷೆ ಸ್ಥಾನಮಾನಕ್ಕೆ ಸಾಕಷ್ಟು ಅನುದಾನ ತಂದಿದ್ದಾರೆ. ಆದರೆ ನಮ್ಮಲ್ಲಿ ಇನ್ನೂ ನಾವು ಕಚೇರಿ ಹುಡುಕುವುದರಲ್ಲಿದ್ದೇವೆ. ನಾವು ಶಾಸ್ತ್ರೀಯ ಸ್ಥಾನಮಾನ ಉಳಿಸಿಕೊಳ್ಳಬೇಕಿದೆ. ಇದಕ್ಕಾಗಿ ನಮ್ಮ ಸಂಸದರು ಹೋರಾಟವಾದರು ಮಾಡಿ. ನಾವೂ‌ ನಿಮ್ಮ ಜೊತೆಗೆ ಹೋರಾಟಕ್ಕೆ ಬರುತ್ತೇವೆ. ದೆಹಲಿಗೆ ಬೇಕಾದರೆ ನಾವು ಬಂದು ಶಾಸ್ತ್ರೀಯ ಭಾಷೆಯ ಮಹತ್ವ ತಿಳಿಸಿಕೊಡುತ್ತೇವೆ ಎಂದು ಹೇಳಿದರು.

ಹಾಡಿನ ಮೂಲಕ ತಮ್ಮ ಭಾಷಣ ಆರಂಭಿಸಿದ ಸರ್ವಾಧ್ಯಕ್ಷರು

ಇನ್ನೂ ಸರ್ವಾಧ್ಯಕ್ಷರು ಹಾಡಿನ ಮೂಲಕ ತಮ್ಮ ಭಾಷಣ ಆರಂಭಿಸಿದರು. ಶರಣೆಂಬೆ ಗುರುವಿಗೆ.. ಶರಣೆಂಬೆ ಅರಿವಿಗೆ..ಶರಣೆಂಬೆ ಸಾಹಿತ್ಯ ಸರಸ್ವತಿಗೆ..ಶರಣು ಶರಣೆಂಬೆ ನಿಮ್ಮೆಲ್ಲರಿಗೆ ಎಂಬ ಹಾಡು ಹೇಳಿದರು. ಹಾಗೆ ಭಾಷಣದ ಮಧ್ಯೆ ಆಡಿ ಬಾ ನನ್ನ ಕಂದ ಅಂಗಾಲ ತೊಳೆದೇನು ಎಂದು ಸರ್ವಾಧ್ಯಕ್ಷರು ಹಾಡುಗಳನ್ನು ಹಾಡುತ್ತಿದ್ದಾರೆ.

ಇದನ್ನೂ ಓದಿ: 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಸಿಎಂ ಬೊಮ್ಮಾಯಿ; ಭಾಷಣ ಇಲ್ಲಿದೆ

ಕಾಳಗದಲ್ಲಿ ಪಳಗಿದ ಹೆಬ್ಬುಲಿ ರೀತಿ ಯಡಿಯೂರಪ್ಪ ಇದ್ದಾರೆ

ಇನ್ನೂ ಗಡಿ ವಿವಾದ ವಿಚಾರವಾಗಿ ಮಾತನಾಡಿದ ಅವರು ಮರಾಠಿಗರ ಬಗ್ಗೆ ಗೌರವ ಇದೆ ನಿಜ, ಆದರೆ ಆ ಮರಾಠಿಗರು ಬೆಳಗಾವಿ ನಮ್ಮದು ಅಂತಾರೆ. ಇಲ್ಲಿ ಕಾಳಗದಲ್ಲಿ ಪಳಗಿದ ಹೆಬ್ಬುಲಿ ರೀತಿ ಯಡಿಯೂರಪ್ಪ ಇದ್ದಾರೆ. ಸಮಾಧಾನಚಿತ್ತದಿಂದ ಇರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದ್ದಾರೆ. ಹೀಗಾಗಿ ಗಡಿ ಸಮಸ್ಯೆ ಬಗೆ ಹರಿಯಬೇಕು. ಬೆಳಗಾವಿ ನಮಗೆ ಬೇಕು ಅಂತ ಬಸ್‌ಗೆ ಬೆಂಕಿ ಹಚ್ಚುತ್ತಿದ್ದಾರೆ. ನಾವು ಬೆಳಗಾವಿಯ ಒಂದು ಅಂಗುಲವನ್ನು ಬಿಡುವುದಿಲ್ಲ. ಇದು ನಮ್ಮ ಶಪಥ ಎಂದು ಖಡಕ ಸಂದೇಶ ನೀಡಿದರು.

ಬೆಳಗಾವಿಯನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದು ಬೇಡ

ಬೇಕಾದರೆ ಮನೆಗೆ ಹೋಗಿ ಮಹಾಜನ್ ವರದಿ ಓದಿ. ಮಹಾಜನ್ ವರದಿ ಪ್ರಕಾರ ಬೆಳಗಾವಿ ನಮ್ಮದು. ಬೆಳಗಾವಿಯನ್ನು ಯಾವುದೇ ಕಾರಣಕ್ಕು ಬಿಟ್ಟು ಕೊಡುವುದು ಬೇಡ. ಹೊಡೆದಾಟ ಬಡಿದಾಟದಿಂದ ಪ್ರಯೋಜನವಿಲ್ಲ. ಸಮಾಧಾನಚಿತ್ತದಿಂದ ಕಾನೂನು ಪ್ರಕಾರ ಬಗೆ ಹರಿಸಿಕೊಳ್ಳಬೇಕು ಎಂದರು.

ಇದನ್ನೂ ಓದಿ: ನಾನು ಎಡ, ಬಲ ಪಂಥೀಯನಲ್ಲ, ಕನ್ನಡ ಪಂಥೀಯ: ಪ್ರೊ. ದೊಡ್ಡರಂಗೇಗೌಡ

ಕೇರಳದಲ್ಲಿ ಮಲಿಯಾಳಿಗರು ಕನ್ನಡ ಪಾಠ ಹೇಳುತ್ತಿದ್ದಾರೆ

ಕೇರಳದಲ್ಲಿ ಮಲಿಯಾಳಿಗರು ಕನ್ನಡ ಪಾಠ ಹೇಳುತ್ತಿದ್ದಾರೆ. ಅಲ್ಲಿನ ಕನ್ನಡ ಶಾಲೆಗಳಲ್ಲಿ ಮಲಿಯಾಳಿಗಳು ಪಾಠ ಹೇಳಿದರೆ ಹೇಗೆ? ಮೊದಲು ಅಲ್ಲಿ ಕನ್ನಡ ಶಿಕ್ಷಕರ ನೇಮಕ ಮಾಡಬೇಕು. ಕೆಲವರು ತಮಗೆ ತಾವೇ ಬುದ್ಧಿಜೀವಿ ಪಟ್ಟ ಕಟ್ಟಿಕೊಂಡಿದ್ದಾರೆ. ಕೆಲ ಬುದ್ಧಿಜೀವಿಗಳು ಸಮ್ಮೇಳನವನ್ನು ಜಾತ್ರೆಗೆ ಹೋಲಿಸುತ್ತಾರೆ ಎಂದು ಹೇಳಿದ್ದಾರೆ.

ಹೋಲಿಸಲಿ ಪರವಾಗಿಲ್ಲ. ಇದು ಜಾತ್ರೆಯೇ, ನಾನು ಜಾತ್ರೆ ಪರವಾಗಿಯೇ ಇದ್ದೇನೆ. ಜಾತ್ರೆಗಳಲ್ಲಿ ಸಹಳ್ವೆ ಬರುತ್ತದೆ. ಬಾವಿಯೊಳಗೆ ಕಪ್ಪೆಯಾದರೆ ಅದು ನಿಮ್ಮ ತಪ್ಪು. ಹಾಗೇ ಅವರೆಲ್ಲರಲ್ಲಿ ನಾನು ಪ್ರಾರ್ಥನೆ ಮಾಡುವೆ, ನೀವು ಜಾತ್ರೆಗೆ ಬನ್ನಿ. ಇಲ್ಲಿ ಹೊಸ ಹೊಸ ಬರಹಗಾರರು ಇದ್ದಾರೆ. ಅವರಿಗೆ ಪ್ರೋತ್ಸಾಹಿಸಿ ಆಟೋಗ್ರಾಫ್ ಕೊಡಿ, ಸೆಲ್ಫಿ ತಗೋತಾರೆ ಕೊಡಿ, ಈ ಮೂಲಕ ಸಂಬಂಧಗಳನ್ನು ಬೆಳೆಸಿ ಎಂದು ಸಲಹೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:57 pm, Fri, 6 January 23