Kannada Sahitya Sammelana: ನಾನು ಎಡ, ಬಲ ಪಂಥೀಯನಲ್ಲ, ಕನ್ನಡ ಪಂಥೀಯ: ಪ್ರೊ. ದೊಡ್ಡರಂಗೇಗೌಡ

ಹಾವೇರಿ ಇದೊಂದು ತಪೋಭೂಮಿ. ಇದು ಕನಕದಾಸರು ನಡೆದಾಡಿದ ನೆಲ. ಎಮ್ಮೆ ಮೇಲೆ‌ ಓಡಾಡಿ ಕಾದಂಬರಿ ಹಾಗೂ ಸಾಹಿತ್ಯ ಪ್ರಚಾರ ಮಾಡಿರುವ ಸಾಹಿತಿಗಳ ಭೂಮಿ ಇದು ಎಂದು ಪ್ರೊ. ದೊಡ್ಡರಂಗೇಗೌಡ ಹೇಳಿದರು.

Kannada Sahitya Sammelana: ನಾನು ಎಡ, ಬಲ ಪಂಥೀಯನಲ್ಲ, ಕನ್ನಡ ಪಂಥೀಯ: ಪ್ರೊ. ದೊಡ್ಡರಂಗೇಗೌಡ
ಪ್ರೊ. ದೊಡ್ಡರಂಗೇಗೌಡImage Credit source: thenewsminute.com
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jan 05, 2023 | 8:53 PM

ಹಾವೇರಿ: 86 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಾವೇರಿ (Haveri Kannada Sahitya Sammelana) ನಗರ ಮಧುವನಗಿತ್ತಿಯಂತೆ ಶೃಂಗಾರಗೊಂಡಿದೆ. ಜನವರಿ 6, 7 ಮತ್ತು 8 ರಂದು ಅದ್ದೂರಿ ಕನ್ನಡ ಹಬ್ಬ ನಡೆಯಲಿದೆ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿರುವ ಪ್ರೊ. ದೊಡ್ಡರಂಗೇಗೌಡ ಸದ್ಯ ಹಾವೇರಿಗೆ ಆಗಮಿಸಿದ್ದಾರೆ. ಜಿಲ್ಲಾಧಿಕಾರಿ ನಿವಾಸದಲ್ಲಿ ಸಮ್ಮೇಳನಾಧ್ಯಕ್ಷರು ಮಾತನಾಡಿ, ಹಾವೇರಿ ಇದೊಂದು ತಪೋಭೂಮಿ. ಇದು ಕನಕದಾಸರು ನಡೆದಾಡಿದ ನೆಲ. ಎಮ್ಮೆ ಮೇಲೆ‌ ಓಡಾಡಿ ಕಾದಂಬರಿ ಹಾಗೂ ಸಾಹಿತ್ಯ ಪ್ರಚಾರ ಮಾಡಿರುವ ಸಾಹಿತಿಗಳ ಭೂಮಿ ಇದು. ಶರೀಪ ಮತ್ತು ಗೋವಿಂದಭಟ್ಟರ ಗದ್ದುಗೆ ದರ್ಶನ ಮಾಡಿದ್ದೇನೆ. ಜಾತ್ರೆ ಜಾತ್ರೆ ಎಂದು ಸಮ್ಮೇಳನವನ್ನ ಟೀಕೆ ಮಾಡುತ್ತಾರೆ. ಆದರೆ ಇದು ಸಾಹಿತಿಗಳ ಸಮ್ಮೀಲನದ ಜಾತ್ರೆ ಎಂದು ತಿರುಗೇಟು ನೀಡಿದರು.

ಇಲ್ಲಿ ಯಾರೂ ದೊಡ್ಡವರಲ್ಲ, ನಾನೂ ಅಲ್ಲ ಜ್ಯೋಷಿನೂ ಅಲ್ಲ. ಇಲ್ಲಿ ಕನ್ನಡ ಮುಖ್ಯ. ಕನ್ನಡ ನಮ್ಮೆಲ್ಲರಕ್ಕಿಂತ ದೊಡ್ಡದು. ನಾನು ಎಡಪಂಥಿಯನೂ ಅಲ್ಲ, ಬಲ ಪಂಥಿಯನೂ ಅಲ್ಲ. ನಾನು ಕನ್ನಡ ಪಂಥಿಯ. ಸಾಹಿತ್ಯ ಸಮ್ಮೆಳನದಲ್ಲಿ ರಾಜಕೀಯ ಮಾಡುವುದು ಬೇಡ. ಇದೊಂದು ಪವಿತ್ರವಾದ ಕನ್ನಡ ಕಾರ್ಯಕ್ರಮ ಎಂದರು.

ಇದನ್ನೂ ಓದಿ: Kannada Sahitya Sammelana 2023: ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ ವಿಶೇಷ ರೈಲು ಬಿಟ್ಟ ನೈರುತ್ಯ ರೇಲ್ವೆ ಇಲಾಖೆ: ಇಲ್ಲಿದೆ ವೇಳಾಪಟ್ಟಿ

ಬೆಳಗಾವಿ ಬಿಟ್ಟುಕೊಟ್ಟರೆ ನಮ್ಮನ್ನು ನಾವು ಮಾರಿಕೊಂಡಂತೆ

ಬೆಳಗಾವಿ ನಮ್ಮದು ಮರಾಠಿಗರು ಅಂತಿದ್ದಾರೆ. ಜನರು, ಬಹಳ ಪ್ರೀತಿಯಿಂದ ಹೇಳಬೇಕು ಬೆಳಗಾವಿ ನಮ್ಮದು ಎಂದು. ಮಹಾಜನ್ ವರದಿ ಪ್ರಕಾರ ಬೆಳಗಾವಿ ನಮ್ಮದು. ಯಾವುದೆ ಕಾರಣಕ್ಕೂ ನಾವು ಮಹಾರಾಷ್ಟ್ರ ಬಿಟ್ಟುಕೊಡಲ್ಲ. ಒಂದು ವೇಳೆ ಬಿಟ್ಟುಕೊಟ್ಟರೆ ನಮ್ಮನ್ನ ನಾವು‌ ಮಾರಿಕೊಂಡ ಹಾಗೆ ಎಂದರು.

ಕನ್ನಡ ಸಿಮೀತ ಅಲ್ಲಾ, ಕನ್ನಡ ಸಮಗ್ರ ಭಾಷೆ

ಕೇರಳದ ಕನ್ನಡ ಶಾಲೆಯಲ್ಲಿ ಕನ್ನಡಿಗರ ಶಿಕ್ಷಕರನ್ನ ಹಾಕಿ ಎಂದು ಕೇಳರ ಸರ್ಕಾರಕ್ಕೆ ನಾನು ಆಗ್ರಹ ಮಾಡುತ್ತೇನೆ. ತಮಿಳುನಾಡಿನಲ್ಲಿ ಶಾಸ್ತ್ರೀಯ ಭಾಷೆ ಕೋಟ್ಯಾಂತರ ಅನುದಾನ ತಂದಿದೆ. ನಮ್ಮ ಸಂಸದರು ಹಾಗೆ ಇದ್ದಾರೆ. ಶಾಸ್ತ್ರೀಯ ಭಾಷೆಗೆ ಕಾರ್ಯಾಲಯ ಘೋಷಣೆ ಮಾಡಿದ್ದಾರೆ. ಶಾಸ್ತ್ರೀಯ ಭಾಷೆ ಅಂದರೆ ನಮ್ಮ ಭಾಷೆ. ಈಗ ಮೈಸೂರಿನಲ್ಲಿ ಕಾರ್ಯಾಲಯ ಮಾಡಿದ್ದಾರೆ. ಕನ್ನಡ ಸಿಮೀತ ಅಲ್ಲಾ, ಕನ್ನಡ ಸಮಗ್ರ ಭಾಷೆ. 7ನೇ ತರಗತಿವರೆಗೆ ಕನ್ನಡದ ಭಾಷೆಯಲ್ಲಿ ಶಿಕ್ಷಣ ಆಗಬೇಕು. ದೇಶಿಯ ಭಾಷೆಯಯಲ್ಲಿ ಶಿಕ್ಷಣದ ಅಗತ್ಯ ಇದೆ ಎಂದು ತಿಳಿಸಿದರು.

ಇದನ್ನೂ ಓದಿ: Kannada Sahitya Sammelana 2023: ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧವಾಗುತ್ತಿದೆ ಬಾಯಲ್ಲಿ ನೀರೂರಿಸುವ ಉತ್ತರ ಕರ್ನಾಟಕದ ವಿಶೇಷ ಖಾದ್ಯಗಳು

ಕನ್ನಡದಿಂದಲೂ ಅನ್ನ ಹುಟ್ಟಿಸಿಕೊಳ್ಳಲು ಸಾಧ್ಯ

ಮನಸ್ಸು ಮಾಡಿದರೆ ಭೌತಶಾಸ್ತ್ರದ, ರಾಸಾಯನಿಕ ಎಲ್ಲಾ ವಿಷಯವನ್ನ ಕನ್ನಡದಲ್ಲಿ ಹೇಳಲು ಸಾಧ್ಯ. ಹತ್ತಾರು ವಿಷಯ ಇದೆ. ಸಮ್ಮೇಳನದಲ್ಲಿ ವೇದಿಕೆಯಲ್ಲಿ ಹೇಳುತ್ತೇನೆ. ಸರೋಜಿನಿ ಮಹಿಷಿ ವರದಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಕನ್ನಡದಿಂದಲೂ ಅನ್ನ ಹುಟ್ಟಿಸಿಕೊಳ್ಳಲು ಸಾಧ್ಯವಿದೆ. ಸಂಕಲ್ಪ ಮಾಡಬೇಕು ಅಷ್ಟೇ. ವಿಮರ್ಶೆ, ಟೀಕೆ ಮಾಡಲು ಬದಲು ರೂಡಿಸಿಕೊಳ್ಳಿ ಎಂದು ಕಿಡಿಕಾರಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.