Kannada Sahitya Sammelana 2023: ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧವಾಗುತ್ತಿದೆ ಬಾಯಲ್ಲಿ ನೀರೂರಿಸುವ ಉತ್ತರ ಕರ್ನಾಟಕದ ವಿಶೇಷ ಖಾದ್ಯಗಳು

ಪ್ರತಿ ದಿನ 1.5 ಲಕ್ಷ ಜನರಿಗೆ ಊಟ ಹಾಗೂ 70 ಸಾವಿರ ಜನರಿಗೆ ಉಪಹಾರ ವ್ಯವಸ್ಥೆಯನ್ನು ಮಾಡಲಾಗಿದ್ದು, ಸಮ್ಮೇಳನದ ಮೂರು ದಿನ ಕೂಡ ವಿವಿಧ ಬಗೆಯ ವಿಶೇಷ ಮೆನು ಸಿದ್ಧಪಡಿಸಲಾಗಿದೆ.

Kannada Sahitya Sammelana 2023: ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧವಾಗುತ್ತಿದೆ ಬಾಯಲ್ಲಿ ನೀರೂರಿಸುವ ಉತ್ತರ ಕರ್ನಾಟಕದ ವಿಶೇಷ ಖಾದ್ಯಗಳು
ಸಮ್ಮೇಳನಕ್ಕೆ ಸಿದ್ಧವಾಗುತ್ತಿದೆ ಬಾಯಲ್ಲಿ ನೀರೂರಿಸುವ ವಿಶೇಷ ಖಾದ್ಯಗಳು
Follow us
TV9 Web
| Updated By: ಆಯೇಷಾ ಬಾನು

Updated on:Jan 05, 2023 | 9:06 AM

ಹಾವೇರಿ: 86 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಾವೇರಿ(Haveri Kannada Sahitya Sammelana) ನಗರ ಮಧುವನಗಿತ್ತಿಯಂತೆ ಶೃಂಗಾರಗೊಂಡಿದೆ. ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನ ಬರುವ ನಿರೀಕ್ಷೆ ಇದ್ದು, ಪ್ರತಿಯೊಬ್ಬರಿಗೂ ಊಟ ಹಾಗೂ ಉಪಹಾರದ ವ್ಯವಸ್ಥೆ ಭರ್ಜರಿಯಾಗಿ ನಡೆಯುತ್ತಿದೆ.

ಕರ್ನಾಟಕದ ಮಧ್ಯ ಜಿಲ್ಲೆ ಆಗಿರುವ ಹಾವೇರಿಯಲ್ಲಿ ನಡೆಯಲಿರುವ, 86 ನೇ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಲಕ್ಷಾಂತರ ಜನ ಭಾಗವಹಿಸುವ ನಿರೀಕ್ಷೆ ಇದೆ. ಜನವರಿ 6 , 7 ಮತ್ತು 8 ರಂದು ನಡೆಯುವ ಈ ಅದ್ದೂರಿ ಕನ್ನಡ ಹಬ್ಬಕ್ಕೆ ಬರುವವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹಾವೇರಿ ಜಿಲ್ಲಾಡಳಿತ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿಕೊಂಡಿದ್ದು ಬರುವ ಪ್ರತಿಯೊಬ್ಬ ಕನ್ನಡ ಅಭಿಮಾನಿಗೆ ಹೊಟ್ಟೆ ತುಂಬ ತರಹ ತರಹದ ಊಟ ನೀಡಲು ಭರದ ಸಿದ್ಧತೆ ನಡೆದಿದೆ.

ಪ್ರತಿ ದಿನ 1.5 ಲಕ್ಷ ಜನರಿಗೆ ಊಟ ಹಾಗೂ 70 ಸಾವಿರ ಜನರಿಗೆ ಉಪಹಾರ ವ್ಯವಸ್ಥೆಯನ್ನು ಮಾಡಲಾಗಿದ್ದು, ಸಮ್ಮೇಳನದ ಮೂರು ದಿನ ಕೂಡ ವಿವಿಧ ಬಗೆಯ ವಿಶೇಷ ಮೆನು ಸಿದ್ಧಪಡಿಸಲಾಗಿದೆ. Kannada Sahitya Sammelana

ಜನವರಿ 6ರ ಊಟದ ಮೆನು ಹೀಗಿದೆ

60 ಸಾವಿರ ಜನರಿಗೆ ಬೆಳಿಗ್ಗೆ ಉಪಹಾರ: ಉಪ್ಪಿಟ್ಟು, ಸೀರಾ, ಬೆಲ್ಲದ ಟೀ, 1.5ಲಕ್ಷ ಜನರಿಗೆ ಮಧ್ಯಾಹ್ನಊಟ: ಶೇಂಗಾ ಹೋಳಿಗೆ, ಬದನೆಕಾಯಿ ಪಲ್ಯಾ, ಚಪಾತಿ, ವೈಟ್ ರೈಸ್, ಸಾಂಬಾರು, ಉಪ್ಪಿನ ಕಾಯಿ, ಶೆಂಗಾ ಚಟ್ನಿ ಮತ್ತು ಮೊಸರು 60 ಸಾವಿರ ಜನರಿಗೆ ರಾತ್ರಿ ಊಟ: ಹೆಸರಬೆಲೆ ಪಾಯಸಾ, ಪುಳಿಯೊಗರೆ, ವೈಟ್ ರೈಸ್, ಸಾಂಬಾರ್, ಉಪ್ಪಿನಕಾಯಿ

ಇದನ್ನೂ ಓದಿ: Kannada Sahitya Sammelana 2023: ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ ವಿಶೇಷ ರೈಲು ಬಿಟ್ಟ ನೈರುತ್ಯ ರೇಲ್ವೆ ಇಲಾಖೆ: ಇಲ್ಲಿದೆ ವೇಳಾಪಟ್ಟಿ

ಜನವರಿ 7ರ ಮೆನು ಹೀಗಿದೆ

60 ಜನರಿಗೆ ಬೆಳಿಗ್ಗೆ ಉಪಹಾರ: ರವಾ ಉಂಡಿ, ವೆಜಿಟೆಬಲ್ ಫಲಾವ್, ಬೆಲ್ಲದ ಟೀ 70 ಜನರಿಗೆ ಮಧ್ಯಾಹ್ನದ ಊಟ: ಲಡಕಿಪಾಕ್, ಮಿಕ್ಸ್ ವೆಜಿಟೆಬಲ್, ಚಪಾತಿ, ವೈಟ್ ರೈಸ್, ಸಾಂಬಾರ್, ಬಿರಾಂಜಿ ರೈಸ್-ಮಂಡ್ಲಿ, ಉಪ್ಪಿನಕಾಯಿ, ಶೆಂಗಾ ಚಟ್ನಿ ಹಾಗೂ ಮೊಸರು 50 ಸಾವಿರ ಜನರಿಗೆ ಊಟದ ವ್ಯವಸ್ಥೆ: ಶಾವಿಗೆ ಪಾಯಸಾ, ಬಿಸಿಬೆಲೆ ಭಾತ್, ವೈಟ್ ರೈಸ್, ಸಾಂಬಾರ್, ಉಪ್ಪಿನಕಾಯಿ

ಜನವರಿ 8ರ ಮೆನು ಹೀಗಿದೆ

60 ಸಾವಿರ ಜನರಿಗೆ ಬೆಳಿಗ್ಗೆ ಉಪಹಾರ: ಮೈಸೂರ್ ಪಾಕ್, ವಾಂಗಿ ಭಾತ್, ಬೆಲ್ಲದ ಟೀ 1 ಲಕ್ಷದ ಇಪ್ಪತ್ತು ಸಾವಿರ ಜನರಿಗೆ ಮಧ್ಯಾಹ್ನದ ಊಟ: ಮೋತಿ ಚೂರ್ ಲಾಡೂ, ಕಾಳ ಪಲ್ಯಾ, ಚಪಾತಿ, ವೈಟ್ ರೈಸ್, ಸಾಂಬಾರ, ಉಪ್ಪಿನಕಾಯಿ, ಶೆಂಗಾ ಚಟ್ನಿ ಮತ್ತು ಮೊಸರು. 60 ಸಾವಿರ ಜನರಿಗೆ ರಾತ್ರಿ ಊಟ: ಗೋದಿ ಹುಗ್ಗಿ, ಚಿತ್ರಾಣ್ಣಾ, ವೈಟ್ ರೈಸ್, ಸಾಂಬಾರ್ ಮತ್ತು ಉಪ್ಪಿನಕಾಯಿ.

Kannada Sahitya Sammelana

ಹೀಗೆ ಮೂರು ದಿನವೂ ಬಗೆ ಬಗೆಯ ಅಡುಗೆ ಮಾಡಲು ಸುಮಾರು 4 ಸಾವಿರ ಜನರ ತಂಡ ಕೆಲಸ ಮಾಡುತ್ತಿದ್ದು, ಈ ಹಿಂದೆ ನಡೆದ 7 ಸಾಹಿತ್ಯ ಸಮ್ಮೆಳನದಲ್ಲೂ ಇದೆ ತಂಡ ಊಟದ ಗುತ್ತಿಗೆ ಪಡೆದಿತ್ತು.

ನೂರಿತ ಕ್ಯಾಟರಿನ್ ತಂಡ ಹಾವೇರಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಮಾರ್ಗದರ್ಶನದಲ್ಲಿ ಊಟ ಬಡಿಸೊಕೆ, ಹಾಗೂ ನೀರು ಕುಡಿಯಲು, ಕೈ ತೊಳೆಯಲು ಕೂಡ ಯಾವುದೆ ಸಮಸ್ಯೆ ಆಗದ ರೀತಿಯಲ್ಲಿ ಸಂಪೂರ್ಣ ವ್ಯವಸ್ಥಿತವಾಗಿ ಮಾಡಲಾಗಿದೆ.

ವರದಿ: ಸೂರಜ್ ಉತ್ತೂರೆ, ಟಿವಿ9 ಹಾವೇರಿ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:15 am, Thu, 5 January 23

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ