ಮೃತ ನವೀನ್ ಕುಟುಂಬಕ್ಕೆ ಯಡಿಯೂರಪ್ಪ ಭೇಟಿ, ಉಕ್ರೇನ್​ನಿಂದ ಪಾರ್ಥಿವ ಶರೀರ ಆದಷ್ಟು ಬೇಗ ತರಿಸುವುದಾಗಿ ಭರವಸೆ

ಮೃತ ನವೀನ್ ಕುಟುಂಬಕ್ಕೆ ಯಡಿಯೂರಪ್ಪ ಭೇಟಿ, ಉಕ್ರೇನ್​ನಿಂದ ಪಾರ್ಥಿವ ಶರೀರ ಆದಷ್ಟು ಬೇಗ ತರಿಸುವುದಾಗಿ ಭರವಸೆ
ಬಿ.ಎಸ್. ಯಡಿಯೂರಪ್ಪ

ನವೀನ್ ಮನೆಗೆ ಭೇಟಿ ಬಳಿಕ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ನವೀನ್ ನಾಲ್ಕನೆ ವರ್ಷ ವಿಧ್ಯಾಭ್ಯಾಸ ಮಾಡೋ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರುವೆ. ಯುದ್ಧದ ಗಂಭೀರತೆ ಅಲ್ಲಿ ಜಾಸ್ತಿ ಇದೆ. ತಕ್ಷಣ ಡೆಡ್ ಬಾಡಿ ತರೋಕೆ ಆಗದೆ ಸಮಸ್ಯೆ ಆಗ್ತಿದೆ.

TV9kannada Web Team

| Edited By: Ayesha Banu

Mar 04, 2022 | 9:17 PM


ಹಾವೇರಿ : ರಷ್ಯಾ-ಉಕ್ರೇನ್ ನಡುವೆ ನಡೀತಿರೋ ಯುದ್ಧದಲ್ಲಿ ಹಾವೇರಿ ಮೂಲದ ವಿದ್ಯಾರ್ಥಿ ನವೀನ್ ರಷ್ಯಾದ ಮಿಸೈಲ್‌ ದಾಳಿಗೆ ಪ್ರಾಣ ಬಿಟ್ಟಿದ್ದಾರೆ. ನವೀನ್ ಕುಟುಂಬದಲ್ಲಿ ಕಣ್ಣೀರ ಕೂಡಿ ಹರಿದಿದೆ. ಉಕ್ರೇನ್ನಿಂದ ಡಾಕ್ಟರ್ ಆಗಿ ಮಗ ವಾಪಾಸ್ ಬರ್ತಾನೆ ಎಂದು ಕೊಂಡಿದ್ದ ಪೋಷಕರು ಕಣ್ಣೀರಲ್ಲಿ ಮುಳುಗಿದ್ದಾರೆ. ಸದ್ಯ ಇಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ನಿವಾಸಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿದ್ದು ನವೀನ್ ಕುಟುಂಬಸ್ಥರಿಗೆ ಸಾಂತ್ವನ ಕೇಳಿದ್ದಾರೆ.

ನವೀನ್ ಮನೆಗೆ ಭೇಟಿ ಬಳಿಕ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ನವೀನ್ ನಾಲ್ಕನೆ ವರ್ಷ ವಿಧ್ಯಾಭ್ಯಾಸ ಮಾಡೋ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರುವೆ. ಯುದ್ಧದ ಗಂಭೀರತೆ ಅಲ್ಲಿ ಜಾಸ್ತಿ ಇದೆ. ತಕ್ಷಣ ಡೆಡ್ ಬಾಡಿ ತರೋಕೆ ಆಗದೆ ಸಮಸ್ಯೆ ಆಗ್ತಿದೆ. ಪ್ರಧಾನಿ ಮೋದಿಜಿಯವರೇ ಡೆಡ್ ಬಾಡಿ ತರಲು ಚಿಂತನೆ ನಡೆಸಿದ್ದಾರೆ. ವಿಶೇಷ ವಿಮಾನದಲ್ಲಿ ಡೆಡ್ ಬಾಡಿ ತರೋ ಚಿಂತನೆ ನಡೆದಿದೆ. ಪಾರ್ಥಿವ ಶರೀರದ ಮುಖ ನೋಡಬೇಕು ಅನ್ನೋದು ತಂದೆ ತಾಯಿ ಬಯಕೆ. ಪ್ರಧಾನಿ ಜೊತೆ ನಾನು, ಸಿಎಂ ಬೊಮ್ಮಾಯಿಯವರು ಮಾತನಾಡಿದ್ದೇವೆ. ಆದಷ್ಟು ಬೇಗ ಡೆಡ್ ಬಾಡಿ ತರೋದು ಕೇಂದ್ರ ಮತ್ತು ರಾಜ್ಯ ಸರಕಾರದ ಕರ್ತವ್ಯ. ಅವರ ನೋವಿಗೆ, ಕಣ್ಣೀರಿಗೆ ಸಾಂತ್ವನ ಹೇಳಲು ಪದಗಳು ಬರ್ತಿಲ್ಲ. ತಮ್ಮ ಮಗನಿಗೆ ಬಂದ ಸ್ಥಿತಿ ಬೇರೆ‌ ಮಕ್ಕಳಿಗೆ ಬರಬಾರ್ದು ಅಂತಾ ನವೀನ್ ತಾಯಿ ಕಣ್ಣೀರು ಹಾಕಿದ್ದಾರೆ. ಅದು ಅವರ ಕಳಕಳಿ ತೋರಿಸುತ್ತೆ.

ರಾಜ್ಯ ಸರಕಾರದಿಂದ ಇಪ್ಪತ್ತೈದು ಲಕ್ಷ ರೂಪಾಯಿ ಪರಿಹಾರಕ್ಕೆ ತೀರ್ಮಾನಿಸಲಾಗಿದೆ. ನಾಳೆ ಸಿಎಂ‌ ಬಂದಾಗ ಚೆಕ್ ಕೊಡಬಹುದು. ಡೆಡ್ ಬಾಡಿ ಆದಷ್ಟು ಬೇಗ ತರೋ ಪ್ರಯತ್ನ ನಡೆಯುತ್ತಿದೆ. ಆದಷ್ಟು ಬೇಗ ಬಾಡಿ ತರೋ ಪ್ರಯತ್ನ ಮಾಡ್ತೀವಿ. ಉಕ್ರೇನ್ ಜೊತೆ ಪ್ರಧಾನಿಯವರೆ ಹೆಚ್ಚು ಸಂಪರ್ಕ ಇಟ್ಟುಕೊಂಡಿದ್ದಾರೆ. ಆದಷ್ಟು ಬೇಗ ಡೆಡ್ ಬಾಡಿ ತರೋ ಪ್ರಾಮಾಣಿಕ ಪ್ರಯತ್ನ ಮಾಡ್ತೇವೆ ಎಂದು ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ: Russia- Ukrain Crisis: ಬ್ರಿಕ್ಸ್​ನ ನ್ಯೂ ಡೆವಲಪ್​ಮೆಂಟ್​ ಬ್ಯಾಂಕ್​ನಿಂದ ರಷ್ಯಾದಲ್ಲಿ ಎಲ್ಲ ಹೊಸ ವಹಿವಾಟುಗಳ ಸ್ಥಗಿತ

Shocking News: ರಾತ್ರಿ ವೇಳೆ ಬೀದಿ ನಾಯಿ ಮೇಲೆ ಕಾಮುಕನಿಂದ ಅತ್ಯಾಚಾರ!


Follow us on

Related Stories

Most Read Stories

Click on your DTH Provider to Add TV9 Kannada