ಹಾವೇರಿ ಜನರ ಜೀವ ಹಿಂಡುತ್ತಿದೆ ಡೆಂಗ್ಯೂ: ಶೇಕಾಡ 80 ರಷ್ಟು ಮಕ್ಕಳಲ್ಲಿ ಜ್ವರ ಪತ್ತೆ

ಹಾವೇರಿ ಜಿಲ್ಲೆಯಲ್ಲಿ ಮಹಾಮಾರಿ ಡೆಂಗ್ಯೂ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಅದರಲ್ಲೂ 14 ವರ್ಷದ ಒಳಗಿನ ಮಕ್ಕಳಲ್ಲಿ ಅತಿ ಹೆಚ್ಚು ಕಾಣಿಸಿಕೊಂಡಿದ್ದು ಪೋಷಕರಲ್ಲೊ ಆತಂಕ ಮೂಡಿಸಿದೆ. ಹಾವೇರಿ ಜಿಲ್ಲೆಯಾದ್ಯಂತ ಕಾಣಿಸಿಕೊಂಡ ಡೆಂಗ್ಯೂ ಪ್ರಕರಣದಲ್ಲಿ ಶೇಕಡಾ 80 ರಷ್ಟು ಮಕ್ಕಳಿದ್ದಾರೆ. ಹಾವೇರಿ ಜಿಲ್ಲಾಸ್ಪತ್ರೆಯ ಬೆಡ್ ಪುಲ್ ಆಗಿವೆ.

ಹಾವೇರಿ ಜನರ ಜೀವ ಹಿಂಡುತ್ತಿದೆ ಡೆಂಗ್ಯೂ: ಶೇಕಾಡ 80 ರಷ್ಟು ಮಕ್ಕಳಲ್ಲಿ ಜ್ವರ ಪತ್ತೆ
ಹಾವೇರಿ ಜನರ ಜೀವ ಹಿಂಡುತ್ತಿದೆ ಡೆಂಗ್ಯೂ ಜ್ವರ
Follow us
ಆಯೇಷಾ ಬಾನು
|

Updated on: May 30, 2024 | 10:30 AM

ಹಾವೇರಿ, ಮೇ.30: ಮುಂಗಾರು ಮಳೆ ಪ್ರಾರಂಭವಾಗಿ ಇನ್ನು ಒಂದು ವಾರ ಕಳೆದಿಲ್ಲ. ಮುಂಗಾರು ಈಗ ಚುರುಕು ಪಡೆಯುತ್ತಿದೆ. ಆದರೆ ಹಾವೇರಿ ಜಿಲ್ಲೆಯಲ್ಲಿ ಮಹಾಮಾರಿ ಡೆಂಗ್ಯೂ (Dengue)  ಜನರ ಜೀವನನ್ನ ಹಿಂಡುತ್ತಿದೆ. ಜಿಲ್ಲೆಯಲ್ಲಿಯೇ ಶೇಕಡಾ 80 ರಷ್ಟು ಮಕ್ಕಳಲ್ಲಿ ಡೆಂಗ್ಯೂ ಜ್ವರದ ಲಕ್ಷಣ ಕಂಡು ಬಂದಿದ್ದು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 162 ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ 108 ಮಕ್ಕಳಲ್ಲಿ ಡೆಂಗ್ಯೂ ಲಕ್ಷಣಗಳು ಕಾಣಿಸಿಕೊಂಡಿವೆ.

ಜಿಲ್ಲಾಸ್ಪತ್ರೆಯಲ್ಲಿಯೇ 50 ಕ್ಕೂ ಹೆಚ್ಚು ಡೆಂಗ್ಯೂ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಸಕ್ತ ವರ್ಷದಲ್ಲಿ ಹಾವೇರಿ-10, ಬ್ಯಾಡಗಿ-30, ರಾಣೇಬೆನ್ನೂರು-18, ಹಿರೇಕೆರೂರು-20, ರಟ್ಟಿಹಳ್ಳಿ-08, ಶಿಗ್ಗಾಂವಿ-06, ಸವಣೂರು-01, ಹಾನಗಲ್-69 ಸೇರಿ ಒಟ್ಟು 162 ಕೇಸ್ ಗಳು ಪತ್ತೆಯಾಗಿವೆ. ಇದರಿಂದ ಚಿಕ್ಕಮಕ್ಕಳು ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆ ಡೆಂಗ್ಯೂ ತಡೆಗಟ್ಟಲು ಎಲ್ಲ ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಲು ಮುಂದಾಗಿದೆ. ಜೊತೆಗೆ ಜನರು ಸಹ ಕರಿಸುವಂತೆ ಮನವಿ ಮಾಡಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಹೊಸ ತಂತ್ರಜ್ಞಾನ ಬಳಕೆ; ಬಾಕ್ಸ್ ಆಕಾರದಲ್ಲಿ ಕಾಮಗಾರಿ

ಕಳೆದ ವರ್ಷ ಅಂದರೆ 2023ರಲ್ಲಿ ಜಿಲ್ಲೆಯಲ್ಲಿ ಕೇವಲ 24 ಡೆಂಗ್ಯೂ ಕೇಸ್ ಪತ್ತೆಯಾಗಿದ್ದವು. ಆದರೆ ಈ ವರ್ಷ ಡೆಂಗ್ಯೂ ಪ್ರಕರಣ ಬಹಳ ಹೆಚ್ಚಾಗಿದೆ ಕಾರಣ ಕಳೆದ ಬಾರಿಯ ಬರಗಾಲ ಮತ್ತು ನೀರಿನ ಕೊರತೆ. ನೀರಿನ ಸಮಸ್ಯೆ ಇದ್ದ ಕಾರಣ ಜನರು ನೀರನ್ನ ಶೇಖರಣೆ ಮಾಡಿ ಬಳಕೆ ಮಾಡಿದ್ದಾರೆ. ಶೇಕರಣೆ ಮಾಡಿದ ನೀರಿನಲ್ಲಿ ಎಡಿಎಸ್ ಅನ್ನೋ ಸೊಳ್ಳೆ ಉತ್ತತ್ಪಿಯಾಗಿ ರೋಗ ಉಲ್ಬಣಗೊಂಡಿದೆ. ಹೀಗಾಗಿ ಸುತ್ತಮುತ್ತಲಿನ‌ ಪರಿಸರವನ್ನ ಸ್ವಚ್ಚವಾಗಿ ಇಟ್ಟಕೊಳ್ಳಬೇಕು. ಸೊಳ್ಳೆಬತ್ತಿ, ಸೊಳ್ಳೆ ಪರದೆ ಹಾಗೂ ಮನೆಯ ಮುಂದೆ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಇದರಿಂದ ಈ ಡೆಂಗ್ಯೂವನ್ನು ತಡೆಗಟ್ಟಬಹದು. ಮಕ್ಕಳಲ್ಲಿ ಜ್ವರ ಹಾಗೂ ವಾಂತಿ ಸೇರಿದಂತೆ ವಿವಿಧ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರ ಬಳಿ ತೆರಳಿ ಚಿಕಿತ್ಸೆಯನ್ನ ಪಡೆಯಬೇಕು. ಅದರಲ್ಲಿ ಮಕ್ಕಳ ಬಗ್ಗೆ ಹೆಚ್ಚು ಜಾಗೃತಿವಹಿಸಬೇಕು ಎಂದು ಡಾ.ಸರಿತಾ ಸಲಹೆ ನೀಡಿದ್ದಾರೆ.

ಒಟ್ನಲ್ಲಿ ಹಾವೇರಿ ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 80 ರಷ್ಟು ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದೆ. ಜಿಲ್ಲಾಡಳಿತ ಮತ್ತು ವೈದ್ಯರ ತಡ ಜನರಲ್ಲಿ ಜಾಗೃತಿ ಮೂಡಿಸಿ, ಡೆಂಗ್ಯೂ ಮಹಾಮಾರಿಯನ್ನ ತಡೆಗಟ್ಟಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಡೆಂಗ್ಯೂ ಇನ್ನು ಹೆಚ್ಚಾಗಿ ಆಸ್ಪತ್ರೆಯ ಬೆಡ್ ಪುಲ್ ಆಗಲಿದೆ. ಯಾರು ಬಯ ಪಡುವ ಅವಶ್ಯಕತೆ ಇಲ್ಲ. ಲಕ್ಷಣಗಳು ಕಂಡ ತಕ್ಷಣ ಸಮೀಪದ ಆಸ್ಪತ್ರೆಗೆ ಬೇಟಿ ನೀಡಿ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ ಎಂದು ಚಿಕ್ಕಮಕ್ಕಳ ತಜ್ಞ ಡಾ.ಅಂಜನಕುಮಾರ ಸಲಹೆ ನೀಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ