ನಮ್ಮ ಮೆಟ್ರೋ ಹೊಸ ತಂತ್ರಜ್ಞಾನ ಬಳಕೆ; ಬಾಕ್ಸ್ ಆಕಾರದಲ್ಲಿ ಕಾಮಗಾರಿ

ದೇಶದಲ್ಲೇ ಮೊದಲ ಬಾರಿಗೆ, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಮೆಟ್ರೋ ಸುರಂಗವನ್ನು ನಿರ್ಮಿಸಲು ಬಾಕ್ಸ್-ಪುಶಿಂಗ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿದೆ. ಈ ವಿನೂತನ ವಿಧಾನವನ್ನು ನಾಗವಾರ ಬಳಿಯ ಹೊರ ವರ್ತುಲ ರಸ್ತೆ (ORR) ಕೆಳಗೆ 77-ಮೀಟರ್ ವಿಭಾಗಕ್ಕೆ ಅಳವಡಿಸಲಾಗಿದೆ. ಇದು ನಗರದ ಮೆಟ್ರೋ ಮೂಲಸೌಕರ್ಯಕ್ಕೆ ಗಮನಾರ್ಹ ಸಾಧನೆಯಾಗಿದೆ.

ನಮ್ಮ ಮೆಟ್ರೋ ಹೊಸ ತಂತ್ರಜ್ಞಾನ ಬಳಕೆ; ಬಾಕ್ಸ್ ಆಕಾರದಲ್ಲಿ ಕಾಮಗಾರಿ
ಬಾಕ್ಸ್ ಆಕಾರದಲ್ಲಿ ಕಾಮಗಾರಿ
Follow us
Kiran Surya
| Updated By: ಆಯೇಷಾ ಬಾನು

Updated on: May 30, 2024 | 9:27 AM

ಬೆಂಗಳೂರು, ಮೇ.30: ಚಾಲಕ ರಹಿತ ಮೆಟ್ರೋ ರೈಲು ಪರಿಚಯಿಸಿ ಇಡೀ ದೇಶದಲ್ಲೇ ಮಾದರಿಯಾಗಿರುವ ನಮ್ಮ ಮೆಟ್ರೋ (Namma Metr0) ಇದೀಗ ಹೊಸ ಮೈಲಿಗಲ್ಲು ಸಾಧಿಸಿದೆ. ಹೊಸ ಹೊಸ ತಂತ್ರಜ್ಞಾನದ ಬಳಕೆಗೆ ಮುಂದಾದ ನಮ್ಮ‌ ಮೆಟ್ರೋ ಇದೀಗ ಮತ್ತೊಂದು ಪ್ರಯೋಗ ಮಾಡಿದೆ. ಇಷ್ಟು ದಿನ ವೃತ್ತಾಕಾರದ ಮಾರ್ಗವಾಗಿ ಅಂಡರ್ ಗ್ರೌಂಡ್ ಕಾಮಗಾರಿ (Box-Pushing Technology) ಮಾಡಿ ಯಶಸ್ವಿಯಾಗಿದ್ದ ಬಿಎಂಆರ್​ಸಿಎಲ್ (MBRCL) ಇದೀಗ ಬಾಕ್ಸ್ ಆಕಾರದಲ್ಲಿ ಕಾಮಗಾರಿ ಮಾಡಿ ಸಕ್ಸಸ್ ಆಗಿದೆ.

ದೇಶದಲ್ಲಿ ಇದೇ ಮೊದಲ ಬಾರಿಗೆ ಬಾಕ್ಸ್ ಆಕಾರದಲ್ಲಿ ಮೆಟ್ರೋ ಸುರಂಗ ಮಾರ್ಗ ಕಾಮಗಾರಿ ಮಾಡಲಾಗಿದೆ. 77 ಮೀಟರ್ ಅಗಲದ ಬಾಕ್ಸ್ ಪುಶಿಂಗ್ ಟೆಕ್ನಾಲಜಿ ಬಳಕೆ ಮಾಡಿ ನಾಗವಾರದ ಔಟರ್ ರಿಂಗ್ ರೋಡ್ ಬಳಿ ಮೆಟ್ರೋ ಕಾಮಗಾರಿ ನಡೆಸಲಾಗುತ್ತಿದೆ. ನಾಗವಾರದ ORR ರೋಡ್​ನ ಮೇಲ್ಸೇತುವೆ ಕೆಳಗೆ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಸಧ್ಯ ಬಾಕ್ಸ್ ಪುಶಿಂಗ್ ಟೆಕ್ನಾಲಜಿ ಕಾಮಗಾರಿ ಯಶಸ್ವಿ ಬಗ್ಗೆ ಬಿಎಂಆರ್​ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಶೀಘ್ರವೇ ಹಳಿಗಿಳಿಯಲಿದೆ ಚಾಲಕ ರಹಿತ ಮೆಟ್ರೋ ರೈಲು: ಸಿಗ್ನಲಿಂಗ್ ಟೆಸ್ಟ್ ಜೂನ್ 7ರಿಂದ ಶುರು

ಇನ್ನು ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ 21.26 ಕಿ.ಮೀ. ಉದ್ದದ ಹೊಸ ಮಾರ್ಗವನ್ನು ಮಾರ್ಚ್‌ 2025ರ ಒಳಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಈ ಮಾರ್ಗ ಪೂರ್ಣಗೊಂಡರೆ ಕಾರ್ಯಾಚರಣೆ ಜಾಲವು 117 ಕಿ.ಮೀಗೆ ವಿಸ್ತರಣೆಗೊಳ್ಳಲಿದೆ.

ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಹೆಬ್ಬಾಳ ಜಂಕ್ಷನ್ ಮೂಲಕ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (58 ಕಿ.ಮೀ) ಹಂತ 2ಎ ಮತ್ತು 2ಬಿ ಯೋಜನೆಗೆ ₹ 14788 ಕೋಟಿ ವೆಚ್ಚವಾಗುತ್ತಿದೆ. ಈ ಕಾಮಗಾರಿಯನ್ನು 2026ರ ವೇಳೆಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಈ ಯೋಜನೆಗೆ ರಾಜ್ಯ ಸರ್ಕಾರವೇ ಇದುವರೆಗೆ ₹ 4775 ಕೋಟಿ ಬಿಡುಗಡೆ ಮಾಡಿದೆ. ಈ ಯೋಜನೆ ಪೂರ್ಣಗೊಂಡ ನಂತರ ಮೆಟ್ರೊ ಜಾಲವು 176 ಕಿ.ಮೀಗೆ ವಿಸ್ತರಣೆ ಆಗಲಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ