ಹಾವೇರಿ: ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರಿಂದ ಜೋಕುಮಾರಸ್ವಾಮಿ ಹಬ್ಬ ಆಚರಣೆ; ಸಡಗರ ಸಂಭ್ರಮ

ಜಾನಪದ ಸಂಸ್ಕೃತಿಯನ್ನು ಪರಿಚಯಿಸುವ ಜೋಕುಮಾರಸ್ವಾಮಿ ಹಬ್ಬ ಅದೆಷ್ಟೋ ಮಕ್ಕಳಿಗೆ ಗೊತ್ತೇ ಇಲ್ಲ.

ಹಾವೇರಿ: ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರಿಂದ ಜೋಕುಮಾರಸ್ವಾಮಿ ಹಬ್ಬ ಆಚರಣೆ; ಸಡಗರ ಸಂಭ್ರಮ
ಪೂಜೆಯ ಸಂಭ್ರಮದಲ್ಲಿ ವಿದ್ಯಾರ್ಥಿನಿಯರು
Follow us
TV9 Web
| Updated By: guruganesh bhat

Updated on:Sep 26, 2021 | 7:14 PM

ಹಾವೇರಿ: ಉತ್ತರ ಕರ್ನಾಟಕ ಭಾಗದಲ್ಲಿ ಗಣೇಶ ಚತುರ್ಥಿ ನಂತರ ಜೋಕುಮಾರಸ್ವಾಮಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಜೋಕುಮಾರಸ್ವಾಮಿ ಮೂರ್ತಿಯನ್ನು ಬುಟ್ಟಿಯಲ್ಲಿಟ್ಟುಕೊಂಡು ಮಹಿಳೆಯರು ಹಾಡುತ್ತಾ ಮನೆಮನೆಗೆ ತೆರಳಿ ಪೂಜಿಸಲಾಗುತ್ತದೆ. ಆದರೆ ಇತ್ತೀಚಿಗೆ ಈ ಜಾನಪದ ಸಂಸ್ಕೃತಿ ಕಣ್ಮರೆ ಆಗುತ್ತಿರುವ ಕಾರಣ ಮಕ್ಕಳಿಗೆ ಹಬ್ಬದ ಪರಿಚಯ ಮಾಡಿಸಲು ಶಾಲೆಯಲ್ಲಿ ಹಬ್ಬ ಆಯೋಜಿಸಲಾಗಿತ್ತು. ವಿದ್ಯಾರ್ಥಿನಿಯರು ಸೀರೆಯುಟ್ಟು ಕಲರ್ ಕಲರ್ ಆಗಿ ತಯಾರಿಸಿದ ಮೂರ್ತಿಯನ್ನು ಬುಟ್ಟಿಯಲ್ಲಿಟ್ಟುಕೊಂಡು ಹಾಡು ಹೇಳಿ, ಪೂಜೆ ಮಾಡಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಮಣ್ಣಿನಿಂದ ತಯಾರಿಸಿದ ಜೋಕುಮಾರಸ್ವಾಮಿ ಮೂರ್ತಿ. ಕಲರ್‌ಕಲರ್ ಬಣ್ಣಗಳಿಂದ ಅಲಂಕಾರಗೊಂಡಿರೋ ಮೂರ್ತಿ. ಮೂರ್ತಿಯನ್ನು ಬುಟ್ಟಿಯಲ್ಲಿಟ್ಟುಕೊಂಡು ಹಾಡು ಹೇಳುತ್ತ ಹೊತ್ತುಕೊಂಡು ಸಂಭ್ರಮಿಸುತ್ತಿರುವ ವಿದ್ಯಾರ್ಥಿನಿಯರು‌. ಹಾವೇರಿ ನಗರದ ಗೆಳೆಯರ ಬಳಗ ಪ್ರೌಢಶಾಲೆಯಲ್ಲಿ ಕಂಡುಬಂದ ದೃಶ್ಯಗಳಿವು. ಉತ್ತರ ಕರ್ನಾಟಕ ಭಾಗದಲ್ಲಿ ಗಣೇಶ ಚತುರ್ಥಿ ನಂತರ ಆಗಮಿಸುವ ಜೋಕುಮಾರಸ್ವಾಮಿ ಹಬ್ಬಕ್ಕೆ ತನ್ನದೇ ಆದ ವಿಶೇಷತೆಯಿದೆ. ಜೋಕುಮಾರಸ್ವಾಮಿ ಹಬ್ಬದಿಂದ ರೈತರು ಮಳೆ, ಬೆಳೆ ನಿರ್ಧರಿಸುತ್ತಾರೆ. ಅಂಬಿಗೇರ ಜನಾಂಗದ ಮಹಿಳೆಯರು ಜೋಕುಮಾರಸ್ವಾಮಿ ಮೂರ್ತಿಯನ್ನು ಬುಟ್ಟಿಯಲ್ಲಿ ಇಟ್ಕೊಂಡು ತಲೆ ಮೇಲೆ ಹೊತ್ತುಕೊಂಡು ಹಾಡು ಹೇಳುತ್ತ ಮನೆಮನೆಗೆ ತೆರಳುತ್ತಾರೆ. ಜೋಕುಮಾರಸ್ವಾಮಿ ಹೊತ್ತು ಬಂದ ಮಹಿಳೆಯರಿಗೆ ರೈತರು ಕಾಳು, ಬಟ್ಟೆ, ಹಣ ನೀಡುತ್ತಾರೆ. ಪ್ರತಿಯಾಗಿ ಮಹಿಳೆಯರು ಜೋಕುಮಾರಸ್ವಾಮಿಯ ಪ್ರಸಾದವನ್ನು ರೈತರಿಗೆ ನೀಡುತ್ತಾರೆ. ರೈತರು ಅದನ್ನು ಜಮೀನಿಗೆ ಒಯ್ದು ಹಾಕುತ್ತಾರೆ‌. ಜಾನಪದ ಸಂಸ್ಕೃತಿಯನ್ನು ಪರಿಚಯಿಸುವ ಜೋಕುಮಾರಸ್ವಾಮಿ ಹಬ್ಬ ಅದೆಷ್ಟೋ ಮಕ್ಕಳಿಗೆ ಗೊತ್ತೇ ಇಲ್ಲ. ಹೀಗಾಗಿ ಈ ಹಬ್ಬವನ್ನು ಮಕ್ಕಳಿಗೆ ಪರಿಚಯಿಸಿ ಹಬ್ಬದ ವಿಶೇಷತೆ ಪರಿಚಯಿಸುವ ಸಲುವಾಗಿ ಹಾವೇರಿ ನಗರದ ಗೆಳೆಯರ ಬಳಗ ಪ್ರೌಢಶಾಲೆಯಲ್ಲಿ ಜೋಕುಮಾರಸ್ವಾಮಿ ಹಬ್ಬ ಆಯೋಜಿಸಲಾಗಿತ್ತು.

Haveri Jokumaraswamy

ಜೋಕುಮಾರಸ್ವಾಮಿ

ಏಳರಿಂದ ಎಂಟು ವಿದ್ಯಾರ್ಥಿಗಳನ್ನೊಳಗೊಂಡ ಆರು ತಂಡಗಳನ್ನು ರಚಿಸಲಾಗಿತ್ತು. ಆರು ತಂಡಗಳು ತಮ್ಮದೇ ಆದ ರೀತಿಯಲ್ಲಿ ಮಣ್ಣಿನಿಂದ ಜೋಕುಮಾರಸ್ವಾಮಿ ಮೂರ್ತಿಯನ್ನು ತಯಾರಿಸಿ, ಅದಕ್ಕೆ ಕಲರ್ ಕಲರ್ ಬಣ್ಣಗಳನ್ನ ಬಳಿದು ಸುಂದರವಾಗಿ ಕಾಣುವಂತೆ ಮಾಡಲಾಗಿತ್ತು. ತಲೆಗೆ ಪೇಟ ಸುತ್ತಿ, ಜೋಕುಮಾರಸ್ವಾಮಿಯನ್ನು ಬಿದಿರಿನ ಬುಟ್ಟಿಯಲ್ಲಿ ಕೂರಿಸಿ ಭರ್ಜರಿ ಅಲಂಕಾರ ಮಾಡಲಾಗಿತ್ತು. ಕಲರ್ ಕಲರ್ ಸೀರೆಗಳನ್ನ ಉಟ್ಕೊಂಡು ಮಿಂಚುತ್ತಿದ್ದ ವಿದ್ಯಾರ್ಥಿನಿಯರು ಜೋಕುಮಾರಸ್ವಾಮಿಯ ಬುಟ್ಟಿಯನ್ನ ತಲೆ ಮೇಲೆ ಹೊತ್ತುಕೊಂಡು ಹಾಡು ಹೇಳ್ತಾ ಜೋಕುಮಾರಸ್ವಾಮಿ ಹಬ್ಬವನ್ನ ನೆನೆಪಿಸಿದರು. ಬುಟ್ಟಿಯಲ್ಲಿ ಕೂರಿಸಿದ್ದ ಜೋಕುಮಾರಸ್ವಾಮಿ ಮುಂದೆ ದೀಪ ಹಚ್ಚಿ, ಕಾಳು, ಬೆಣ್ಣೆ ಇಟ್ಟು ಜೋಕುಮಾರಸ್ವಾಮಿ ಹಬ್ಬ ನೆನಪಿಸುವ ಹಾಡುಗಳನ್ನು ಹೇಳಿದರು.

Haveri Jokumaraswamy

ಪೂಜೆಯ ಸಂಭ್ರಮದಲ್ಲಿ ವಿದ್ಯಾರ್ಥಿನಿಯರು

ಶಾಲಾ ಶಿಕ್ಷಕರ ಮಾರ್ಗದರ್ಶನದಲ್ಲಿ ಯಾವ ಕಲಾವಿದರಿಗೂ ಕಡಿಮೆ ಇಲ್ಲದಂತೆ ವಿದ್ಯಾರ್ಥಿನಿಯರು ಜೋಕುಮಾರಸ್ವಾಮಿ ಮೂರ್ತಿಯನ್ನ ತಯಾರಿಸಿ ಥೇಟ್ ಜೋಕುಮಾರಸ್ವಾಮಿಯ ಹಬ್ಬವನ್ನೆ ಆಚರಿಸಿದರು‌. ನಂತರ ಎಲ್ಲರೂ ಸೇರಿಕೊಂಡು ಸಂಭ್ರಮದಿಂದ ಭರ್ಜರಿಯಾಗಿ ಅಲಂಕಾರ ಮಾಡಲಾಗಿದ್ದ ಜೋಕುಮಾರಸ್ವಾಮಿಯ ಜೊತೆ ನಿಂತು ವಿದ್ಯಾರ್ಥಿನಿಯರು ಫೋಟೋ ತೆಗೆಸಿಕೊಂಡು, ಸೆಲ್ಫಿ ಕ್ಲಿಕ್ಕಿಸಿಕೊಂಡು ಹಬ್ಬದ ಸಂಭ್ರಮ ಆಚರಿಸಿದರು. ಶಾಲಾ ವಿದ್ಯಾರ್ಥಿಗಳಾದ ಕೋಮಲ ಖೋಡೆ, ಅಶ್ವಿನಿ ಮತ್ತು ಚಂದನಾ ಅವರು ಟಿವಿ9 ಕನ್ನಡ ಡಿಜಿಟಲ್ ಜತೆಗೆ ತಮ್ಮ ಸಂಭ್ರಮವನ್ನು ಹಂಚಿಕೊಂಡರು.

ಮಣ್ಣನ್ನು ಪೂಜಿಸುವ ಹಬ್ಬಗಳಲ್ಲಿ ಜೋಕುಮಾರಸ್ವಾಮಿಯ ಹಬ್ಬವೂ ಒಂದು. ಉತ್ತರ ಕರ್ನಾಟಕ ಭಾಗದಲ್ಲಿ ಅದರಲ್ಲೂ ಹಾವೇರಿ ಜಿಲ್ಲೆಯಲ್ಲಿ ಜೋಕುಮಾರಸ್ವಾಮಿ ಹಬ್ಬ ಸಖತ್ ಫೇಮಸ್ ಆಗಿದೆ. ಆದರೆ ಆಧುನಿಕತೆಯ ಭರಾಟೆಯಲ್ಲಿ ಜಾನಪದ ಸಂಸ್ಕೃತಿ ಸಾರುವ ರೈತರ ಜೋಕುಮಾರಸ್ವಾಮಿ ಹಬ್ಬ ಕಣ್ಮರೆ ಆಗುತ್ತಿದೆ. ಹೀಗಾಗಿ ಶಾಲಾ ವಿದ್ಯಾರ್ಥಿನಿಯರಿಗೆ ಜೋಕುಮಾರಸ್ವಾಮಿ ಹಬ್ಬದ ಪರಿಚಯ ಮಾಡಿಕೊಡಲು ಆಯೋಜಿಸಿದ್ದ ಹಬ್ಬದಲ್ಲಿ ಮಕ್ಕಳು ಜೋಕುಮಾರಸ್ವಾಮಿ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಿ ಸಂಭ್ರಮಿಸಿದರು.

ವಿಶೇಷ ವರದಿ: ಪ್ರಭುಗೌಡ. ಎನ್. ಪಾಟೀಲ ಟಿವಿ9 ಹಾವೇರಿ

ಇದನ್ನೂ ಓದಿ:  

ದೇಸಾಯಿವಾಡೆ: ಶಂಕರ್ ನಾಗ್ ಅವರ ಜೋಕುಮಾರ ಸ್ವಾಮಿ ಚಿತ್ರ ಶೂಟಿಂಗ್ ನಡೆದದ್ದು ಇಲ್ಲೇ

ಅಸ್ಪೃಶ್ಯತೆಯನ್ನು ತೊಲಗಿಸೋಣ ಎಂದು ಗ್ರಾಮಸ್ಥರ ಬಳಿ ಪ್ರತಿಜ್ಞೆ ಮಾಡಿಸಿದ ಕೊಪ್ಪಳ ಪೊಲೀಸರು

(Haveri Jokumaraswamy Folk festival celebrated by High School students)

Published On - 7:12 pm, Sun, 26 September 21

ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ