AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾವೇರಿ: ಸಿಎಂ ತವರು ಜಿಲ್ಲೆಯಲ್ಲಿನ ಮೆಡಿಕಲ್ ಕಾಲೇಜಿನಲ್ಲಿ ಬೋಧಕರೇ ಇಲ್ಲ; ಕಂಗಾಲಾದ ವಿದ್ಯಾರ್ಥಿಗಳು

ಮೆಡಿಕಲ್ ಕಲಿಬೇಕು ಎಂಬುವುದು ಬಹಳಷ್ಟು ಜನರ ಕನಸಾಗಿರುತ್ತೆ, ಅದರಲ್ಲೂ ಸರ್ಕಾರಿ ಕಾಲೇಜ್​ನಲ್ಲಿ ಸೀಟು ಸಿಕ್ಕರೆ ಆನಂದಕ್ಕೆ ಪಾರವೇ ಇರುವುದಿಲ್ಲ, ಆದ್ರೆ ಸಿಎಂ ತವರು ಜಿಲ್ಲೆಯಲ್ಲಿ ಪ್ರಾರಂಭಿಸಿರುವ ಸರ್ಕಾರಿ ಮೆಡಿಕಲ್ ಕಾಲೇಜ್​ನಲ್ಲಿ ಬೋಧಕರಿಲ್ಲದೇ ವಿದ್ಯಾರ್ಥಿಗಳ ಕಷ್ಟ ಮಾತ್ರ ಹೇಳತಿರದು.

ಹಾವೇರಿ: ಸಿಎಂ ತವರು ಜಿಲ್ಲೆಯಲ್ಲಿನ ಮೆಡಿಕಲ್ ಕಾಲೇಜಿನಲ್ಲಿ ಬೋಧಕರೇ ಇಲ್ಲ; ಕಂಗಾಲಾದ ವಿದ್ಯಾರ್ಥಿಗಳು
ಹಾವೇರಿ ಮೆಡಿಕಲ್ ಕಾಲೇಜಿನಲ್ಲಿ ಬೋಧಕರಿಲ್ಲದೇ ಕಂಗಾಲಾದ ವಿದ್ಯಾರ್ಥಿಗಳು
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: Feb 19, 2023 | 10:25 AM

Share

ಹಾವೇರಿ: ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೋಮ್ಮಾಯಿಯವರ ತವರು ಜಿಲ್ಲೆಯಲ್ಲಿ ಆರಂಭವಾಗಿರುವ ವೈದ್ಯಕೀಯ ಕಾಲೇಜ್​ಗೆ ಯಾವುದೇ ಸಮಸ್ಯೆ ಇರಲ್ಲ ಎಂಬ ಆಶಯದಿಂದ ಪಿಯುಸಿ ಮತ್ತು ಸಿಇಟಿ ಯಲ್ಲಿ ಉತ್ತಮ ಅಂಕ ಪಡೆದ 149 ವಿದ್ಯಾರ್ಥಿಗಳು ಇಲ್ಲಿ ಅಡ್ಮಿಷನ್ ಪಡೆದಿದ್ದಾರೆ. ಆದರೆ ಇಲ್ಲಿ ಡಿನ್ ಮತ್ತು ಓರ್ವ ಪ್ರಾದ್ಯಾಪಕರು ಬಿಟ್ಟರೆ ಪಾಠ ಬೋಧನೆ ಮಾಡಲು ಶಿಕ್ಷಕರೆ ಇಲ್ಲ. ಕಳೆದ ವರ್ಷ ಸಂದರ್ಶನ ಮಾಡಿದ್ರೂ ಕೂಡ ಇದುವರೆಗೂ ಓರ್ವ ಶಿಕ್ಷಕನನ್ನು ಕೂಡ ನೇಮಕ ಮಾಡಿಕೊಳ್ಳದ ಹಿನ್ನಲೆ ವಾರದಲ್ಲಿ ಓಮ್ಮೆ ಮಾತ್ರ ಕ್ಲಾಸ್ ನಡೆಯುತ್ತಿದೆ. ಉಳಿದ ದಿನ ಹಾಸ್ಟೇಲ್​ನಲ್ಲಿಯೇ ವಿದ್ಯಾರ್ಥಿಗಳು ಕಾಲ ಕಳೆಯುತ್ತಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಜಗದೀಶ್ ಶೇಟ್ಟರ್ ವಿಧಾನಸಭೆ ಕಲಾಪದಲ್ಲಿ ಆರೋಗ್ಯ ಸಚಿವರಿಗೆ ತರಾಟೆಗೆ ತೆಗೆದುಕೊಂಡರೂ ಇದುವರೆಗೂ ಯಾವುದೇ ಪ್ರಯೋಜನ ಆಗಿಲ್ಲ.

ಕಳೆದ ವರ್ಷ ಆರಂಭವಾಗಿರುವ ಸರ್ಕಾರಿ ಮೇಡಿಕಲ್ ಕಾಲೇಜ್​ಗೆ, ಹಾವೇರಿ ಹೊರವಲಯದ ದೇವಗಿರಿ, ಯಲ್ಲಾಪುರ ಬಳಿ 56 ಎಕರೆ ಜಾಗದಲ್ಲಿ ಸುಮಾರು 478 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಇದುವರೆಗೂ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದ ಹಿನ್ನಲೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಕಟ್ಟಡದಲ್ಲಿಯೇ ಪಾಠ ಮಾಡಲಾಗುತ್ತಾ ಇದೆ. ಇಂಜಿನಿಯರಿಂಗ್ ಕಾಲೇಜ್ ಹಾಸ್ಟೆಲ್​ನಲ್ಲೂ ವಿದ್ಯಾರ್ಥಿಗಳು ಇದ್ದೂ ಅಲ್ಲಿಯೂ ಸಮರ್ಪಕ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಸಮಸ್ಯೆ ಜಾಸ್ತಿ ಆಗಿದೆ. ಇನ್ನೊಂದು 15 ದಿನಗಳಲ್ಲಿ ಬೋಧಕರನ್ನು ನೆಮಕ ಮಾಡದೆ ಇದ್ದರೆ, ನಾನು ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಮಾಜಿ ಸಚಿವ ರುದ್ರಪ್ಪಾ ಲಮಾಣಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:ಚಾಮರಾಜನಗರ: ಶಿಕ್ಷಕರಿಬ್ಬರ ಜಗಳದಿಂದ ಮೇಗಲಹುಂಡಿ ಸರ್ಕಾರಿ ಫ್ರೌಢಶಾಲೆ ಬಂದ್​; ಶಿಕ್ಷಕರ ವಿರುದ್ಧ ಗ್ರಾಮಸ್ಥರ ಆಕ್ರೋಶ

ಒಟ್ಟಾರೆಯಾಗಿ ಸರ್ಕಾರ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಡಾಕ್ಟರ್ ಆಗುವ ಕನಸು ಕಂಡಿದ್ದ ವಿದ್ಯಾರ್ಥಿಗಳು ಕಷ್ಟ ಆನುಭವಿಸುತ್ತಿದ್ದು, ಇನ್ನಾದ್ರೂ ಮುಖ್ಯಮಂತ್ರಿಗಳು ತವರು ಜಿಲ್ಲೆ ಎಂಬ ಭಾವನೆಯಿಂದ ಸಮಸ್ಯೆಯನ್ನು ಬೇಗ ಪರಿಹರಿಸ್ತಾರಾ ಎಂಬುವುದನ್ನ ಕಾದು ನೋಡಬೆಕಿದೆ.

ವರದಿ: ಸೂರಜ್ ಉತ್ತೂರೆ ಟಿವಿ9 ಹಾವೇರಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ