KIADB ಮತ್ತೊಂದು ಬಾನಗಡಿ! ಬ್ಯಾಡಗಿ ತಾಲೂಕಿನಲ್ಲಿ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಕೈಗಾರಿಕೆ ಮಾಡಲು ಹೊರಟಿದೆ, ರೈತರಿಗೆ ತಿಳಿಸದೆಯೇ!

ಕೈಗಾರಿಕಾ ಕಾರಿಡಾರ್ ಗೆ ಭೂಮಿ ಸ್ವಾಧೀನಕ್ಕೆ ಒಳಪಡೋ ಜಮೀನಿನಲ್ಲಿ ಬ್ಯಾಡಗಿ ಬಿಜೆಪಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹಾಗೂ ಕುಟುಂಬಸ್ಥರ ಒಂದು ನೂರು ಎಕರೆಗೂ ಅಧಿಕ ಜಮೀನಿದೆ‌. ಆದ್ರೆ ಜಮೀನು ಭೂಸ್ವಾಧೀನಕ್ಕೆ ಒಳಪಡ್ತಿರೋದು ಶಾಸಕರು ಮತ್ತು ಮತ್ತವರ ಕುಟುಂಬದವರಿಗೂ ಗೊತ್ತಿಲ್ವಂತೆ!

KIADB ಮತ್ತೊಂದು ಬಾನಗಡಿ! ಬ್ಯಾಡಗಿ ತಾಲೂಕಿನಲ್ಲಿ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಕೈಗಾರಿಕೆ ಮಾಡಲು ಹೊರಟಿದೆ, ರೈತರಿಗೆ ತಿಳಿಸದೆಯೇ!
ಬ್ಯಾಡಗಿ ತಾಲೂಕಿನಲ್ಲಿ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಕೈಗಾರಿಕೆ ಮಾಡಲು ಹೊರಟಿದೆ, ರೈತರಿಗೆ ತಿಳಿಸದೆಯೇ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Dec 04, 2022 | 6:06 AM

ಸುಮಾರು ವರ್ಷಗಳಿಂದ ಅವರೆಲ್ಲ ಕೃಷಿಯನ್ನೆ ನಂಬಿ ಜೀವನ ಸಾಗಿಸ್ತಿದ್ದಾರೆ. ಈಗ ಕೈಗಾರಿಕಾ ಕಾರಿಡಾರ್ ಮಾಡೋದಾಗಿ ಸರಕಾರ ಅವರ ಜಮೀನು (agricultural land) ಸ್ವಾಧೀನಕ್ಕೆ ಮುಂದಾಗಿದೆ. ರೈತರಿಗೆ ಗೊತ್ತಿಲ್ಲದಂತೆ ರೈತರ ಭೂಮಿ ಸ್ವಾಧೀನಕ್ಕೆ ನೊಟೀಸ್ ಹೊರಡಿಸಿದೆ. ಇದರ ವಿರುದ್ಧ ಮೊನ್ನೆ ಪಾದಯಾತ್ರೆ ಮಾಡಿ ತಹಶಿಲ್ದಾರರ ಕಚೇರಿ ಬಂದ್ ಮಾಡಿ ರೈತರು ಪ್ರತಿಭಟನೆ (farmers protest) ಮಾಡಿದ್ದರು. ಮುಂದಿನ ದಿನಗಳಲ್ಲಿ ಹೆದ್ದಾರಿ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ (byadgi taluk) ಮೋಟೆಬೆನ್ನೂರು, ಅಳಲಗೇರಿ, ಅರಬಗೊಂಡ ಗ್ರಾಮದ ರೈತರು ತಮ್ಮ ಎತ್ತು, ಚಕ್ಕಡಿಗಳೊಂದಿಗೆ ತಹಶೀಲ್ದಾರ ಕಚೇರಿ ಅಂಗಳಕ್ಕೆ ಬಂದುನಿಂತಿದ್ದಾರೆ. ಇವರೆಲ್ಲರೂ ತಮ್ಮ ಪಾಡಿಗೆ ತಾವು ಅಂತಾ ಪಿತ್ರಾರ್ಜಿತವಾಗಿ ಬಂದಿದ್ದ ತಮ್ಮ ಜಮೀನಿನಲ್ಲಿ ಕೃಷಿ ಮಾಡ್ಕೊಂಡು ಜೀವನ ಸಾಗಿಸ್ತಿದ್ದವರು. ಆದ್ರೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಕೈಗಾರಿಕಾ ಕಾರಿಡಾರ್ ಮಾಡ್ತೀವಿ ಅಂತಾ ಮೂರು ಗ್ರಾಮಗಳ 1,017 ಎಕರೆ 17 ಗುಂಟೆ ಜಮೀನು ಸ್ವಾಧೀನಕ್ಕೆ ಮುಂದಾಗಿದೆ.

ರೈತರ ಗಮನಕ್ಕೆ ತಾರದೆ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿಗಳು ರೈತರಿಗೆ ಫೋರ್ ಒನ್ ನೊಟೀಸ್ ಹೊರಡಿಸಿದ್ದಾರೆ. ಇದು ಭೂಮಿ ಕಳೆದುಕೊಳ್ಳಲಿರೋ ರೈತರನ್ನು ಕೆರಳಿಸಿದೆ. ಹೀಗಾಗಿ ರೈತರು ಈಗ ಸರಕಾರದ ವಿರುದ್ಧ ಕೆರಳಿ ನಿಂತಿದ್ದಾರೆ. ತಹಶಿಲ್ದಾರರ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ಸತ್ಯಾಗ್ರಹ ನಡೆಸಿದ್ದಾರೆ. ಡಿಸೆಂಬರ್ 12 ರಂದು ಮೊಟ್ಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಮೂರು ಗ್ರಾಮಗಳ 1,017 ಎಕರೆ 17 ಗುಂಟೆ ಜಮೀನು ಸ್ವಾಧೀನಕ್ಕೆ ಕೆಐಎಡಿಬಿ ಈಗಾಗಲೆ ಫೋರ್ ಒನ್ ನೊಟೀಸ್ ನೀಡಿದೆ. ಕೈಗಾರಿಕಾ ಕಾರಿಡಾರ್ ಗೆ ಭೂಮಿ ಸ್ವಾಧೀನಕ್ಕೆ ಒಳಪಡೋ ಜಮೀನಿನಲ್ಲಿ ಬ್ಯಾಡಗಿ ಬಿಜೆಪಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹಾಗೂ ಕುಟುಂಬಸ್ಥರ ಒಂದು ನೂರು ಎಕರೆಗೂ ಅಧಿಕ ಜಮೀನಿದೆ‌. ಆದ್ರೆ ಜಮೀನು ಭೂಸ್ವಾಧೀನಕ್ಕೆ ಒಳಪಡ್ತಿರೋದು ಶಾಸಕರು ಮತ್ತು ಮತ್ತವರ ಕುಟುಂಬದವರಿಗೂ ಗೊತ್ತಿಲ್ವಂತೆ!

KIADB to acquires thousands of acres of agricultural land in byadgi taluk in haveri district farmers protest

ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಕುಟುಂಬಸ್ಥರು ಸಹ ಕೈಗಾರಿಕಾ ಕಾರಿಡಾರ್ ಗೆ ಯಾವುದೇ ಕಾರಣಕ್ಕೂ ಭೂಮಿ ಕೊಡೋದಿಲ್ಲ ಅಂತಾ ರೈತರ ಪ್ರತಿಭಟನಾ ಧರಣಿಯಲ್ಲಿ ಕುಳಿತಿದ್ದಾರೆ. ಇನ್ನು ಈಗ ಕೆಐಎಡಿಬಿ ಸ್ವಾಧೀನಕ್ಕೆ ಮುಂದಾಗಿರೋ ಜಮೀನುಗಳಲ್ಲಿ ಬಹುತೇಕ ರೈತರು ನೀರಾವರಿ ಕೃಷಿ ಮಾಡ್ಕೊಂಡು ಜೀವನ ಸಾಗಿಸ್ತಿದ್ದಾರೆ‌. ಅಡಿಕೆ, ಹತ್ತಿ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದು ಜೀವನ ಸಾಗಿಸ್ತಿದ್ದಾರೆ. ಆದ್ರೆ ಅದ್ಯಾಕೋ ಸರಕಾರ ಕೈಗಾರಿಕಾ ಕಾರಿಡಾರ್ ಮಾಡೋಕೆ ಅಂತಾ ಫಲವತ್ತಾದ ರೈತರ ಜಮೀನಿನ ಮೇಲೆ ಕಣ್ಣು ಹಾಕಿದೆ. ಆದ್ರೆ ಇತ್ತ ರೈತರು ನಮ್ಮ ಭೂಮಿಯನ್ನ ನಮಗೆ ವಾಪಸ್ಸು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕೆಐಎಡಿಬಿ ರೈತರ ಜಮೀನು ಸ್ವಾಧೀನಕ್ಕೆ ಹೊರಡಿಸಿರೋ ನೊಟೀಸ್ ನಲ್ಲಿ ರೈತರು ಸ್ವಾಧೀನಕ್ಕೆ ಒಳಪಡೋ ಜಮೀನುಗಳನ್ನು ಮಾರಾಟ ಮಾಡುವುದಾಗಿ, ಜಮೀನಿನ ವಿನಿಮಯ, ಜಮೀನಿನಲ್ಲಿಯ ಮಣ್ಣು ತೆಗೆದುವುದಾಗಲಿ ಹೀಗೆ ಅನೇಕ ರೀತಿಯ ಷರತ್ತುಗಳನ್ನು ಹಾಕಿದೆ. ಸುಮಾರು ವರ್ಷಗಳಿಂದ ಪಿತ್ರಾರ್ಜಿತವಾಗಿ ಬಂದಿರೋ ಜಮೀನು ಉಳಿಮೆ ಮಾಡ್ತಿರೋ ಮೂರು ಗ್ರಾಮಗಳ ರೈತರು ಕೆಐಎಡಿಬಿ ನೊಟೀಸ್ ಕಂಡು ಕಂಗಾಲಾಗಿದ್ದಾರೆ. (ವರದಿ: ರವಿ ಹೂಗಾರ, ಟಿವಿ 9, ಹಾವೇರಿ)

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್