2024 ರ ನಂತರ ಪಾಕಿಸ್ತಾನದಲ್ಲಿ ಗಣೇಶನನ್ನು ಕೂರಿಸೋಣ; ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಇಷ್ಟು ಗಣಪತಿ ಕೂರಿಸಿದರೂ ಹಿಂದೂಗಳು ಒಂದೇ ಒಂದು ಕಲ್ಲು ಎಸೆದಿಲ್ಲ. ಉರ್ದು ಶಾಲೆಯಲ್ಲಿ ಕನ್ನಡ ಕಲಿಸಿದ ಗುರುಗಳಿಗೆ ಕಲ್ಲು ತಗೊಂಡು ಹೊಡೆದಿದ್ದಾರೆ. ನಾವು ಗುರು ಎಂದು ಗೌರವ ಕೊಡುತ್ತೇವೆ, ಅವರು ಹಾಗಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು.
ಹಾವೇರಿ. ಅ,07: 2024 ರಲ್ಲಿ ನಮ್ಮ ಬಿಜೆಪಿ ಸರ್ಕಾರ ಬಂದ್ರೆ, ಪಾಕಿಸ್ತಾನದಲ್ಲಿ ಗಣೇಶ ಮೂರ್ತಿ ಕೂರಿಸಿ ಪ್ರತಿಷ್ಠಾಪನೆ ಮಾಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದರು. ಇಂದು(ಅ.07) ಬಂಕಾಪೂರದಲ್ಲಿ ನಡೆದ ಹಿಂದೂ ಜನ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು ‘ಪಾಕಿಸ್ತಾನದ ಯುವಕರು ಅಲ್ಲಿನ ನಾಯಕರಿಗೆ ಬೈತಿದ್ದಾರೆ. ಅಲ್ಲಿನ ಯುವಕರಿಗೂ ಮೋದಿ ಬೇಕಾಗಿದ್ದಾರೆ. ಅದಕ್ಕಾಗಿ ನಾವು ಮತ್ತೆ ಬಿಜೆಪಿಯನ್ನು ಆಯ್ಕೆ ಮಾಡಬೇಕಿದೆ ಎಂದರು.
ವಸುದೈವ ಕುಟುಂಬಕಂ ನಮ್ಮ ಉದ್ದೇಶ
‘ ಒಂದಿನಾನೂ ಶಿವಾಜಿ ಎದುರಿಗೆ ಬಂದು ಅಕ್ಬರ್ ಯುದ್ದ ಮಾಡಲಿಲ್ಲ. ವಸುದೈವ ಕುಟುಂಬಕಂ ನಮ್ಮ ಉದ್ದೇಶವಾಗಿದೆ. ಇದೇ ವೇಳೆ ಶಿವಮೊಗ್ಗ ಗಲಾಟೆ ಪ್ರಕರಣ ವಿಚಾರ ‘ ಇಷ್ಟು ಗಣಪತಿ ಕೂರಿಸಿದರೂ ಹಿಂದೂಗಳು ಒಂದೇ ಒಂದು ಕಲ್ಲು ಎಸೆದಿಲ್ಲ. ಉರ್ದು ಶಾಲೆಯಲ್ಲಿ ಕನ್ನಡ ಕಲಿಸಿದ ಗುರುಗಳಿಗೆ ಕಲ್ಲು ತಗೊಂಡು ಹೊಡೆದಿದ್ದಾರೆ. ನಾವು ಗುರು ಎಂದು ಗೌರವ ಕೊಡುತ್ತೇವೆ, ಅವರು ಹಾಗಲ್ಲ. ಪೊಲೀಸರು ಒಳ್ಳೆಯವರೇ ಇದ್ದಾರೆ, ಅವರಿಗೂ ಒಳಗೆ ಕುದಿತಿರುತ್ತದೆ. ಆದರೆ, ಪಾಪ ಅವರು ಅವರ ಮೇಲಿನ ಲೀಡರ್ಗಳ ಮಾತು ಕೇಳಬೇಕಾಗುತ್ತೆ. ಇವರದು ಬಹಳ ದಿನ ಇರುವ ಸರ್ಕಾರ ಅಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ:ಕೇರಳದ ರೀತಿ ರಾಜ್ಯದಲ್ಲೂ ಮುಸ್ಲಿಮರಿಗೆ ಪ್ರಚೋದಿಸುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡ್ತಿದೆ; ಯತ್ನಾಳ್
ತ್ರಿಮೂರ್ತಿಗಳ ಆರ್ಶಿವಾದದಿಂದ ಸನಾತನ ಧರ್ಮ ಹುಟ್ಟಿದೆ
‘ಉದಯ್ ನಿಧಿ ಸ್ಟಾಲಿನ್ ಇಡೀ ಸನಾತನ ಧರ್ಮ ನಿರ್ಮೂಲನೆ ಮಾಡಬೇಕು ಎಂದಿದ್ದಾನೆ. ಅವರ ತಾಯಿ ಕೃಷ್ಣನ ಪೂಜೆ ಮಾಡುತ್ತಾಳೆ. ಸನಾತನ ಧರ್ಮ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಸನಾತನ ಧರ್ಮ ಒಬ್ಬರೆ, ಹುಟ್ಟಿಸಿದ ಧರ್ಮ ಅಲ್ಲ. ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮಹೇಶ್ವರ ಮೂವರ ಆಶೀರ್ವಾದದಿಂದ ಸನಾತನ ಧರ್ಮ ಹುಟ್ಟಿದೆ. ಟಿಪ್ಪು ಸುಲ್ತಾನ, ಔರಂಗ ಜೇಬ್, ಹೈದರ ಅಲಿ ಇಂತಹ ಎಷ್ಟೋ ರಾಜರು ಬಂದು ಹೋದರು. ಆದ್ರೆ, ಇದುವರೆಗೂ ನಮ್ಮ ಸನಾತನ ಧರ್ಮ ತೆಗೆಯಲು ಯಾರಿಂದಲೂ ಸಾಧ್ಯವಾಗಿಲ್ಲ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವುದು ನಿಶ್ಚಿತ
ನಾನು, ಬೊಮ್ಮಾಯಿ ಹಾಗೂ ಪ್ರಹ್ಲಾದ್ ಜೋಶಿ ಅವರು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇವೆ. 28 ಕ್ಕೆ 28 ಸ್ಥಾನ ಗೆಲ್ಲುವ ಶಪಥವನ್ನು ಇಲ್ಲಿಂದಲೆ ನಿಮಗೆಲ್ಲ ಸಂದೇಶ ಕೊಡುತ್ತೇನೆ. ಲೋಕಸಭಾ ಚುನಾವಣೆ ಬಳಿಕ ಈ ಸರ್ಕಾರ ಇರಲ್ಲ. ಬಿಜೆಪಿ ಗೆಲ್ಲುವುದು, ನಾವು ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತೇವೆ. ಬಳಿಕ ಈ ಕಾಂಗ್ರೆಸ್ ಸರ್ಕಾರ ಇರಲ್ಲ. ನೈತಿಕ ಹೊಣೆ ಹೊತ್ತು ರಾಜೀನಾಮೆ, ಸಿಎಂ ರಿಂದ ರಾಜ್ಯಪಾಲರ ಭೇಟಿ ಎಂದು ಬರುತ್ತದೆ. ಮುಸ್ಲಿಂರು ಎಲ್ಲರೂ ಒಂದಾಗಿ ಕಾಂಗ್ರೆಸ್ಗೆ ಮತ ಹಾಕುತ್ತಾರೆ. ಅಂದರೆ, ನೀವು ಹಿಂದೂಗಳೆಲ್ಲ ಒಂದಾಗಿ ಬಿಜೆಪಿಗೆ ಓಟ್ ಹಾಕಿ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:24 pm, Sat, 7 October 23