ವೈದರೊಬ್ಬರಿಂದ 1522 ಮಹಿಳೆಯರ ಗರ್ಭಕೋಶ ಶಸ್ತ್ರಚಿಕಿತ್ಸೆ; ಜಿಲ್ಲಾಡಳಿತ ಭರವಸೆ ಮೇರೆಗೆ ಪ್ರತಿಭಟನೆ ಹಿಂತೆಗೆತ

ವೈದರೊಬ್ಬರಿಂದ 1522 ಮಹಿಳೆಯರ ಗರ್ಭಕೋಶ ಶಸ್ತ್ರಚಿಕಿತ್ಸೆ; ಜಿಲ್ಲಾಡಳಿತ ಭರವಸೆ ಮೇರೆಗೆ ಪ್ರತಿಭಟನೆ ಹಿಂತೆಗೆತ
ಪಾದಯಾತ್ರೆ ಮಾಡುತ್ತಿರುವ ಮಹಿಳೆಯರು

ನಾಳೆ ಸಿಎಂ ಶಿಗ್ಗಾಂವಿಗೆ ಭೇಟಿ ನೀಡುವ ವೇಳೆ ಸಿಎಂ ಬಸವರಾಜ ಬೊಮ್ಮಾಯಿಯವರನ್ನು(CM Basavaraj Bommai) ಭೇಟಿ ಮಾಡಿಸುವುದು ಹಾಗೂ ಜಿಲ್ಲಾಡಳಿತದಿಂದ ನೆರವು ಕೊಡಿಸುವ ಪ್ರಯತ್ನದ ಭರವಸೆ ಹಿನ್ನೆಲೆಯಲ್ಲಿ ಪಾದಯಾತ್ರೆ ಹಿಂತೆಗೆತ.

TV9kannada Web Team

| Edited By: Ayesha Banu

Apr 27, 2022 | 8:19 AM

ಹಾವೇರಿ: ಹೊಟ್ಟೆ ನೋವು ಅಂತ ಆಸ್ಪತ್ರೆಗೆ ಹೋದರೆ ವೈದರೊಬ್ಬರು ಗರ್ಭಕೋಶ ಶಸ್ತ್ರಚಿಕಿತ್ಸೆ (Uterus Operation) ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯರು (Women) ಏಪ್ರಿಲ್ 25ರಿಂದ ಪಾದಾಯಾತ್ರೆ ನಡೆಸುತ್ತಿದ್ದಾರೆ. ಸದ್ಯ ಜಿಲ್ಲಾಡಳಿತ ಪ್ರತಿಭಟನಾಕಾರರ ಬೇಡಿಕೆಗಳನ್ನು ಇಡೇರಿಸುವುದಾಗಿ ಭರವಸೆ ನೀಡಿದ್ದು ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರ ಪಾದಯಾತ್ರೆ ತಾತ್ಕಾಲಿಕವಾಗಿ ಹಿಂತೆಗೆಯಲಾಗಿದೆ. ನಾಳೆ ಸಿಎಂ ಶಿಗ್ಗಾಂವಿಗೆ ಭೇಟಿ ನೀಡುವ ವೇಳೆ ಸಿಎಂ ಬಸವರಾಜ ಬೊಮ್ಮಾಯಿಯವರನ್ನು(CM Basavaraj Bommai) ಭೇಟಿ ಮಾಡಿಸುವುದು ಹಾಗೂ ಜಿಲ್ಲಾಡಳಿತದಿಂದ ನೆರವು ಕೊಡಿಸುವ ಪ್ರಯತ್ನದ ಭರವಸೆ ಹಿನ್ನೆಲೆಯಲ್ಲಿ ಪಾದಯಾತ್ರೆ ಹಿಂತೆಗೆತ. ಪಾದಯಾತ್ರೆ ಹಿಂತೆಗೆತದ ಚರ್ಚೆಯ ವೇಳೆ ನೊಂದ ಮಹಿಳೆ ಕಣ್ಣೀರು ಹಾಕಿದ್ದಾರೆ. ಗರ್ಭಕೋಶ ಶಸ್ತ್ರಚಿಕಿತ್ಸೆಯಿಂದ ಆಗುತ್ತಿರುವ ತೊಂದರೆ ನೆನೆದು ಕಣ್ಣೀರು ಹಾಕಿದ್ರು.

1522 ಮಹಿಳೆಯರ ಗರ್ಭಕೋಶ ತೆಗೆದ ಪ್ರಕರಣ, ಪರಿಹಾರಕ್ಕಾಗಿ ಆಗ್ರಹಿಸಿ ಮಹಿಳೆಯರ ಪಾದಯಾತ್ರೆ
ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದ ಡಾ.ಪಿ.ಶಾಂತ, ಸುಮಾರು 1522 ಮಹಿಳೆಯರಿಗೆ ವಿನಾಕಾರಣ ಗರ್ಭಕೋಶವನ್ನೇ ತೆಗೆದು ಹಾಕಿದ್ದಾರೆ. ನಂತರ 2017-18ರಲ್ಲಿ ತನಿಖೆ ನಡೆದು ಸರ್ಕಾರ 45 ಕೋಟಿ ಪರಿಹಾರವನ್ನ ಪ್ರಕಟಿಸಿದೆ. ಆದ್ರೆ, ಧೃಡೀಕರಣ ಪತ್ರ ಇಲ್ಲ ಅಂತ ಮಹಿಳೆಯರಿಗೆ ಸಿಗಬೇಕಾಗಿದ್ದ ಹಣವನ್ನ ನೀಡಿಲ್ಲ. ಹೀಗಾಗಿ, ರೊಚ್ಚಿಗೆದ್ದ ಮಹಿಳೆಯರೆಲ್ಲ ನಿನ್ನೆ ಶಿಗ್ಗಾಂವಿಯಲ್ಲಿರುವ ಸಿಎಂ ನಿವಾಸದತ್ತ ಪಾದಯಾತ್ರೆ ಹೊರಟಿದ್ದರು.

ಪಾದಯಾತ್ರೆಯ ಎರಡನೇ ದಿನ ಹಾವೇರಿಯ ಹೊರವಲಯದಲ್ಲಿ ಮಹಿಳೆಯರಿಗೆ ಪೊಲೀಸ್ರು ಅಡ್ಡಿಹಾಕಿದ್ರು. ಈ ವೇಳೆ ಮಹಿಳೆಯರ ಮನವೊಲಿಸಲು ಅಧಿಕಾರಿಗಳು ಮುಂದಾದ್ರು. ಆದ್ರೆ, ಹೋರಾಟದ ಮುಂದಾಳತ್ವ ವಹಿಸಿದವ್ರು ಅದಕ್ಕೆ ಬಗ್ಗಲಿಲ್ಲ. ಸದ್ಯ ಈಗ ಜಿಲ್ಲಾಡಳಿತದ ಭರವಸೆ ಹಿನ್ನೆಲೆ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರ ಪಾದಯಾತ್ರೆ ತಾತ್ಕಾಲಿಕವಾಗಿ ಹಿಂತೆಗೆಯಲಾಗಿದೆ.

ಇದನ್ನೂ ಓದಿ: ಹಾವೇರಿಯಲ್ಲಿ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರಿಂದ ಪ್ರತಿಭಟನೆ; ಪರಿಹಾರಕ್ಕೆ ಆಗ್ರಹಿಸಿ ಸಿಎಂ ನಿವಾಸದವರೆಗೆ ಪಾದಯಾತ್ರೆ

KGF 3: ‘ಇನ್ನೂ ಭರ್ಜರಿಯಾದ ದೃಶ್ಯಗಳಿವೆ’: ‘ಕೆಜಿಎಫ್​ 3’ ಬಗ್ಗೆ ಮಾಹಿತಿ ಬಹಿರಂಗ ಮಾಡಿದ ಯಶ್​​

Follow us on

Related Stories

Most Read Stories

Click on your DTH Provider to Add TV9 Kannada