ಮಳೆಯಿಂದ ಸಂಕಷ್ಟದಲ್ಲಿದ್ದರೂ ಸ್ಪಂದಿಸದಿದ್ದಕ್ಕೆ ಗ್ರಾ.ಪಂ. ಅಧ್ಯಕ್ಷನಿಗೆ ಧರ್ಮದೇಟು ನೀಡಿದ ಗ್ರಾಮಸ್ಥರು
ಮಳೆಯಿಂದ ಜನರು ಸಂಕಷ್ಟದಲ್ಲಿದ್ದರೂ ಸ್ಪಂದಿಸದಿದ್ದಕ್ಕೆ ಶಿಗ್ಗಾಂವಿ ತಾಲೂಕಿನ ಶಿಶುವಿನಹಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಂಗಪ್ಪನಿಗೆ ಜನರು ಧರ್ಮದೇಟು ನೀಡಿದ್ದಾರೆ.
ಹಾವೇರಿ: ಮಳೆಯಿಂದ ಜನರು ಸಂಕಷ್ಟದಲ್ಲಿದ್ದರೂ ಸ್ಪಂದಿಸದಿದ್ದಕ್ಕೆ ಶಿಗ್ಗಾಂವಿ (Shiggavi) ತಾಲೂಕಿನ ಶಿಶುವಿನಹಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಂಗಪ್ಪನಿಗೆ ಜನರು ಧರ್ಮದೇಟು ನೀಡಿದ್ದಾರೆ. ಗ್ರಾಮದಲ್ಲಿ ಮಳೆಯಿಂದ ಮನೆ ಕುಸಿದು ಬಸನಗೌಡ ಪಾಟೀಲ ಎಂಬುವರು ಮೃತಪಟ್ಟಿದ್ದರು. ಅಲ್ಲದೇ ಹಲವು ಮನೆಗಳು ಕುಸಿದು, ಯುವಕ ಮೃತಪಟ್ಟರೂ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಹೀಗಾಗಿ ಇಂದು ಗ್ರಾಮಕ್ಕೆ ತಹಶೀಲ್ದಾರ್ ಶಿವಾನಂದ ರಾಣೆ ಭೇಟಿ ನೀಡಿದ ವೇಳೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ತಹಶೀಲ್ದಾರ್ ಎದುರೇ ಗ್ರಾ.ಪಂ. ಅಧ್ಯಕ್ಷ ನಿಂಗಪ್ಪನಿಗೆ ಎಳೆದಾಡಿ ಜನರು ಧರ್ಮದೇಟು ನೀಡಿದ್ದಾರೆ. ಆಗ ಗ್ರಾ.ಪಂ. ಅಧ್ಯಕ್ಷನನ್ನು ಬಿಡಿಸಿಕೊಳ್ಳಲು ಯತ್ನಿಸಿದ ಗ್ರಾ.ಪಂ. ಸದಸ್ಯ ನಿಂಗಯ್ಯ ಪೂಜಾರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಶಿಗ್ಗಾಂವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:10 pm, Tue, 6 September 22