ಆಟವಾಡುತ್ತಿದ್ದ ವೇಳೆ ಮೊಬೈಲ್ ಬ್ಯಾಟರಿ ಸ್ಫೋಟ: ಬಾಲಕನ 3 ಬೆರಳು ಕಟ್, ಮುಖಕ್ಕೂ ಗಾಯ
Mobile charger blast: ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ಕಾರ್ತಿಕ್ ಕಲಾದಗಿ ಗಾಯಗೊಂಡ ಬಾಲಕ. ಮನೆಯ ಪಕ್ಕದಲ್ಲಿ ಎಸೆದಿದ್ದ ಹಾಳಾದ ಮೊಬೈಲ್ ಬ್ಯಾಟರಿ ಹಿಡಿದು ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಆಟವಾಡುತ್ತಿದ್ದ ವೇಳೆ ಮೊಬೈಲ್ ಬ್ಯಾಟರಿ ಸ್ಫೋಟ: ಬಾಲಕನ 3 ಬೆರಳು ಕಟ್, ಮುಖಕ್ಕೂ ಗಾಯ
ಹಾವೇರಿ: ಬಾಲಕನೊಬ್ಬ ಆಟವಾಡುತ್ತಿದ್ದ ವೇಳೆ ಮೊಬೈಲ್‌ನ ಹಳೆಯ ಬ್ಯಾಟರಿ ಸ್ಫೋಟಗೊಂಡಿದೆ. ಇದರಿಂದ 10 ವರ್ಷದ ಬಾಲಕನ 3 ಬೆರಳು ತುಂಡರಿಸಿದ್ದು, ಮುಖಕ್ಕೂ ಗಾಯಗಳಾಗಿವೆ.
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ಕಾರ್ತಿಕ್ ಕಲಾದಗಿ ಗಾಯಗೊಂಡ ಬಾಲಕ. ಮನೆಯ ಪಕ್ಕದಲ್ಲಿ ಎಸೆದಿದ್ದ ಹಾಳಾದ ಮೊಬೈಲ್ ಬ್ಯಾಟರಿ ಹಿಡಿದು ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಬಾಲಕ ಕಾರ್ತಿಕನಿಗೆ ಸವಣೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Viral Video: ಬ್ಯಾಗ್ನಲ್ಲಿದ್ದ ಮೊಬೈಲ್ನಲ್ಲಿ ಬೆಂಕಿ; ಕೈ, ತಲೆಕೂದಲು ಸುಟ್ಟುಕೊಂಡ ಯುವಕ
(while playing with used mobile charger blast takes place village boy lost 3 fingers in haveri district)