ಬಡವರ ಜಮೀನು ಉಳಿಸಿಕೊಟ್ಟರೆ ಸಿದ್ದರಾಮಯ್ಯಗೆ ಆಭಾರಿ: ನೈಸ್ ಯೋಜನಯಿಂದ ಬಡವರಿಗೆ ಅನ್ಯಾಯವೆಂದ ದೇವೇಗೌಡ
ಸಿದ್ದರಾಮಯ್ಯ ಯಾವಾಗಲೂ ಬಡವರ ಪರ ಎಂದು ಹೇಳುತ್ತಾರೆ. ಬಡವರನ್ನ, ಅವರ ಜಮೀನನ್ನ ಸಿದ್ದರಾಮಯ್ಯ ಉಳಿಸಿಕೊಟ್ರೆ ಅವರಿಗೆ ಅಭಾರಿಯಾಗಿರುತ್ತೇನೆ ಎಂದು ಹೆಚ್ಡಿ ದೇವೇಗೌಡ ಬೆಂಗಳೂರಿನಲ್ಲಿ ಹೇಳಿದರು.
ಬೆಂಗಳೂರು, ಜನವರಿ 5: ನೈಸ್ ಯೋಜನೆಯಿಂದ (Nice road project) ತುಂಬಾ ದಿನಗಳಿಂದ ಬಡವರಿಗೆ ಅನ್ಯಾಯ ವಾಗಿದೆ. ಅದನ್ನು ಸರಿಪಡಿಸಿ ಬಡವರ ಜಮೀನು ಉಳಿಸಿಕೊಟ್ಟರೆ ಸಿಎಂ ಸಿದ್ದರಾಮಯ್ಯ ಅವರಿಗೆ ಆಭಾರಿಯಾಗಿರುತ್ತೇನೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ಡಿ ದೇವೇಗೌಡ (HD Deve Gowda) ಹೇಳಿದರು. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೈಸ್ ಅಕ್ರಮದ ವಿರುದ್ದ ನಮ್ಮ ಪಕ್ಷ ಧ್ವನಿ ಎತ್ತಿದೆ. ವಿಧಾನಸಭೆಯಲ್ಲೂ ಸುದೀರ್ಘವಾಗಿ ಚರ್ಚೆಯಾಗಿದೆ ಎಂದರು.
ಜಯಚಂದ್ರ ಅವರ ಅದ್ಯಕ್ಷತೆಯಲ್ಲಿ ಒಂದು ಕಮಿಟಿ ನೇಮಕಮಾಡಿ, ಪ್ರಾಜೆಕ್ಟ್ ಅನ್ನು ಸರ್ಕಾರ ತೆಗೆದುಕೊಳ್ಳಬೇಕು. ಅಕ್ರಮಗಳನ್ನು ಸರಿಪಡಿಸಬೇಕು. ಸರ್ಕಾರ ಈವರೆಗೆ ಯಾವುದೇ ಅಂತಿಮ ನಿರ್ಣಯ ತೆಗೆದುಕೊಂಡಿಲ್ಲ, ವಿಳಂಬವಾಗಿದೆ ಎಂದು ದೇವೇಗೌಡ ಹೇಳಿದರು.
ನೈಸ್ ರಸ್ತೆಗೆ ಒಳಪಡದೆ ಇರುವ ಭೂಮಿ ಎಷ್ಟಿದೆ ಅಂತಾ ಅಂದಾಜು ಮಾಡಿದಾಗ ವ್ಯಾಲ್ಯೂ ಜಾಸ್ತಿಯಾಗುತ್ತದೆ. ಸಿಎಂ ಸಿದ್ದರಾಮಯ್ಯ ಯಾವಾಗಲೂ ಬಡವರ ಪರ ಎಂದು ಹೇಳುತ್ತಾರೆ. ಯೋಜನೆ ಬಗ್ಗೆ ಬಿಎಸ್ ಯಡಿಯೂರಪ್ಪ ಅವರ ಆಡಳಿತ ಅವಧಿಯಲ್ಲಿ ಅಫಿಡವಿಟ್ ಹಾಕಿದ್ದಾರೆ. ಅದರಲ್ಲಿ, ಹೆಚ್ಚುವರಿ ಜಮೀನು ತೆಗೆದುಕೊಂಡಿದ್ದಾರೆ, ಅವರಿಗೆ ಹೆಚ್ಚು ಜಮೀನು ಕೊಡಲು ಸಾದ್ಯವಿಲ್ಲಾ ಎಂದು ಉಲ್ಲೇಖಿಸಲಾಗಿದೆ. ಬಡವರನ್ನ, ಅವರ ಜಮೀನನ್ನ ಸಿದ್ದರಾಮಯ್ಯ ಉಳಿಸಿಕೊಟ್ರೆ ಅವರಿಗೆ ಅಭಾರಿಯಾಗಿರುತ್ತೇನೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಶ್ರೀಕಾಂತ್ ಪೂಜಾರಿ ಮೇಲಿನ 16 ಕೇಸ್ಗಳಲ್ಲಿ 15 ಖುಲಾಸೆಯಾಗಿವೆ, ಸರ್ಕಾರ ದಿಕ್ಕುತಪ್ಪಿಸಿದೆ: ಮಹೇಶ್ ಟೆಂಗಿನಕಾಯಿ
ಅಕ್ರಮಗಳ ಬಗ್ಗೆ ಈ ಹಿಂದೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಜೊತೆ ಕೂಡ ಚರ್ಚದೆ ಮಾಡಲಾಗಿತ್ತು. ಅವರು ಮಸ್ಟ್ ಟೇಕ್ ಆಕ್ಷನ್ ಅಂತಾ ಹೇಳಿದ್ದರು ಎಂದು ದೇವೇಗೌಡ ನೆನಪಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ