ಬೆಂಗಳೂರು: ರಾಜ್ಯ ಸರ್ಕಾರವು ಕೊರೊನಾ ವಿರುದ್ಧದ ಲಾಕ್ಡೌನ್ ವೇಳೆ ಎಲ್ಲದಕ್ಕೂ ಅನುಮತಿ ನೀಡಿದೆ. ಆದರೆ ಹೋಟೆಲ್‌ಗಳಿಗೆ ಏಕೆ ಅನುಮತಿ ನೀಡಿಲ್ಲ? ಹೋಟೆಲ್‌ಗಳಿಗೂ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸುವಂತಾಗಲಿ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ನನಗೆ ಸಮಯ ನೀಡಿದರೆ BSYಗೆ ಸಲಹೆ ನೀಡುತ್ತೇನೆ:
ಬಿ.ಎಸ್.ಯಡಿಯೂರಪ್ಪ ಕಷ್ಟಪಟ್ಟು ಸಿಎಂ ಆಗಿದ್ದಾರೆ. ಯಡಿಯೂರಪ್ಪ ಅದನ್ನು ಉಳಿಸಿಕೊಳ್ಳಬೇಕು. ನನಗೆ ಸಮಯ ನೀಡಿದರೆ ಸಿಎಂಗೆ ಸಲಹೆ ನೀಡುತ್ತೇನೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.