ಮಂಡ್ಯ, (ಏಪ್ರಿಲ್ 04): ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ(HD Kumaraswamy) ಅವರು ಇಂದು (ಏಪ್ರಿಲ್ 04) ಮಂಡ್ಯ ಲೋಕಸಭಾ ಕ್ಷೇತ್ರದಿಂದ (Mandya Loksbha constituency) ನಾಮಪತ್ರ ಸಲ್ಲಿಸಿದರು. ಎಚ್ಡಿಕೆ ಉಮೇದುವಾರಿಕೆಯ ಅಫಿಡೆವಿಟ್ನಲ್ಲಿ ತಮ್ಮ ಆಸ್ತಿಯನ್ನು ಘೋಷಣೆ ಮಾಡಿದ್ದು, ಕುಮಾರಸ್ವಾಮಿ ಬರೋಬ್ಬರಿ 217.21 ಕೋಟಿ ರೂಪಾಯಿ ಒಡೆಯರಾಗಿದ್ದಾರೆ. ಹೌದು…ಕುಟುಂಬದ ಒಟ್ಟು ಚರಾಸ್ತಿ– 102.23 ಕೋಟಿ ರೂ. ಹಾಗೂ ಕುಟುಂಬದ ಒಟ್ಟು ಸ್ಥಿರಾಸ್ತಿ-114.98 ಕೋಟಿ ರೂ. ಒಟ್ಟು 217.21 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ ಕಳೆದ ವರ್ಷಕ್ಕಿಂತ ಎಚ್ಡಿಕೆ ಆಸ್ತಿ ಮೌಲ್ಯ 50.07 ಕೋಟಿ ರೂ. ಹೆಚ್ಚಳವಾಗಿದೆ.
ಕುಮಾರಸ್ವಾಮಿ ದಂಪತಿ ಕೋಟ್ಯಾಂತರ ರೂ ಮೌಲ್ಯದ ಆಸ್ತಿಯೊಂದಿಗೆ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ಹೊಂದಿರುವುದು ವಿಶೇಷ. ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಬಳಿ ಚಿನ್ನ ಬೆಳ್ಳಿ ಮತ್ತು ವಜ್ರಾಭರಣಗಳು ಸಹ ಇವೆ. ಮೊದಲಿಗೆ ಕುಮಾರಸ್ವಾಮಿಯವರದ್ದು ನೋಡುವುದಾದರೆ, 47 ಲಕ್ಷ ರೂ. ಮೌಲ್ಯದ 750 ಗ್ರಾಂ ಚಿನ್ನಾಭರಣ, 9.62 ಲಕ್ಷ ರೂಪಾಯಿ ಮೌಲ್ಯದ 12.5ಕೆಜಿ ಬೆಳ್ಳಿ ಮತ್ತು 2.60 ಲಕ್ಷ ರೂ. ಮೌಲ್ಯದ 4 ಕ್ಯಾರೆಟ್ ವಜ್ರ ಹೊಂದಿರುವುದಾಗಿ ತಮ್ಮ ಅಫಿಡೆವಿಟ್ನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಸಹ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಜ್ರ ಹೊಂದಿದ್ದಾರೆ. 2.41ಕೋಟಿ ರೂ. ಮೌಲ್ಯದ 3.8ಕೆಜಿ ಚಿನ್ನಾಭರಣ, 13 ಲಕ್ಷ ರೂ. ಮೌಲ್ಯದ 17 ಕೆಜಿ ಬೆಳ್ಳಿ ಮತ್ತು 33 ಲಕ್ಷ ರೂ. ಮೌಲ್ಯದ 50 ಕ್ಯಾರೆಟ್ ಡೈಮಂಡ್ ಹೊಂದಿದ್ದಾರೆ.
ಕುಮಾರಸ್ವಾಮಿ ಮತ್ತು ಪತ್ನಿ ಅನಿತಾ ಕುಮಾರಸ್ವಾಮಿ ಬಳಿಕ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ, ಚಿನ್ನಾಭರಣಗಳು ಇವೆ. ಅದರ ಜೊತೆ ಈ ದಂಪತಿ ಕೋಟ್ಯಾಂತರ ರೂಪಾಯಿ ಸಾಲವನ್ನು ಮಾಡಿಕೊಂಡಿದೆ.
ಅನಿತಾ ಕುಮಾರಸ್ವಾಮಿ 63.05 ಕೋಟಿ ರೂಪಾಯಿ ಸಾಲ ಮಾಡಿಕೊಂಡಿದ್ದರೆ, ಕುಮಾರಸ್ವಾಮಿ ಅವರು ಬರೋಬ್ಬರಿ 19.12 ಕೋಟಿ ರೂಪಾಯಿ ಸಾಲ ಇದೆ ಎಂದು ಮಾಹಿತಿ ನೀಡಿದ್ದಾರೆ.
ಕುಮಾರಸ್ವಾಮಿ ಹೆಸರಿನಲ್ಲಿ ಚರಾಸ್ತಿ ಮೌಲ್ಯ 10,71,26,254 ರೂ. ಇದ್ದರೆ, ಪತ್ನಿ ಅನಿತಾ ಹೆಸರಿನಲ್ಲಿ ಚರಾಸ್ತಿ ಮೌಲ್ಯ 90,32,28,973 ರೂ. ಇದೆ. ಇನ್ನು ಕುಮಾರಸ್ವಾಮಿಯ ಸ್ಥಿರಾಸ್ತಿ ಮೌಲ್ಯ 43,94,42100 ರೂ. ಇದ್ದರೆ, ಪತ್ನಿ ಅನಿತಾ ಹೆಸರಿನಲ್ಲಿ 64,07,73,530 ರೂ. ಸ್ಥಿರಾಸ್ತಿ ಇದೆ. ಇನ್ನು ಹಿಂದು ಅವಿಭಕ್ತ ಕುಟುಂಬದ ಚರಾಸ್ತಿ ಆಸ್ತಿ 1.20ಕೋಟಿ ರೂ, ಹಿಂದೂ ಅವಿಭಕ್ತ ಕುಟುಂಬದ ಸ್ಥಿರಾಸ್ತಿ 6.97 ರೂ. ಇರುವುದಾಗಿ ತಿಳಿಸಿದ್ದಾರೆ.
ಇನ್ನು ಲೋಕಾಯುಕ್ತ, ಕ್ರಿಮಿನಲ್, ಸಿವಿಲ್ ಪ್ರಕರಣ ಎದುರಿಸುತ್ತಿರುವ ಕುಮಾರಸ್ವಾಮಿ, 3 ಪ್ರಕರಣಗಳು ಲೋಕಾಯುಕ್ತದಲ್ಲಿ ವಿಚಾರಣೆ ಹಂತದಲ್ಲಿವೆ ಎಂದು ತಮ್ಮ ಅಫಿಡೆವಿಟ್ನಲ್ಲಿ ಉಲ್ಲೇಖಿಸಿದ್ದಾರೆ.
Published On - 6:19 pm, Thu, 4 April 24