ಈಶ್ವರಪ್ಪ ಎತ್ತಿರುವ ಪ್ರಶ್ನೆಗಳನ್ನು ವರಿಷ್ಠರು ಗಂಭೀರವಾಗಿ ಪರಿಗಣಿಸಿ ಬಗೆಹರಿಸುವ ಕೆಲಸಕ್ಕೆ ಮುಂದಾಗಬೇಕು: ಬಸನಗೌಡ ಯತ್ನಾಳ್
ಸಮಸ್ಯೆಗಳನ್ನು ಪಕ್ಷಕ್ಕೆ ಮುಜುಗುರವಾಗದ ಹಾಗೆ ಬಗೆಹರಿಸಿದರೆ ರಾಜ್ಯದಲ್ಲಿ ಎಲ್ಲ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವುದು ಸುಲಭವಾಗುತ್ತದೆ ಎಂದು ಯತ್ನಾಳ್ ಹೇಳಿದರು. ಟಿಕೆಟ್ ಹಂಚಿಕೆಯಾದ ಬಳಿಕ ಅಸಮಾಧಾನ, ಬಂಡಾಯ ಪ್ರವೃತ್ತಿ ತೋರುವುದು ಇದ್ದೇ ಇರುತ್ತದೆ, ನಿನ್ನೆ ಅಮಿತ್ ಶಾ ಅವರು ಮುನಿಸಿಕೊಂಡವರ ಜೊತೆ ಮಾತಾಡಿದ್ದಾರೆ, ಕೆಲವರು ಫೋನ್ ಕರೆಯನ್ನು ಸ್ವೀಕರಿಸಿಲ್ಲ ಅನ್ನೋದು ಗೊತ್ತಾಗಿದೆ ಎಂದು ಯತ್ನಾಳ್ ಹೇಳಿದರು.
ಕಾರವಾರ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮತ್ತು ಮಾಜಿ ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಒಂದೇ ರೀತಿಯಲ್ಲಿ ಯೋಚನೆ ಮಾಡುತ್ತಾರೆ, ಸಮಾನ ಮನಸ್ಕರು ಮತ್ತು ಸಮಾನವಾಗೇ ಬಿಎಸ್ ಯಡಿಯೂರಪ್ಪ (BS Yediyurappa) ಕುಟುಂಬದ ವಿರುದ್ಧ ಕಿಡಿಕಾರುತ್ತಿರುವವರು. ಇಂದು ಕಾರವಾರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಯತ್ನಾಳ್ ಈಶ್ವರಪ್ಪನವರ ದೆಹಲಿ ಎಪಿಸೋಡ್ ಬಗ್ಗೆ ಮಾತಾಡಿದರು. ಅಮಿತ್ ಶಾ ಯಾಕೆ ಭೇಟಿಯಾಗಿಲ್ಲ ಅನ್ನೋದು ತನಗೆ ಗೊತ್ತಿಲ್ಲ, ಪ್ರಾಯಶಃ ಚುನಾವಣೆ ಕೆಲಸದಲ್ಲಿ ವ್ಯಸ್ತರಾಗಿರಬಹುದು ಎಂದ ಹೇಳಿದ ಅವರು, ಈಶ್ವರಪ್ಪ ಆಡುತ್ತಿರುವ ಮಾತುಗಳನ್ನು ಮತ್ತು ಅವರು ಎತ್ತಿರುವ ಪ್ರಶ್ನೆಗಳನ್ನು ಪಕ್ಷದ ವರಿಷ್ಠರು ಗಂಭೀರವಾಗಿ ಪರಿಗಣಿಸಬೇಕು ಮತ್ತು ಅವುಗಳ ಇತ್ಯರ್ಥಕ್ಕೆ ಮುಂದಾಗಬೇಕು ಎಂದರು. ಸಮಸ್ಯೆಗಳನ್ನು ಪಕ್ಷಕ್ಕೆ ಮುಜುಗುರವಾಗದ ಹಾಗೆ ಬಗೆಹರಿಸಿದರೆ ರಾಜ್ಯದಲ್ಲಿ ಎಲ್ಲ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವುದು ಸುಲಭವಾಗುತ್ತದೆ ಎಂದು ಯತ್ನಾಳ್ ಹೇಳಿದರು. ಟಿಕೆಟ್ ಹಂಚಿಕೆಯಾದ ಬಳಿಕ ಅಸಮಾಧಾನ, ಬಂಡಾಯ ಪ್ರವೃತ್ತಿ ತೋರುವುದು ಇದ್ದೇ ಇರುತ್ತದೆ, ನಿನ್ನೆ ಅಮಿತ್ ಶಾ ಅವರು ಮುನಿಸಿಕೊಂಡವರ ಜೊತೆ ಮಾತಾಡಿದ್ದಾರೆ, ಕೆಲವರು ಫೋನ್ ಕರೆಯನ್ನು ಸ್ವೀಕರಿಸಿಲ್ಲ ಅನ್ನೋದು ಗೊತ್ತಾಗಿದೆ ಎಂದು ಯತ್ನಾಳ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪ್ರಧಾನಿ ಮೋದಿ ಅಧಿಕಾರದ ಮೊದಲ 10 ವರ್ಷ ಕೇವಲ ಟ್ರೇಲರ್, ಮುಂದಿನ 5 ವರ್ಷಗಳಲ್ಲಿ ಪೂರ್ತಿ ಪಿಕ್ಟರ್ ಅನಾವರಣ: ಬಸನಗೌಡ ಯತ್ನಾಳ್