ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೂ ತಟ್ಟಿದ ಬೆಡ್​ ಬಿಸಿ: ಬೆಡ್​ ಖಚಿತ ಪಡಿಸಿದ ನಂತರವಷ್ಟೇ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್

ಕೊರೊನಾ ಪೀಡಿತ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರು ಖಾಸಗಿ ಆಸ್ಪತ್ರೆಯಲ್ಲಿ ಬೆಡ್​ ಇಲ್ಲದೆ ಬೆಳಿಗ್ಗೆಯಿಂದ ಜೆ.ಪಿ.ನಗರದ ಮನೆಯಲ್ಲೇ ಕಾಯುತ್ತಿದ್ದಾರೆ. ತಕ್ಷಣಕ್ಕೆ ಬೆಡ್​ ಇಲ್ಲ, ಅರೆಂಜ್​ ಮಾಡುವುದಾಗಿ ಮಣಿಪಾಲ್​ ಆಸ್ಪತ್ರೆ ಮೂಲಗಳು ತಿಳಿಸಿವೆ

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೂ ತಟ್ಟಿದ ಬೆಡ್​ ಬಿಸಿ: ಬೆಡ್​ ಖಚಿತ ಪಡಿಸಿದ ನಂತರವಷ್ಟೇ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್
ಮಾಜಿ ಸಿಎಂ ಕುಮಾರಸ್ವಾಮಿ


ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಸ್ವತಃ ಅವರೇ ಟ್ವೀಟ್​ ಮಾಡಿ ತಮಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಇಂದು ಬೆಳಗ್ಗೆಯೇ ತಿಳಿಸಿದ್ದರು. ಆದರೆ ಕುಮಾರಸ್ವಾಮಿ ಅವರು ಸದ್ಯ ಬೆಂಗಳೂರಿನ ಜೆ.ಪಿ.ನಗರದ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ. ಯಾಕೆಂದರೆ ತಕ್ಷಣಕ್ಕೆ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಬೆಡ್​​ ಇಲ್ಲವೆಂಬ ಮಾಹಿತಿ ಸಿಕ್ಕಿದೆ.

ಮಾಜಿ ಮುಖ್ಯಮಂತ್ರಿ ಹೆಚ್​​ಡಿಕೆಗೂ ತಟ್ಟಿದ ಬೆಡ್​ ಬಿಸಿ:  ಹೌದು ಕೊರೊನಾ ಪೀಡಿತ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ (61) ಅವರು ಖಾಸಗಿ ಆಸ್ಪತ್ರೆಯಲ್ಲಿ ಬೆಡ್​ ಇಲ್ಲದೆ ಬೆಳಿಗ್ಗೆಯಿಂದ ಜೆ.ಪಿ.ನಗರದ ಮನೆಯಲ್ಲೇ ಕಾಯುತ್ತಿದ್ದಾರೆ. ತಕ್ಷಣಕ್ಕೆ ಬೆಡ್​ ಇಲ್ಲ, ಅರೆಂಜ್​ ಮಾಡುವುದಾಗಿ ಮಣಿಪಾಲ್​ ಆಸ್ಪತ್ರೆ ಮೂಲಗಳು ತಿಳಿಸಿವೆ.

ಕುಮಾರಸ್ವಾಮಿಗೆ ಕೊರೊನಾ ಬಂದಿರುವುದು ದೃಢಪಡುತ್ತಿದ್ದಂತೆ ಬೆಳಗ್ಗೆಯೇ ಪೋನ್​ ಮಾಡಿದಾಗ ಬೆಡ್​ ಇಲ್ಲವೆಂದು ಮಣಿಪಾಲ್​ ಆಸ್ಪತ್ರೆಯವರು ಹೇಳಿದ್ದಾರೆ. ಇದುವರೆಗೂ ಬೆಡ್​​ ಸಿಗದೆ ಹೆಚ್​​ಡಿಕೆ ಮನೆಯಲ್ಲಿಯೇ ಇದ್ದಾರೆ. ಬೆಡ್​ ಖಚಿತ ಪಡಿಸಿದ ನಂತರವಷ್ಟೇ ಆಸ್ಪತ್ರೆಗೆ ದಾಖಲಾಗಲಿದ್ದಾರೆ ಎಂದು ಕುಮಾರಸ್ವಾಮಿ ಅವರ ಕುಟುಂಬದ ಮೂಲಗಳು ಹೇಳಿವೆ.

ಕುಮಾರಸ್ವಾಮಿ ಶೀಘ್ರ ಚೇತರಿಕೆಗೆ ಹಾರೈಸಿದ ಸಿಎಂ ಬಿಎಸ್​ವೈ:
ಮಾಜಿ ಸಿಎಂ ಕುಮಾರಸ್ವಾಮಿಗೆ ಕೊವಿಡ್​ ಪಾಸಿಟಿವ್ ಹಿನ್ನೆಲೆ ಅವರ ಶೀಘ್ರ ಚೇತರಿಕೆಗೆ ಹಾಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾರೈಸಿದ್ದಾರೆ. ಕೊರೊನಾ ಸೋಂಕಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಎಂ ಯಡಿಯೂರಪ್ಪ ಅವರು ಟ್ವೀಟ್​ ಮೂಲಕ ಹೆಚ್​ಡಿಕೆಗೆ ಹಾರೈಕೆ ಮಾಡಿದ್ದಾರೆ.

ಪುತ್ರ ನಿಖಿಲ್ ಕುಮಾರ್ ಮನವಿ
ಮಾಜಿ ಸಿಎಂ, ನನ್ನ ತಂದೆ ಕುಮಾರಸ್ವಾಮಿಗೆ ಕೊರೊನಾ ಇದೆ. ಈಗಾಗಲೇ ನಮ್ಮ ತಂದೆ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಮ್ಮ ಪ್ರೀತಿ, ದೇವರ ದಯೆಯಿಂದ ಬೇಗ ಗುಣಮುಖರಾಗ್ತಾರೆ. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಆತಂಕ ಪಡಬೇಡಿ ಎಂದು ಟ್ವೀಟ್ ಮೂಲಕ ಹೆಚ್‌ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.

(former chief minister hd kumaraswamy who contracted coronavirus waiting for bed in manipal hospital)

ಇದನ್ನೂ ಓದಿ: ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿಗೆ ಕೊರೊನಾ ಸೋಂಕು ದೃಢ

Published On - 12:06 pm, Sat, 17 April 21

Click on your DTH Provider to Add TV9 Kannada