
ಮೈಸೂರು: ಹೆಚ್.ವಿಶ್ವನಾಥ್ ನಮ್ಮ ಪಕ್ಷದಿಂದ ಗೆದ್ದು ದ್ರೋಹ ಮಾಡಿದ್ರು ಎಂದು ಹೆಚ್.ಡಿ.ರೇವಣ್ಣ ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಹೇಳಿದ್ದಾರೆ.
ಉಪಚುನಾವಣೆ ಕುರಿತು ಮಾತನಾಡಿದ ರೇವಣ್ಣ ಡಿಸೆಂಬರ್ 5ರಂದು ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆ ಯಾಕೆ ಬಂದಿದೆ ಎಂದು ಎಲ್ಲರಿಗೂ ಗೊತ್ತಿದೆ. ಹುಣಸೂರು ಡಿ.ದೇವರಾಜ ಅರಸು ಇದ್ದಂತಹ ತಾಲೂಕು, ಹೆಚ್.ವಿಶ್ವನಾಥ್ ನಮ್ಮ ಪಕ್ಷದಿಂದ ಗೆದ್ದು ಅಧಿಕಾರ ಅನುಭವಿಸಿ ನಮಗೆ ದ್ರೋಹ ಮಾಡಿದ್ದಾರೆ.
ಅನರ್ಹತೆ ಕೇಸ್ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಆಯ್ತು, ಈಗ ಉಪಚುನಾವಣೆಯಲ್ಲಿ ಜನರು ತೀರ್ಪು ನೀಡಬೇಕಾಗಿದೆ. ಇಲ್ಲಿ ಯಾರನ್ನೇ ನಿಲ್ಲಿಸಿದ್ರೂ 50 ಸಾವಿರ ಮತಗಳು ಬರಲಿದೆ. ಹುಣಸೂರು ಕ್ಷೇತ್ರದಲ್ಲಿ JDS ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ ಎಂದಿದ್ದಾರೆ.
Published On - 5:26 pm, Sat, 16 November 19