ಆರೋಗ್ಯ ಇಲಾಖೆ ಎಡವಟ್ಟು: ಪೇದೆ, ಗರ್ಭಿಣಿಗೆ ಸೋಂಕು ಎಂಬ ರಿಪೋರ್ಟ್ ಸುಳ್ಳು!

|

Updated on: May 07, 2020 | 10:29 AM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ಮಹಾ ಕಂಟಕ ಎದುರಾಗಿದೆ. ಲಾಕ್​ಡೌನ್ ಮುಗಿದೇ ಹೋಯ್ತು ಅನ್ಕೊಂಡಿರೋರಿಗೆ, ಮೈಮರೆತು ಓಡಾಡೋರಿಗೆ ಈಗ ನಾವ್ ಹೇಳ್ತಿರೋ ಸುದ್ದಿ ಎಚ್ಚರಿಕೆಯ ಕರೆ ಘಂಟೆಯೇ ಸರಿ. ಬೆಂಗಳೂರಿನ ಮೂರು ಕೇಸ್​ಗಳಿಂದ, ಆರೋಗ್ಯ ಇಲಾಖೆ ಮಾಡಿರೋ ಮಹಾ ಎಡವಟ್ಟಿನಿಂದ ಇಡೀ ನಗರಕ್ಕೆ ಆತಂಕದ ಕಾರ್ಮೋಡ ಆವರಿಸಿದೆ. ಮೂರು ಕೇಸ್​ಗೆ ಬೆಚ್ಚಿ ಬಿದ್ದ ಬೆಂಗಳೂರು! ಹೌದು, ಮೂರೇ ಮೂರು ಕೇಸ್​ಗೆ ಬೆಂಗಳೂರಿಗೆ ಬೆಂಗಳೂರೇ ಪತರಗುಟ್ಟಿ ಹೋಗಿದೆ. ಈ ಕೇಸ್​ಗಳು ಸೃಷ್ಟಿಸಿದ್ದ ಅವಾಂತರಗಳಿಗೆ ಸಿಟಿ ಮಂದಿ ನಡುಗಿ ಹೋಗಿದ್ದಾರೆ. […]

ಆರೋಗ್ಯ ಇಲಾಖೆ ಎಡವಟ್ಟು: ಪೇದೆ, ಗರ್ಭಿಣಿಗೆ ಸೋಂಕು ಎಂಬ ರಿಪೋರ್ಟ್ ಸುಳ್ಳು!
Follow us on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ಮಹಾ ಕಂಟಕ ಎದುರಾಗಿದೆ. ಲಾಕ್​ಡೌನ್ ಮುಗಿದೇ ಹೋಯ್ತು ಅನ್ಕೊಂಡಿರೋರಿಗೆ, ಮೈಮರೆತು ಓಡಾಡೋರಿಗೆ ಈಗ ನಾವ್ ಹೇಳ್ತಿರೋ ಸುದ್ದಿ ಎಚ್ಚರಿಕೆಯ ಕರೆ ಘಂಟೆಯೇ ಸರಿ. ಬೆಂಗಳೂರಿನ ಮೂರು ಕೇಸ್​ಗಳಿಂದ, ಆರೋಗ್ಯ ಇಲಾಖೆ ಮಾಡಿರೋ ಮಹಾ ಎಡವಟ್ಟಿನಿಂದ ಇಡೀ ನಗರಕ್ಕೆ ಆತಂಕದ ಕಾರ್ಮೋಡ ಆವರಿಸಿದೆ.

ಮೂರು ಕೇಸ್​ಗೆ ಬೆಚ್ಚಿ ಬಿದ್ದ ಬೆಂಗಳೂರು!
ಹೌದು, ಮೂರೇ ಮೂರು ಕೇಸ್​ಗೆ ಬೆಂಗಳೂರಿಗೆ ಬೆಂಗಳೂರೇ ಪತರಗುಟ್ಟಿ ಹೋಗಿದೆ. ಈ ಕೇಸ್​ಗಳು ಸೃಷ್ಟಿಸಿದ್ದ ಅವಾಂತರಗಳಿಗೆ ಸಿಟಿ ಮಂದಿ ನಡುಗಿ ಹೋಗಿದ್ದಾರೆ. ಆದ್ರೆ ಸೋಂಕಿತರು ಎನ್ನಲಾಗಿದ್ದ ಪೊಲೀಸ್ ಪೇದೆ ಹಾಗೂ ಗರ್ಭಿಣಿ ಕೇಸ್​​ಗೆ ಭಯಾನಕ ಟ್ವಿಸ್ಟ್ ಸಿಕ್ಕಿದೆ.

ಆರೋಗ್ಯ ಇಲಾಖೆಯಿಂದ ಮಹಾ ಎಡವಟ್ಟು!
ಬೆಂಗಳೂರಿನ ಬೇಗೂರು ಪೊಲೀಸ್ ಠಾಣೆ ಪೇದೆಗೆ ಸೋಂಕು ತಗುಲಿತ್ತು ಅನ್ನೋ ಸಂಗತಿ ಭಾರಿ ಆತಂಕ ಸೃಷ್ಟಿಸಿತ್ತು. ಅದ್ರಲ್ಲೂ ನೆಮ್ಮದಿಯಾಗಿದ್ದ ಚಾಮರಾಜನಗರ ಜಿಲ್ಲೆಯ ಜನರ ನಿದ್ದೆಗೆಡಿಸಿತ್ತು. ಆದ್ರೆ ನಿನ್ನೆ ಬೆಳಗ್ಗೆ ಪೇದೆಗೆ ಕೊರೊನಾ ಬಂದಿಲ್ಲ ಅನ್ನೋ ಸ್ಫೋಟಕ ಮಾಹಿತಿ ಹೊರಬಿತ್ತು.

ಆರೋಗ್ಯ ಇಲಾಖೆ ಬೇಗೂರು ಪೊಲೀಸ್ ಠಾಣೆ ಕಳುಹಿಸೋ ವರದಿಯಲ್ಲಿ ವೈರಸ್​ನ ಅಸಲಿಯತ್ತು, ಆರೋಗ್ಯ ಇಲಾಖೆ ಎಡವಟ್ಟು ಎರಡೂ ಬಯಲಾಗಿದೆ. ಯಾಕಂದ್ರೆ, ಸೋಂಕಿತನೆಂದು ಹೇಳಲಾಗಿದ್ದು ಪೇದೆಗೆ ಸೋಂಕು ತಗುಲಲೇ ಇಲ್ಲ ಅನ್ನೋದು ಖಚಿತವಾಗಿದೆ. ಇದ್ರಿಂದ ಪೇದೆ ಕುಟುಂಬಸ್ಥರು, ಪೊಲೀಸ್ ಸಿಬ್ಬಂದಿ ಸೇರಿದಂತೆ ಪೇದೆ ಸಂಪರ್ಕದಲ್ಲಿದ್ದ 56 ಮಂದಿ ನಿಟ್ಟುಸಿರು ಬಿಟ್ಟಿದ್ದಾರೆ.

ಸೋಂಕಿತ ಹಾಗೂ ಪೇದೆಗೆ ಐಸೋಲೇಷನ್!
ಇನ್ನು ಸೋಂಕಿತ 650ರ ಪಾಸಿಟಿವ್ ಕೇಸ್ ಬಗ್ಗೆ ಗೊಂದಲ ಇರೋದ್ರಿಂದ ಪಾಸಿಟಿವ್ ಬಂದಿದ್ದ ವ್ಯಕ್ತಿ ಹಾಗೂ ಪೇದೆಗೆ ಐಸೋಲೇಷನ್​ನಲ್ಲಿಡಲಾಗಿದೆ. ಇಬ್ಬರ ಗಂಟಲು ದ್ರವದ ಮಾದರಿ ಲ್ಯಾಬ್‌ಗೆ ರವಾನಿಸಿದ್ದೇವೆ. ವರದಿ ಬಂದ ಬಳಿಕ ಮುಂದಿನ ಚಿಕಿತ್ಸೆ ಮುಂದುವರಿಯುತ್ತೆ. ಆದ್ರೆ ಎಡವಟ್ಟಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಅಂತಾ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಬೆಂಗಳೂರು ಪೊಲೀಸರಿಗೆ ಬಿಗ್ ರಿಲೀಫ್!
ಇತ್ತ ಪೇದೆಗೆ ಸೋಂಕು ಇಲ್ಲದಿರೋದು ಗೊತ್ತಾಗಿರೋ ಬೆನ್ನಲ್ಲೇ, ಪೇದೆ ಕುಟುಂಬಸ್ಥರು, ಬೆಂಗಳೂರಿನ 21 ಪೊಲೀಸ್ ಸಿಬ್ಬಂದಿ ಸೇರಿದಂತೆ 34 ಜನರ ವರದಿ ನೆಗೆಟಿವ್ ಬಂದಿದೆ. ವೈರಸ್ ವಕ್ಕರಿಸಿಲ್ಲ ಅಂತಾ ದೃಢವಾಗಿದ್ದಕ್ಕೆ ಆಸ್ಪತ್ರೆಯಿಂದ ಹೋಟೆಲ್‌ಗೆ ಪೊಲೀಸ್ ಸಿಬ್ಬಂದಿಯನ್ನ ಶಿಫ್ಟ್ ಮಾಡಲಾಯ್ತು. ಮುನ್ನೆಚ್ಚರಿಕೆಯಿಂದ 14 ದಿನ ಹೋಟೆಲ್ ಕ್ವಾರಂಟೈನ್​​ನಲ್ಲಿರುವಂತೆ ಪೊಲೀಸರಿಗೆ ವೈದ್ಯರು ಸೂಚಿಸಿದ್ದಾರೆ.

ಗರ್ಭಿಣಿಗೆ ಸೋಂಕು ಎಂಬ ರಿಪೋರ್ಟ್ ಸುಳ್ಳು!
ಇತ್ತ ಬೆಂಗಳೂರಿನ ಬಿಟಿಎಂ ಲೇಔಟ್​ನ ಗರ್ಭಿಣಿಗೆ ಕೊರೊನಾ ಪಾಸಿಟಿವ್ ಅಂತಾ ರಿಪೋರ್ಟ್ ಬಂದಿತ್ತು. ಆದ್ರೆ ನಿನ್ನೆ ಗರ್ಭಿಣಿಗೂ ಸೋಂಕೇ ತಗುಲಿಲ್ಲ ಅನ್ನೋ ಸ್ಫೋಟಕ ಸಂಗತಿ ಬಯಲಾಯ್ತು. ಈ ಕೇಸ್​​ನಲ್ಲೂ ಆರೋಗ್ಯ ಇಲಾಖೆ ಎಡವಟ್ಟು ಮಾಡಿದೆ. ಖಾಸಗಿ ಲ್ಯಾಬ್ ಕೊಟ್ಟ ಸುಳ್ಳು ರಿಪೋರ್ಟ್​ನಿಂದ ಗರ್ಭಿಣಿ ವಿಕ್ಟೋರಿಯಾ ಆಸ್ಪತ್ರೆಯ ಐಸೋಲೇಷನ್​ಗೆ ಶಿಫ್ಟ್ ಆಗಿದ್ರು. ಮತ್ತೊಮ್ಮೆ ಸರ್ಕಾರಿ ಲ್ಯಾಬ್​ನಲ್ಲಿ ಸ್ಯಾಂಪಲ್ ಪರೀಕ್ಷಿಸಿದಾಗ ನೆಗೆಟಿವ್ ರಿಪೋರ್ಟ್​ ಬಂದಿದೆ. ಇದೀಗ ಮತ್ತೆ 14 ದಿನಗಳ ಕಾಲ ಗರ್ಭಿಣಿಗೆ ಕ್ವಾರಂಟೈನ್ ವಿಧಿಸಲಾಗಿದೆ.

ಖಾಸಗಿ ಲ್ಯಾಬ್​ಗಳ ಕಾರ್ಯದಕ್ಷತೆ ಮೇಲೆಯೇ ಅನುಮಾನ!
ಈ ಮಧ್ಯೆ ಖಾಸಗಿ ಸುಳ್ಳು ರಿಪೋರ್ಟ್ ಕೊಟ್ಟಿರೋದ್ರಿಂದ ಅವುಗಳ ಕಾರ್ಯವೈಖರಿ ಬಗ್ಗೆಯೇ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಖಾಸಗಿ ಲ್ಯಾಬ್​ನ ಮಾನ್ಯತೆ ರದ್ದು ಮಾಡೋ ಬಗ್ಗೆಯೂ ಚಿಂತನೆ ನಡೀತಿದೆ ಎನ್ನಲಾಗ್ತಿದೆ.

ಇನ್ನು ಹೊಂಗಸಂದ್ರ ಮೊದಲ ಕೊರೊನಾ ಕೇಸ್​ನಲ್ಲೂ ನಿನ್ನೆ ಬೆಚ್ಚಿ ಬೀಳಿಸೋ ಸುದ್ದಿ ಹೊರಬಿತ್ತು. ಕೊರೊನಾ ಬರ್ತಿದ್ದಂತೆ ಎಸ್ಕೇಪ್ ಆಗಿದ್ದ ಗುಜರಿ ಅಂಗಡಿ ಮಾಲೀಕ 13 ದಿನಗಳ ಬಳಿಕ ಕೊನೆಗೂ ಪತ್ತೆಯಾಗಿದ್ದಾನೆ. ನಾಪತ್ತೆಯಾದ 10 ದಿನಗಳ ಬಳಿಕ ಮೇ 3ರಂದು ಲಾಲ್​​ಬಾಗ್ ರಸ್ತೆಯಲ್ಲಿ ಸೋಂಕಿತ ತಲೆ ತಿರುಗಿಬಿದ್ದಿದ್ದ. ಕೂಡಲೇ ಆತನನ್ನ ಮದೀನಾ ನಗರದ ಕ್ಲಿನಿಕ್​ಗೆ ದಾಖಲಿಸಲಾಗಿತ್ತು. ಆದ್ರೆ ಅತಿಯಾದ ಜ್ವರ ಹಿನ್ನೆಲೆಯಲ್ಲಿ ಆತನನ್ನ ರಾಜೀವ್ ಗಾಂಧಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಸ್ಯಾಂಪಲ್ ಪರೀಕ್ಷೆಯಲ್ಲಿ ಕೊರೊನಾ ದೃಢವಾಗಿದೆ.

ಒಟ್ನಲ್ಲಿ, ಇಬ್ಬರು ಸೋಂಕಿತರಿಂದಾಗಿ ಇಡೀ ಬೆಂಗಳೂರಿಗೆ ಕಂಟಕ ಎದುರಾಗಿದೆ. ಚೂರು ಯಾಮಾರಿದ್ರೂ ನೂರಾರು ಮಂದಿ ಸಾವಿನ ಸುಳಿಗೆ ಸಿಲುಕೋದು ಪಕ್ಕಾ ಆಗಿದೆ. ಇನ್ನಾದ್ರೂ ಜನರು ಎಚ್ಚರವಹಿಸಲೇಬೇಕಿದೆ.

Published On - 7:06 am, Thu, 7 May 20