AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Modi played nagari: ಬಂಜಾರ ನಗಾರಿ ಬಾರಿಸಿ ಜನರನ್ನು ಹುರಿದುಂಬಿಸಿದ ನಮೋ, ಮೋದಿ ಬಾರಿಸಿದ ನಗಾರಿ ಬಗ್ಗೆ ಇಲ್ಲಿದೆ ಕುತೂಹಲಕಾರಿ ಸಂಗತಿ

ಕೊಡೆಕಲ್‌ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಬಳಿಕ ಕಲಬುರಗಿ ಮಳಖೇಡ ಗ್ರಾಮದಲ್ಲಿ ಮೋದಿ ಆಯೋಜಿಸಿದ್ದ ಲಂಬಾಣಿ ಸಮುದಾಯಕ್ಕೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮಕ್ಕೆ ಆಗಮಿಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ನಗರಿ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

Modi played nagari: ಬಂಜಾರ ನಗಾರಿ ಬಾರಿಸಿ ಜನರನ್ನು ಹುರಿದುಂಬಿಸಿದ ನಮೋ, ಮೋದಿ ಬಾರಿಸಿದ ನಗಾರಿ ಬಗ್ಗೆ ಇಲ್ಲಿದೆ ಕುತೂಹಲಕಾರಿ ಸಂಗತಿ
ಮೋದಿ
TV9 Web
| Updated By: Digi Tech Desk|

Updated on:Jan 19, 2023 | 4:45 PM

Share

ಪ್ರಧಾನಿ ನರೇಂದ್ರ (Prime Minister Narendra) ಅವರು ಇಂದು(ಜನವರಿ 19) ಕಲ್ಯಾಣ ಕರ್ನಾಟಕಕ್ಕೆ ಲಗ್ಗೆ ಇಟ್ಟಿದ್ದು, ಮೊದಲ ಯಾದಗಿರಿ ಜಿಲ್ಲೆಯ ಕೊಡೆಕಲ್‌ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಬಳಿಕ ಕಲಬುರಗಿ ಮಳಖೇಡ ಗ್ರಾಮದಲ್ಲಿ ಮೋದಿ ಆಯೋಜಿಸಿದ್ದ ಲಂಬಾಣಿ ಸಮುದಾಯಕ್ಕೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮಕ್ಕೆ ಆಗಮಿಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ನಗರಿ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಫುಲ್ ಜೋಶ್ ನಲ್ಲಿ ಮೋದಿ ನಗರಿ ಬಾರಿಸುತ್ತಿದ್ದಾರೆ, ವೇದಿಕೆ ಮೇಲಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಇತರ ನಾಯಕರು ಚಪ್ಪಾಳೆ ಹೊಡೆದು ಖುಷಿ ಪಟ್ಟರು. ಇನ್ನು ನಮೋ ನಗರಿ ಬಾರಿಸುವ ವೇಳೆ ವೇದಿಕೆ ಮುಂದೆ ನೆರೆದಿದ್ದ ಜನರ ಶಿಳ್ಳೆ, ಚಪ್ಪಾಳೆ ಹರ್ಷೋದ್ಗಾರ ಮುಗಿಲು ಮುಟ್ಟಿತು. ಜನರಿಂದ ಚಪ್ಪಾಳೆ ಶಿಳ್ಳೆ ಜೋರಾಗುತ್ತಿದ್ದಂತೆಯೇ ಪ್ರಧಾನಿ ಮೋದಿ ಸಹ ಜೋರಾಗಿ ನಗಾರಿ ಬಾರಿ ಖುಷಿಪಟ್ಟರು.

ನಮೋ ನಗಾರಿ ಬಾರಿಸುವ ಶೈಲಿಗೆ ಜನರು ಜೋಶ್​ ಹೆಚ್ಚಾಗಿ ಸ್ಥಳದಲ್ಲೇ ಕೇಕೆ ಹಾಕುತ್ತ ಕುಣಿದು ಕುಪ್ಪಣಿಸಿದರು. ಇದನ್ನು ಕಂಡ ಮೋದಿ ನಗುತ್ತಲ್ಲೇ ಇನ್ನಷ್ಟು ಜೋರಾಗಿ ನಗಾರಿ ಬಾರಿಸಿ ಹುರಿದುಂಬಿಸಿ ರಂಜಿಸಿದರು. ಅಲ್ಲದೇ ಜನರನ್ನು ಕೆಲ ಹೊತ್ತು ಜೋಶ್​ನಲ್ಲಿ ತೇಲಾಡುವಂತೆ ಮಾಡಿದರು.

ಲಂಬಾಣಿ ಸಮುದಾಯಕ್ಕಿದೆ ಮಹತ್ವದ ಇತಿಹಾಸ

ಈ ಲಂಬಾಣಿ ಸಮುದಾಯದವರನ್ನು ಲಂಬಾಡಿಗಳು ಅಥವಾ ಬಂಜಾರರು ಎಂದೂ ಕರೆಯುತ್ತಾರೆ. ಅವರು ಒಮ್ಮೆ ಅಲೆಮಾರಿ ಬುಡಕಟ್ಟು ಜನಾಂಗದವರಾಗಿದ್ದರು, ಅವರು ಅಫ್ಘಾನಿಸ್ತಾನದಿಂದ ಭಾರತ ರಾಜಸ್ಥಾನಕ್ಕೆ (ಮೇವಾರ್ ಪ್ರದೇಶದಲ್ಲಿ) ಆಗಮಿಸಿದರು. ನಂತರ ಕರ್ನಾಟಕ, ಆಂಧ್ರಪ್ರದೇಶ, ಮಧ್ಯಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ನೆಲೆ ನಿಂತರು. ಅವರು 17ನೇ ಶತಮಾನದಲ್ಲಿ ದೇಶದ ದಕ್ಷಿಣ ಭಾಗಕ್ಕೆ ಸರಕುಗಳನ್ನು ಸಾಗಿಸಲು ಮೊಘಲ್ ಚಕ್ರವರ್ತಿ ಔರಂಗಜೇಬನಿಗೆ ಈ ಸಮುದಾಯದವರು ಸಹಾಯ ಮಾಡಿದರು ಮತ್ತು ಅವರಲ್ಲಿ ಕೆಲವರು ಅಲ್ಲಿ ನೆಲೆಸಿದರು ಎಂದು ಹೇಳಲಾಗಿದೆ.

ಇವರು ಕಸೂತಿ ಮಾಡಿದ ಸಾಂಪ್ರದಾಯಿಕ ಉಡುಪನ್ನು ಧರಿಸುತ್ತಾರೆ. ಮಹಿಳೆಯರು ಸಾಂಪ್ರದಾಯಿಕವಾಗಿ ಕೆಂಪು, ಹಳದಿ, ನೀಲಿ, ಹಸಿರು, ಕಿತ್ತಳೆ, ಇತ್ಯಾದಿಗಳ ಅದ್ಭುತವಾದ ಮತ್ತು ಪ್ರಕಾಶಮಾನವಾದ ಬಟ್ಟೆಯನ್ನು ಧರಿಸುತ್ತಾರೆ, ಪುರುಷರು ಸಂಕೀರ್ಣವಾದ ವಿನ್ಯಾಸದ ಪೇಟಗಳು ಮತ್ತು ಭಾರವಾದ ಕನ್ನಡಿ ವೇಸ್ಟ್‌ಕೋಟ್‌ಗಳು ಮತ್ತು ಸೊಂಟದ ಜಾಕೆಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಇದನ್ನು ಓದಿ:Narendra Modi: ಕಲ್ಯಾಣ ಕರ್ನಾಟಕದಲ್ಲಿಂದು ಮೋದಿ ಹವಾ, ಕನ್ನಡದಲ್ಲೇ ಟ್ವೀಟ್ ಮಾಡಿ ಖುಷಿ ಹಂಚಿಕೊಂಡ ನಮೋ

ಇದು ಈ ಸಮುದಾಯದ ಹಬ್ಬ ಅಥವಾ ಯಾವುದೇ ಸಮಾರಂಭಗಳು ಇರುವಾಗ ಈ ರೀತಿಯ ಬಟ್ಟೆಯನ್ನು ಧರಿಸುತ್ತಾರೆ. ಅವರು ಹೆಚ್ಚಾಗಿ ಥ್ರೆಡ್ ಕಸೂತಿ, ಗುಂಡಿಗಳು, ಚಿಪ್ಪುಗಳು, ಮಿನುಗುಗಳು, ಬೆಳ್ಳಿಯ ಮಣಿಗಳು ಇತ್ಯಾದಿಗಳನ್ನು ಹೊಂದಿರುವ ಬಟ್ಟೆಗಳನ್ನು ಧರಿಸುತ್ತಾರೆ.

ಅವರ ಬಟ್ಟೆಗಳು ಮಾತ್ರವಲ್ಲದೆ ಅವರ ಮನೆಗಳು ಸಹ ಆಸಕ್ತಿದಾಯಕ ಶೈಲಿಯಲ್ಲಿಂದ ತುಂಬಿರುತ್ತದೆ. ಲಂಬಾಣಿಗಳು ತಮ್ಮ ಗೋಡೆಗಳ ಮೇಲೆ ಬಹು ಬಣ್ಣಗಳ ಚಿತ್ರಗಳನ್ನು ಹಾಗೂ ಬಣ್ಣ ಬಳಿದಿರುತ್ತಾರೆ. ಅವುಗಳನ್ನು ಕಲಾಕೃತಿಗಳು ಮತ್ತು ಕಲಾ ಶೈಲಿಗಳಿಂದ ಅಲಂಕರಿಸಲಾಗಿರುತ್ತದೆ. ಇದರ ಜೊತೆಗೆ ಅವರು ‘ಗೋರ್ ಬೋಲಿ’ ಭಾಷೆಯನ್ನು ಮಾತನಾಡುತ್ತಾರೆ. ಇದನ್ನು ‘ಲಂಬಾಡಿ’ ಎಂದೂ ಕರೆಯುತ್ತಾರೆ . ಇದು ಲಿಪಿಯನ್ನು ಹೊಂದಿಲ್ಲದ ಕಾರಣ , ಇದನ್ನು ದೇವನಾಗರಿಯಲ್ಲಿ ಅಥವಾ ತೆಲುಗು ಅಥವಾ ಕನ್ನಡದಂತಹ ಸ್ಥಳೀಯ ಭಾಷೆಗಳಲ್ಲಿ ಬರೆಯಲಾಗಿದೆ.

ಈ ಬುಡಕಟ್ಟು ಗುಂಪಿಗೆ ಸೇರಿದ ಅನೇಕ ಜನರು ದ್ವಿಭಾಷಾ ಅಥವಾ ಬಹುಭಾಷಾ, ಅಂದರೆ ಅವರು ಪ್ರದೇಶದ ಪ್ರಧಾನ ಭಾಷೆಯಲ್ಲಿ ಸಂವಹನ ಮಾಡಲು ಕಲಿತಿದ್ದಾರೆ.

ಬಂಜಾರ ನಗಾರಿಯ ಕುತೂಹಲಕಾರಿ ಇತಿಹಾಸ

ಕುತೂಹಲಕಾರಿ ಇತಿಹಾಸ ನಗಾರಿ ವಾದ್ಯ ಆರಂಭಗೊಂಡಿರುವ ಹಿಂದೆ ಕುತೂಹಲಕಾರಿ ಇತಿಹಾಸವಿದೆ. ನಗಾರಿ ಚಾಮರಾನಗರ, ಕೇರಳ ಹಾಗೂ ತಮಿಳುನಾಡಿಗೆ ಹೊಂದಿಕೊಂಡಿರುವ ಅಭಯಾರಣ್ಯ, ಬಿಳಿಗಿರಿ ರಂಗನ ಬೆಟ್ಟದಲ್ಲಿ ಆದಿದ್ರಾವಿಡರು ವಾಸಿಸುತ್ತಿದ್ದರು. ಬೇಟೆಯಾಡಿದ ನಂತರ ಪ್ರಾಣಿಗಳ ಚರ್ಮಗಳನ್ನು ಮರದ ದಿಬ್ಬು, ಗುಂಡಿ ಆಕಾರದ ವಸ್ತುಗಳಿಗೆ ಸುತ್ತಿ ಇಟ್ಟರು. ಒಣಗಿದ ಚರ್ಮದಿಮದ ಢಮಾರ್ ಎಂಬ ಶಬ್ಧ ಬರುತ್ತಿತ್ತು. ಆ ಧ್ವನಿಯನ್ನು ಅವರು ಪ್ರಾಣಿಗಳಿಂದ ರಕ್ಷಣೆ ಪಡೆಯಲು ಉಪಯೋಗಿಸಿಕೊಳ್ಳಿತ್ತಿದ್ದರು. ನಂತರ ಅದು ಸಂಗೀತ ವಾದ್ಯದ ರೂಪು ಪಡೆಯಿತು. ಇನ್ನು ನಗಾರಿಯನ್ನು ಚರ್ಮವಾದ್ಯಗಳ ರಾಜ ಎಂದೇ ಕರೆಯಲಾಗುತ್ತದೆ.

ನಗಾರಿ ವಾದ್ಯವು ಕೂಡ ಚರಿತ್ರೆಯ ಕಾಲಘಟ್ಟದ ರಣವಾದ್ಯವೇ. ಶತ್ರುಗಳ ದಾಳಿಯ ಬಗ್ಗೆ ಮುನ್ಸೂಚನೆ ನೀಡಲು ಕೊಂಬುಕಹಳೆಗಳನ್ನು ಬಳಸುತ್ತಿದ್ದಂತೆಯೇ ನಗಾರಿಗಳನ್ನು ಸಹ ಅದೇ ಉದ್ದೇಶಕ್ಕಾಗಿಯೇ ಬಳಸಲಾಗುತ್ತಿತ್ತು. ಹಾಗೆಯೇ ಯುದ್ಧದ ಸಂದರ್ಭದಲ್ಲೂ ಸೈನಿಕರನ್ನು ಹುರಿದುಂಬಿಸುವ ಸಲುವಾಗಿ ನಗಾರಿಗಳನ್ನು ಬಾರಿಸುತ್ತಿದ್ದರು. ಆದರೆ ಈಗವು ಚರಿತ್ರೆಯ ಪಳಯುಳಿಕೆಗಳಾಗಿ ಜಾನಪದ ವಾದ್ಯ ಪರಿಕರಗಳ ಸ್ಥಾನದಲ್ಲಿ ನಿಂತಿವೆ. ಆಧುನೀಕದ ಕಡೆ ವೇಗವಾಗಿ ಬದಲಾಗುತ್ತಿರುವ ನಮ್ಮ ಜಗತ್ತು, ಇಂದು ನಗಾರಿ, ಕೊಂಬು ಕಹಳೆಗಳೆಲ್ಲ ಬಳಸಬಲ್ಲ ಕಲಾವಿದರೆ. ಕೇವಲ ಮ್ಯೂಜಿಯಂಗಳ ಅಲಂಕಾರದ ವಸ್ತುಗಳಾಗಿ ಬಳಸಲಾಗುತ್ತಿದೆ.

ಜಗ್ಗಲಿಗೆ ಚರ್ಮವಾದ್ಯಗಳಲ್ಲೇ ಅತ್ಯಂತ ಬೃಹತ್ತಾದುದಾದರೂ ನಗಾರಿಯನ್ನೇ ಚರ್ಮವಾದ್ಯಗಳ ರಾಜನೆಂದು ಗುರುತಿಸುವುದು. ಅರ್ಧ ಗೋಲಾಕಾರದ ಕಬ್ಬಿಣದ ಕಡಾಯಿಗೆ ಹದ ಮಾಡಿದ ಎಮ್ಮೆಯ ಚರ್ಮವನ್ನು ಬಿಗಿದು ಕಟ್ಟಿ ನಗಾರಿಗಳನ್ನು ಸಿದ್ದಪಡಿಸಲಾಗುತ್ತದೆ. ನಗಾರಿ ಬಾರಿಸುವ ಕೋಲುಗಳು ಸಾಕಷ್ಟು ಗಟ್ಟಿಯಾಗಿರುತ್ತವೆ. ಏಟು ಬಿದ್ದಾಗ ಮುಚ್ಚಿದ ಕಡಾಯಿಯ ಒಳಭಾಗ ವಿಶಾಲವಾಗಿರುವುದರಿಂದ ಗಡಸಾದ ಮರುದನಿಯ ನಾದ ಹೊಮ್ಮುತ್ತದೆ. ನಗಾರಿ ಬಾರಿಸುವ ಕೋಲುಗಳು ತುದಿಯಲ್ಲಿ ದುಂಡಗಿರಬಹುದು ಮತ್ತು ಕೆಲವೊಮ್ಮೆ ತುದಿಯಲ್ಲಿ ಬಿಲ್ಲಿನಂತೆ ಬಾಗಿರಲೂಬಹುದು. ನಗಾರಿಗಳಲ್ಲಿ ವಿವಿಧ ಗಾತ್ರಗಳು ಇದೆ. ಮಧ್ಯಮಗಾತ್ರದ ನಗಾರಿಗಳನ್ನು ಹಿಂದೆ ಕುದುರೆಯ ಬೆನ್ನಿಗೆ ಬಿಗಿದು ದೇವರು, ಧಾರ್ಮಿಕ ಗುರುಗಳು ಬರುತ್ತಿರುವುದನ್ನು ಸೂಚಿಸಲು ಬಡಿಯುತ್ತಿದ್ದರು. ನಗಾರಿಯನ್ನು ಸಾಧಾರಣವಾಗಿ ಕಾಲುಗಳ ಬಳಿ ಇಟ್ಟುಕೊಂಡೇ ಬಡಿಯ ಬೇಕು. ಇಲ್ಲವೇ ಎತ್ತರದಲ್ಲಿ ಇರಿಸಿ ಬಡಿಯಬೇಕಾಗುತ್ತದೆ. ಆದರೆ ಮಠಗಳ ನಗಾರಿ ಬಸವ ಅಂದರೆ ಎತ್ತು ಜೋಡಿ ನಗಾರಿಗಳನ್ನು ತಾನೇ ಬೆನ್ನಿನ ಎರಡು ಬದಿಗೆ ಹೊತ್ತು ಸಾಗುವಾಗ ಕಲಾವಿದರು ಆ ಎರಡೂ ನಗಾರಿಗಳನ್ನು ಲಯಬದ್ಧವಾಗಿ ಬಡಿಯುತ್ತಾರೆ. ಹಿಂದಿನ ಕಾಲದ ನಗಾರಿಯ ಘನತೆ, ಗೌರವಗಳ ಸಂಕೇತ ವಾದ್ಯವೆಂಬ ಕಲ್ಪನೆ ಈ ಆಧುನಿಕ ಕಾಲದಲ್ಲೂ ಅಪರೂಪಕ್ಕಾದರೂ ಮುಂದುವರೆದಿದೆ. ಹಳೆಯ ಮೈಸೂರು ಪ್ರಾಂತ್ಯದಲ್ಲೆಲ್ಲಾ ನಗಾರಿ ಬಾರಿಸಬಲ್ಲ ನುರಿತ ಕಲಾವಿದರಿದ್ದಾರೆ.

ಪ್ರಧಾನಿ ಮೋದಿ ನಗಾರಿ ಬಾರಿಸಿದ ವಿಡಿಯೋ ಇಲ್ಲಿದೆ

Published On - 4:35 pm, Thu, 19 January 23