ಆಸ್ತಿ ವಿವರ ಬಚ್ಚಿಟ್ಟ ಆರೋಪ: ಸಂಸದ ಪಿ.ಸಿ.ಮೋಹನ್ ವಿರುದ್ಧ ವಿಚಾರಣೆ ಮುಂದುವರಿಸಲು ಕೋರ್ಟ್ ಸೂಚನೆ
ಚುನಾವಣಾ ಪ್ರಮಾಣ ಪತ್ರದಲ್ಲಿ ಸಂಸದ ಪಿ.ಸಿ.ಮೋಹನ್ ಕೆಲ ಆಸ್ತಿ ವಿವರ ಘೋಷಿಸಿಲ್ಲ ಎಂದು ಆನಂದ್.ಟಿ.ಆರ್. ಎಂಬುವವರು ದೂರು ದಾಖಲಿಸಿದ್ದರು.
ಬೆಂಗಳೂರು: ಚುನಾವಣೆ ವೇಳೆ ಆಸ್ತಿ ವಿವರ ಬಚ್ಚಿಟ್ಟ ಆರೋಪ ಎದುರಿಸುತ್ತಿರುವ ಸಂಸದ ಪಿ.ಸಿ.ಮೋಹನ್ ವಿರುದ್ಧ ವಿಚಾರಣೆ ಮುಂದುವರಿಸಲು ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ. ಸಿಆರ್‌ಪಿಸಿ 190ರಡಿ ಪ್ರಕರಣ ಪರಿಗಣನೆಗೆ ನಿರ್ದೇಶನ ನೀಡಲಾಗಿದೆ.
ಚುನಾವಣಾ ಪ್ರಮಾಣ ಪತ್ರದಲ್ಲಿ ಸಂಸದ ಪಿ.ಸಿ.ಮೋಹನ್ ಕೆಲ ಆಸ್ತಿ ವಿವರ ಘೋಷಿಸಿಲ್ಲ ಎಂದು ಆನಂದ್.ಟಿ.ಆರ್. ಎಂಬುವವರು ದೂರು ದಾಖಲಿಸಿದ್ದರು. ಜನಪ್ರತಿನಿಧಿಗಳ ಕೋರ್ಟ್ ತನಿಖೆಗೆ ಆದೇಶ ನೀಡಿತ್ತು. ಆದರೆ, ಇದನ್ನು ಪ್ರಶ್ನಿಸಿ ಪಿ.ಸಿ.ಮೋಹನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ.ಜಾನ್ ಮೈಕೆಲ್ ಕುನ್ಹಾ ಅರವರಿದ್ದ ಪೀಠ ಸಿಆರ್‌ಪಿಸಿ ಸೆ.190, 200, 202ನಂತೆ ವಿಚಾರಣೆಗೆ ಸೂಚನೆ ನೀಡಿದೆ.
ಅಂತಿಮ ತೀರ್ಪು ಬರುವವರೆಗೆ ವೇದ ನಿಲಯವನ್ನು ಸ್ಮಾರಕವನ್ನಾಗಿ ಬದಲಾಯಿಸಬೇಡಿ: ಮದ್ರಾಸ್ ಹೈಕೋರ್ಟ್