ಸಾಂದರ್ಭಿಕ ಚಿತ್ರ
ಬೆಂಗಳೂರು, (ಜನವರಿ 06): HMPV ವೈರಸ್.. ಕೊರೊನಾ ಬಳಿಕ ಮತ್ತೊಂದು ವೈರಸ್ ಟೆನ್ಷನ್ ತಂದಿಟ್ಟಿದೆ. ಈ ಮಧ್ಯೆ ಬೆಂಗಳೂರಿನಲ್ಲಿ ಎರಡು ಕೇಸ್ ಪತ್ತೆಯಾಗಿರುವುದು ಆತಂಕಕ್ಕೆ ದೂಡಿದೆ. ಈಗಾಗಲೇ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ರೋಗಲಕ್ಷಣ ಕಂಡು ಬಂದ್ರೆ ಟೆಸ್ಟಿಂಗ್ ನಡೆಸುವಂತೆ ಸೂಚನೆ ನೀಡಿದೆ. ಅದರಂತೆ ದೇಶಾದ್ಯಂತ ರೋಗ ಲಕ್ಷಣ ಇರುವವರನ್ನು ಟೆಸ್ಟ್‌ಗೆ ಒಳಪಡಿಸಲಾಗುತ್ತಿದೆ. HMPV ಸೋಂಕಿಗೆ ಒಳಗಾದವರಲ್ಲಿ ಕೊರೊನಾ ಲಕ್ಷಣ ಕಂಡುಬರುತ್ತಿದೆ. ಹಾಗಿದ್ರೆ ಹೆಮ್ಮಾರಿ ಹೆಚ್‌ಎಂಪಿವಿ ಲಕ್ಷಣಗಳು ಏನು ಎನ್ನುವುದು ಈ ಕೆಳಗಿನಂತಿದೆ ನೋಡಿ.
ಹೆಮ್ಮಾರಿ HMPV ಲಕ್ಷಣಗಳು ಏನೇನು?
- ವೈರಸ್ ದೇಹ ಹೊಕ್ಕಿದ ಮೇಲೆ ಉಸಿರಾಟಕ್ಕೆ ತೊಂದರೆ
- ಕೆಮ್ಮು, ಜ್ವರ, ಮೂಗು ಕಟ್ಟುವಿಕೆ, ಉಸಿರಾಟದ ಸಮಸ್ಯೆ
- ಸೀನುವಿಕೆ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ
- ಮಕ್ಕಳು, ವೃದ್ಧರಿಗೆ ಬೇಗ ಹೆಚ್‌ಎಂಪಿವಿ ದಾಳಿ ಮಾಡುತ್ತದೆ
- ರೋಗನಿರೋಧಕ ಶಕ್ತಿ ಕಡಿಮೆ ಇರೋರ ಮೇಲೆ ಆಕ್ರಮಣ
- ಬ್ರಾಂಕೈಟಿಸ್, ನ್ಯುಮೋನಿಯಾ ಸಮಸ್ಯೆ ಎದುರಾಗ್ಬೋದು
- ಸೋಂಕಿನ ಅವಧಿಯು ಮೂರರಿಂದ ಆರು ದಿನಗಳಾಗಿವೆ
- ಸೋಂಕಿಗೊಳಾಗದ 3-6 ದಿನದ ನಂತರ ಲಕ್ಷಣ ಉಲ್ಬಣ
ಆರೋಗ್ಯ ಇಲಾಖೆ ಮಾರ್ಗಸೂಚಿ
ಹೆಚ್‌ಎಂಪಿವಿ ವೈರಸ್ ಬಗ್ಗೆ ಎಚ್ಚರಿಕೆಯಿಂದ ಇವುರಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ಬೆನ್ನಲ್ಲೆ ರಾಜ್ಯ ಆರೋಗ್ಯ ಇಲಾಖೆ ಕೆಲವು ಮಾರ್ಗಸೂಚಿಗಳನ್ನು ಪಾಲಿಸುವಂತೆ ಸಲಹೆ ನೀಡಿದೆ.
- ಜನನಿಬಿಡ ಪ್ರದೇಶಗಳಲ್ಲಿ ಅನಗತ್ಯ ಓಡಾಟ ತಪ್ಪಿಸಿ
- ಸ್ಯಾನಿಟೈಸರ್, ಸಾಬೂನುಗಳಿಂದ ಕೈ ತೊಳೆದುಕೊಳ್ಳಿ
- ಜ್ವರ, ಕೆಮ್ಮು ಮತ್ತು ನೆಗಡಿ ಇರೋರು ಮಾಸ್ಕ್ ಧರಿಸಿ
- ಜ್ವರದಿಂದ ಬಳಲೋರ ಬಟ್ಟೆ, ಟವೆಲ್ಗಳನ್ನ ಬಳಸ್ಬೇಡಿ
- ಉಸಿರಾಟದ ಸಮಸ್ಯೆ ಇದ್ದರೆ ವೈದ್ಯರನ್ನೂ ಭೇಟಿ ಮಾಡಿ
- ಮನೆ & ಸುತ್ತಲಿನ ಪ್ರದೇಶಗಳಲ್ಲಿ ಕಚೇರಿಗಳಲ್ಲಿ ಸ್ವಚ್ಛತೆ
- ಪೌಷ್ಠಿಕಾಂಶ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ
- ಮಕ್ಕಳು ಹಾಗೂ ಹಿರಿಯರ ಬಗ್ಗೆ ಹೆಚ್ಚಿನ ಜಾಗೃತೆ ವಹಿಸಿ
ಮಕ್ಕಳು, ಮತ್ತು ವೃದ್ಧರು ಏನು ಮಾಡ್ಬೇಕು? HMPV ಗೈಡ್ಲೈನ್ಸ್
ಹಾಗಾದ್ರೆ, ಮಕ್ಕಳು, ಮತ್ತು ವೃದ್ಧರು ಏನು ಮಾಡ್ಬೇಕು, ಏನು ಮಾಡಬಾರದು ಎನ್ನುವುದನ್ನು ನೋಡೋದಾದ್ರೆ,
- ಟಿಶ್ಯೂ ಪೇಪರ್, ಕರ್ಚೀಫ್ ಮರುಬಳಕೆ ಮಾಡಬಾರದು
- ಅನಾರೋಗ್ಯ ಪೀಡಿತರ ಸಂಪರ್ಕದಿಂದ ದೂರ ಇರಬೇಕು
- ಟವೆಲ್ಗಳು, ಬಟ್ಟೆಗಳನ್ನ ಹಂಚಿಕೊಳ್ಳುವುದು ಬಿಡಬೇಕು
- ಕಣ್ಣು, ಮೂಗು ಮತ್ತು ಬಾಯಿ ಪದೇಪದೆ ಮುಟ್ಟಬಾರದು
- ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನ ಮಾಡಬಾರದು
ಏನು ಮಾಡಬೇಕು?
- ಸೀನುವಾಗ, ಕೆಮ್ಮುವಾಗ ಬಾಯಿ, ಮೂಗನ್ನು ಮುಚ್ಚಬೇಕು
- ಬಾಯಿ ಮೂಗನ್ನು ಕರ್ಚೀಫ್, ಟಿಶ್ಯೂ ಪೇಪರ್ನಿಂದ ಮುಚ್ಚಬೇಕು
- ಪದೇಪದೆ ಕೈಗಳನ್ನು ಸೋಪ್, ಸ್ಯಾನಿಟೈಸರ್ನಿಂದ ಶುಚಿಗೊಳಿಸಿ
- ಜನಸಂದಣಿ ಇರುವ ಸ್ಥಳಗಳಲ್ಲಿ ಹೆಚ್ಚಾಗಿ ಓಡಾಡಬಾರದು
- ಜ್ವರ, ಕೆಮ್ಮು, ಸೀನುವಿಕೆ ಇದ್ರೆ ಸಾರ್ವಜನಿಕ ಸ್ಥಳಕ್ಕೆ ಹೋಗಬಾರದು
- ವೈರಸ್ ಇತರರಿಗೆ ಹರಡದಂತೆ ಮುಂಜಾಗ್ರತೆ ವಹಿಸಬೇಕು
- ಸೋಂಕು ಇದ್ರೆ ಮನೆಯಲ್ಲೇ ಇರಿ, ಬೇರೆಯವರ ಸಂಪರ್ಕಕ್ಕೆ ಬರಬಾರದು
- ಹೆಚ್ಚು ಹೆಚ್ಚು ನೀರು ಕುಡಿಯಬೇಕು, ಪೌಷ್ಠಿಕಾಂಶಯುಕ್ತ ಆಹಾರ ಸೇವಿಸಬೇಕೆಂದು ಆರೋಗ್ಯ ಇಲಾಖೆ ಗೈಡ್‌ಲೈನ್ಸ್‌ನಲ್ಲಿ ತಿಳಿಸಿದೆ.
ಎಚ್ಚರಿಕೆಯಿಂದ ಇರಲು ವೈದ್ಯರ ಸಲಹೆ
ಇನ್ನು ಉಸಿರಾಟದ ಸಮಸ್ಯೆ, ಕೆಮ್ಮು, ಜ್ವರದಿಂದ ಬಳಲ್ತಾ ಇರೋರು ಮಾಸ್ಕ್ ಧರಿಸಲು ಸೂಚಿಸಲಾಗಿದೆ.
ಚಳಿಗಾಲದಲ್ಲಿ ಸಾಮಾನ್ಯವಾಗಿ ಜನರಿಗೆ ಆರೋಗ್ಯದ ಸಮಸ್ಯೆ ಕಾಡಲಿದೆ. ಜ್ವರ, ನೆಗಡಿ, ಕೆಮ್ಮು, ಉಸಿರಾಟದ ಸಮಸ್ಯೆ ಎದುರಾಗೋದು ಕಾಮನ್. ಹೀಗಾಗಿ ಬಾರಿಯೂ ಐಎಲ್ಐ ಹಾಗೂ ಸಾರಿ ಸಮಸ್ಯೆ ಇರುವವರು ಹುಷಾರಾಗಿ ಇದ್ರೆ ಉತ್ತಮ ಎಂದು ವೈದ್ಯರು ಹೇಳುತ್ತಿದ್ದಾರೆ.