ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ, ಹೊಗೆನಕಲ್ ಜಲಪಾತವೂ ಈಗ ರಮಣೀಯ!
ಕಾವೇರಿ ಜಲಾನಯ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ ಮತ್ತು ಕಬಿನಿ ಜಲಾಶಯದಿಂದ ಹೊರಹರಿವು ಹೆಚ್ಚಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊಗೆನಕಲ್ ಜಲಪಾತದ ಕಡೆ ಹರಿದುಬರುತ್ತಿದೆ. ಅಂದಹಾಗೆ ಕಪ್ಪು ಬಂಡೆಗಳ ಮೇಲಿಂದ ಧುಮ್ಮಿಕ್ಕುವ ನೀರು ಹೊಗೆಯ ಹಾಗೆ ಕಾಣುವುದರಿಂದ ಈ ಜಲಪಾತಕ್ಕೆ ಹೊಗೆನಕಲ್ ಅಂತ ಹೆಸರು ಬಂದಿದೆ.
ಚಾಮರಾಜನಗರ: ಮಳೆಗಾಲದ ಸಮಯದಲ್ಲಿ ದುಮ್ಮಿಕ್ಕಿ ಹರಿಯವ ಜಲಪಾತಗಳನ್ನು ಕಣ್ತುಂಬಿಕೊಳ್ಳುವುದ ಒಂದು ಅನಿರ್ವಚನೀಯ ಅನುಭವ. ಈ ಬಾರಿ ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗುತ್ತಿರುವುದರಿಂದ ಸಣ್ಣ-ಪುಟ್ಟ, ದೊಡ್ಡವು, ಹೆಚ್ಚು ಖ್ಯಾತಿ ಮತ್ತು ಕಡಿಮೆ ಖ್ಯಾತಿಯ ಜಲಪಾತಗಳೆಲ್ಲ ನಳನಳಿಸುತ್ತಾ ಧುಮ್ಮುಕ್ಕಿತ್ತಿವೆ ಮತ್ತು ನೋಡುಗರಿಗೆ ದೃಶ್ಯ ವೈಭವ ಸೃಷ್ಟಿಸುತ್ತಿವೆ. ಕರ್ನಾಟಕದ ಮತ್ತು ತಮಿಳುನಾಡು ಗಡಿಯಲ್ಲಿರುವ ಹೊಗೆನಕಲ್ ಜಲಪಾತವೂ ಈಗ ವೀಕ್ಷಿಸಲು ರುದ್ರ ರಮಣೀಯ. ಹೊಗೆನಕಲ್ ಜಲಪಾತದ ವೈಶಿಷ್ಟ್ಯವೆಂದರೆ ನೀರು ಬಹಳ ಎತ್ತರದಿಂದ ಬೀಳಲ್ಲ, ಕಲ್ಲು ಬಂಡೆಗಳ ಮೂಲಕ ಹರಿದು ಬರುವ ನೀರು ದೃಶ್ಯಕಾವ್ಯವನ್ನು ಸೃಷ್ಟಿ ಮಾಡುತ್ತದೆ. ಕಪ್ಪು ಬಂಡೆಗಳ ನಡುವಿನಿಂದ ಬಳುಕತ್ತಾ ಹರಿಯುವ ಹಾಲಿನ ನೊರೆಯಂಥ ನೀರು ಕಪ್ಪು ಬಂಡೆಗಳ ಮೇಲೆ ಬೀಳುತ್ತದೆ. ಈ ದೃಶ್ಯವೇ ನೋಡಲು ಬಹಳ ಸುಂದರ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: KSRTC Package Tour: ಜೋಗ ಜಲಪಾತ ವೀಕ್ಷಣೆಗೆ ಕೆಎಸ್ಆರ್ಟಿಸಿಯಿಂದ ಊಟ ಸಹಿತ ಟೂರ್ ಪ್ಯಾಕೇಜ್, ಇಲ್ಲಿದೆ ಸಮಯ, ದರ ವಿವರ