Sign In

By signing in or creating an account, you agree with Associated Broadcasting Company's Terms & Conditions and Privacy Policy.

31 ವರ್ಷಗಳಿಂದ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯುತ್ತಿದ್ದ ಗೊರವಯ್ಯ ಮಾಲತೇಶಪ್ಪ ನಿಧನ

ಕಳೆದ 31 ವರ್ಷಗಳಿಂದ ಕಾರ್ಣಿಕ ನುಡಿಯುತ್ತಿದ್ದ ಗೊರವಯ್ಯ ಮಾಲತೇಶಪ್ಪ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದರು. ಈ ಬಾರಿ ಮೈಲಾರ ಲಿಂಗೇಶ್ವರನ ಕಾರಣಿಕ ನುಡಿಯುವ ಮೊದಲೇ ದೇಗುಲ ಮುಂದಿನ ಕಟ್ಟೆಯಲ್ಲಿದ್ದ ಕಲ್ಲಿನ ತ್ರಿಶೂಲ ಕಳಚಿಬಿದ್ದಿದ್ದು, ಇದು ಅಪಶಕುನದ ಸೂಚನೆ ಎಂದು ಭಕ್ತರು ಆತಂಕ ವ್ಯಕ್ತಪಡಿಸಿದ್ದರು.

31 ವರ್ಷಗಳಿಂದ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯುತ್ತಿದ್ದ ಗೊರವಯ್ಯ ಮಾಲತೇಶಪ್ಪ ನಿಧನ
ಕಾರ್ಣಿಕ ನುಡಿಯುತ್ತಿದ್ದ ಗೊರವಯ್ಯ
Follow us
TV9 Web
| Updated By: Skanda

Updated on: Jun 22, 2021 | 10:42 AM

ವಿಜಯನಗರ: ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯುತ್ತಿದ್ದ ಗೊರವಯ್ಯ ಮಾಲತೇಶಪ್ಪ ನಿಧನರಾಗಿದ್ದಾರೆ. ಕಳೆದ 31 ವರ್ಷಗಳಿಂದ ಕಾರ್ಣಿಕ ನುಡಿಯುತ್ತಿದ್ದ ಗೊರವಯ್ಯ ಮಾಲತೇಶಪ್ಪ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದರು. ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮೈಲಾರ ಕಾರ್ಣಿಕ ಭಾರೀ ಪ್ರಸಿದ್ಧವಾಗಿದ್ದು, ಕಾರ್ಣಿಕ ಕೇಳಲೆಂದೇ ಅಸಂಖ್ಯಾತ ಭಕ್ತರು ಆಗಮಿಸುತ್ತಿದ್ದರು. ಅಲ್ಲದೇ, ಕಾರ್ಣಿಕವನ್ನು ವರ್ಷದ ಭವಿಷ್ಯವಾಣಿ ಎಂದೇ ನಂಬಲಾಗುವುದರಿಂದ ಅದರ ಆಧಾರದ ಮೇಲೆ ಆ ವರ್ಷ ಏನಾಗಬಹುದು ಎಂಬ ಲೆಕ್ಕಾಚಾರವನ್ನೂ ಹಾಕಲಾಗುತ್ತದೆ. ಇದೀಗ ಕಾರ್ಣಿಕ ನುಡಿಯುತ್ತಿದ್ದ ಗೊರವಯ್ಯ ಮಾಲತೇಶಪ್ಪ ಅವರ ನಿಧನ ಭಕ್ತಾದಿಗಳಲ್ಲಿ ಕಳವಳ ಮೂಡಿಸಿದೆ.

ಮುತ್ತಿನರಾಶಿ ಮೂರು ಭಾಗ ಆದೀತಲೆ ಪರಾಕ್ ಈ ಬಾರಿ ಜನವರಿ ತಿಂಗಳಲ್ಲಿ ಕಾರ್ಣಿಕ ನುಡಿದಿದ್ದ ಗೊರವಯ್ಯ, ಭಕ್ತರ ಜಯಘೋಷದ ನಡುವೆ ಬಿಲ್ಲನ್ನೇರಿ, ಶೂನ್ಯವನ್ನು ದಿಟ್ಟಿಸುತ್ತಾ ‘ಮುತ್ತಿನರಾಶಿ ಮೂರು ಭಾಗ ಆದೀತಲೆ ಪರಾಕ್’ ಎಂದು ಕಾರಣಿಕ ನುಡಿದು ಹಿಮ್ಮುಖವಾಗಿ ಜಿಗಿದಿದ್ದರು. ಮುತ್ತಿನರಾಶಿ ಮೂರು ಭಾಗ ಆದೀತಲೆ ಪರಾಕ್ ಎಂಬ ಸಾಲನ್ನು ಹಲವು ಬಗೆಗಳಲ್ಲಿ ವ್ಯಾಖ್ಯಾನಿಸಲಾಗಿದ್ದು, ‘ರಾಜಕೀಯವಾಗಿ ಕೇಂದ್ರ, ರಾಜ್ಯದಲ್ಲಿ ಮೈತ್ರಿ ಸರ್ಕಾರ ಬರುವ ಮುನ್ಸೂಚನೆ ಈ ಕಾರ್ಣಿಕದಲ್ಲಿದೆ. ಇದನ್ನು 3 ಭಾಗದಲ್ಲಿ ಮಳೆ ಬೆಳೆ ಸಮೃದ್ಧಿ, 1 ಭಾಗದಲ್ಲಿ ಸ್ವಲ್ಪ ಸಮಸ್ಯೆ ಎಂದೂ ವಿಶ್ಲೇಷಿಸಬಹುದು ಎಂದು ಮೈಲಾರ ಲಿಂಗೇಶ್ವರದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್​ ಅಭಿಪ್ರಾಯಪಟ್ಟಿದ್ದರು.

‘ಮುತ್ತಿನರಾಶಿ’ ಎಂದರೆ ಸಂಪತ್ತು ಎಂದೂ, ಅದು ‘ಮೂರು ಭಾಗ ಆಗುತ್ತದೆ’ ಎಂದರೆ ಮೂರು ಪಟ್ಟು ಹೆಚ್ಚಾಗುತ್ತದೆ ಎಂದೂ ಕೆಲವರು ವ್ಯಾಖ್ಯಾನಿಸಿದ್ದರು. ಇನ್ನೂ ಕೆಲವರು ಇದು ‘ಶುಭ ಕಾರಣಿಕ. ಕೊರೊನಾದಿಂದ ದೇಶ ಸುಧಾರಿಸಿಕೊಂಡಿದೆ. ದೇಶದ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ’ ಎಂದು ಹೇಳುತ್ತಿದ್ದರು. ಕೆಲವರು ಮಾತ್ರ ಕಾರಣಿಕವನ್ನು ಮತ್ತೊಂದು ಬಗೆಯಾಗಿ ವಿವರಿಸಿ, ಮೂರು ಭಾಗ ಎಂದರೆ ಇರುವ ಸಂಪತ್ತು ಹಂಚಿಹೋಗಬಹುದು ಎನ್ನುವ ಅರ್ಥದಲ್ಲಿ ವಿವರಿಸಿದ್ದರು.

ಕಳಚಿಬಿದ್ದ ತ್ರಿಶೂಲ: ಭಕ್ತರಲ್ಲಿ ಬೇಸರ ಮೈಲಾರ ಲಿಂಗೇಶ್ವರನ ಕಾರಣಿಕ ನುಡಿಯುವ ಮೊದಲೇ ದೇಗುಲ ಮುಂದಿನ ಕಟ್ಟೆಯಲ್ಲಿದ್ದ ಕಲ್ಲಿನ ತ್ರಿಶೂಲ ಕಳಚಿಬಿದ್ದಿದ್ದು, ಇದು ಅಪಶಕುನದ ಸೂಚನೆ ಎಂದು ಭಕ್ತರು ಆತಂಕ ವ್ಯಕ್ತಪಡಿಸಿದ್ದರು. ತ್ರಿಶೂಲವನ್ನು ಈ ಮೊದಲು ಇದ್ದಂತೆಯೇ ಶಾಸ್ತ್ರೋಕ್ತವಾಗಿ ಮರು ಸ್ಥಾಪಿಸಬೇಕು ಎಂದು ಸ್ಥಳಕ್ಕೆ ಭೇಟಿ ನೀಡಿದ ಮುಜರಾಯಿ ಅಧಿಕಾರಿಗಳಿಗೆ ಆಗ್ರಹಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ: ಮುತ್ತಿನರಾಶಿ ಮೂರು ಭಾಗ ಆದೀತಲೆ ಪರಾಕ್; ಹೊರಬಿತ್ತು ಮೈಲಾರಲಿಂಗೇಶ್ವರನ ಕಾರಣಿಕ.. ಒಳಾರ್ಥವೇನು?

ಸ್ಪೈಸ್‌ಜೆಟ್ ಪ್ರಯಾಣಿಕರೊಂದಿಗೆ ಡ್ಯಾನ್ಸ್ ಮಾಡಿ ಹೋಳಿ ಆಚರಿಸಿದ ಸಿಬ್ಬಂದಿ
ಸ್ಪೈಸ್‌ಜೆಟ್ ಪ್ರಯಾಣಿಕರೊಂದಿಗೆ ಡ್ಯಾನ್ಸ್ ಮಾಡಿ ಹೋಳಿ ಆಚರಿಸಿದ ಸಿಬ್ಬಂದಿ
ವೇದಿಕೆ ಮೇಲೆಯೇ ವಾಗ್ವಾದಕ್ಕಿಳಿದ ಸಂಸದ ಪಿಸಿ ಮೋಹನ್​, ಪ್ರದೀಪ್​ ಈಶ್ವರ್
ವೇದಿಕೆ ಮೇಲೆಯೇ ವಾಗ್ವಾದಕ್ಕಿಳಿದ ಸಂಸದ ಪಿಸಿ ಮೋಹನ್​, ಪ್ರದೀಪ್​ ಈಶ್ವರ್
ಆಶೀರ್ವಾದ ರೂಪದಲ್ಲಿ ಹಣ ನೀಡುವುದು ಮಠದ ಸಂಪ್ರದಾಯ: ಸ್ವಾಮೀಜಿ
ಆಶೀರ್ವಾದ ರೂಪದಲ್ಲಿ ಹಣ ನೀಡುವುದು ಮಠದ ಸಂಪ್ರದಾಯ: ಸ್ವಾಮೀಜಿ
ಗೋರಖ್‌ಪುರದಲ್ಲಿ ಬಣ್ಣ ಎರಚಿ ಸಿಎಂ ಯೋಗಿ ಆದಿತ್ಯನಾಥ್ ಹೋಳಿ ಸಂಭ್ರಮ
ಗೋರಖ್‌ಪುರದಲ್ಲಿ ಬಣ್ಣ ಎರಚಿ ಸಿಎಂ ಯೋಗಿ ಆದಿತ್ಯನಾಥ್ ಹೋಳಿ ಸಂಭ್ರಮ
ಆಮಿರ್- ರಣ್​ಬೀರ್ ನಡುವೆ ಬಿರುಕು ಮೂಡಿಸಿದ ರಿಷಭ್ ಪಂತ್
ಆಮಿರ್- ರಣ್​ಬೀರ್ ನಡುವೆ ಬಿರುಕು ಮೂಡಿಸಿದ ರಿಷಭ್ ಪಂತ್
ನೀವೆಲ್ಲ ಬರುವಂಗಿದಿದ್ರೆ ನಿಮ್ಮನ್ನೂ ಊಟಕ್ಕೆ ಕರೀಬಹುದಿತ್ತು: ಶಿವಕುಮಾರ್
ನೀವೆಲ್ಲ ಬರುವಂಗಿದಿದ್ರೆ ನಿಮ್ಮನ್ನೂ ಊಟಕ್ಕೆ ಕರೀಬಹುದಿತ್ತು: ಶಿವಕುಮಾರ್
‘ಅಪ್ಪು’ ಮರು ಬಿಡುಗಡೆ: ಅಣ್ಣಾವ್ರ ಅಭಿಮಾನಿಗಳಿಂದ ಮತ್ತೊಂದು ಬೇಡಿಕೆ
‘ಅಪ್ಪು’ ಮರು ಬಿಡುಗಡೆ: ಅಣ್ಣಾವ್ರ ಅಭಿಮಾನಿಗಳಿಂದ ಮತ್ತೊಂದು ಬೇಡಿಕೆ
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ