
ಬೆಂಗಳೂರು, (ಏಪ್ರಿಲ್ 12): ಬಿರು ಬೇಸಿಗೆಯ (Summer) ಬಿಸಿಲಿನಿಂದ ಹೈರಾಣಾಗಿದ್ದ ಕರ್ನಾಟಕದ (Karnataka) ಜನರಿಗೆ ಮಳೆರಾಯ(Rain) ಆಗಾಗ ತಂಪೆರೆಯುತ್ತಿದ್ದಾನೆ. ಮಳೆಗಾಲ ಆರಂಭಕ್ಕೂ ಮುನ್ನವೇ ರಾಜ್ಯದಲ್ಲಿ ವರುಣನ ಆರ್ಭಟ ಶುರುವಾಗಿದೆ. ಇಂದು (ಮೇ 13) ಬಹುತೇಕ ಜಿಲ್ಲೆಗಳಲ್ಲಿ ಗುಡುಗು, ಗಾಳಿ, ಮಿಂಚಿನ ಮಳೆಯಾಗಿದೆ. ಇದರ ನಡುವೆ ಸಿಡಿಲಿಗೆ (lightning strike) ಕುರಿ, ಜಾನುವಾರು, ರೈತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅದರಂತೆ ಇಂದು ಒಂದೇ ದಿನ ಕರ್ನಾಟಕದಲ್ಲಿ ಸಿಡಿಲಿನ ಹೊಡೆತಕ್ಕೆ ಐದು ಜನರು ಬಲಿಯಾಗಿದ್ದಾರೆ. ಬಳ್ಳಾರಿಯಲ್ಲಿ ಒಂದೇ ಕುಟುಂಬದ ಇಬ್ಬರು ದುರಂತ ಅಂತ್ಯ ಕಂಡಿದ್ದರೆ, ಕೊಪ್ಪಳ ಹಾಗೂ ವಿಜಯಪುರದಲ್ಲಿ ಸಿಡಿಲಿಗೆ ಬಲಿಯಾಗಿದ್ದಾರೆ. ಹೀಗಾಗಿ ಇನ್ಮುಂದೆ ಮಳೆಗಾಲ ಆರಂಭವಾಗುತ್ತಿರುವುದರಿಂದ ಈ ಸಿಡಿಲಿನ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಹಾಗಾದ್ರೆ, ಮಳೆ ವೇಳೆ ಸಿಡಿಲಿನಿಂದ ಹೇಗೆ ರಕ್ಷಿಸಿಕೊಳ್ಳಬೇಕು? ಮಳೆ ಸಂದರ್ಭದಲ್ಲಿ ಏನು ಮಾಡಬೇಕು ಎನ್ನುವ ಮಾಹಿತಿ ಈ ಕೆಳಗಿನಂತಿದೆ ನೋಡಿ.
ಏಪ್ರಿಲ್-ಮೇ ತಿಂಗಳಿನ ಹೊತ್ತಿಗೆ ಆಗಸದಲ್ಲಿ ಮುಂಗಾರು ಪೂರ್ವದ ದಟ್ಟ ಕಪ್ಪು ಮೋಡಗಳು ಕವಿಯಲಾರಂಭಿಸುತ್ತವೆ. ಇವುಗಳನ್ನು ‘ಕ್ಯುಮುಲೋನಿಂಬಸ್’ ಮೋಡಗಳೆನ್ನುತ್ತಾರೆ. ಇವುಗಳ ತಳ ಭೂಮಿಯಿಂದ ಸುಮಾರು 2 ಕಿಲೋಮೀಟರ್ ದೂರವಿರುತ್ತದೆ. ಅವುಗಳ ಮೇಲ್ತುದಿ ಸುಮಾರು 15 ಕಿಲೋಮೀಟರ್ ಎತ್ತರದಲ್ಲಿರುತ್ತದೆ. ಗಾಳಿ ಬೀಸುವಾಗ ಮೋಡದ ಕಣಗಳು ಪರಸ್ಪರ ಢಿಕ್ಕಿ ಹೊಡೆದು ಇಲೆಕ್ಟ್ರಾನ್‌ಗಳನ್ನು ಬಿಡುಗಡೆಗೊಳಿಸುತ್ತವೆ. ಬಿಡುಗಡೆಯಾದ ಇಲೆಕ್ಟ್ರಾನ್‌ಗಳು ದೊಡ್ಡ ಮೋಡಗಳ ತಳಭಾಗದಲ್ಲಿ ಸಂಗ್ರಹಗೊಳ್ಳುತ್ತವೆ. ಹೀಗೆ ಮುಂದುವರಿದಂತೆ ಮೋಡದ ತಳಭಾಗದಲ್ಲಿ ಋುಣ ವಿದ್ಯುತ್ ಕ್ಷೇತ್ರ ಸಂಚಯನವಾಗುತ್ತದೆ. ಇದೇ ಹೊತ್ತಿಗೆ ಭೂಮಿಯ ಮೇಲ್ಭಾಗದಲ್ಲಿ ಧನ ವಿದ್ಯುತ್ ಕ್ಷೇತ್ರ ಸಂಚಯನವಾಗಿದ್ದರೆ, ಮೋಡದ ಋುಣ ವಿದ್ಯುತ್ ಶಕ್ತಿ ಇತ್ತ ಕಡೆಗೆ ನುಗ್ಗಿ ಬರುತ್ತದೆ. ಇದೇ ಮಿಂಚು. ಋುಣ ಆವೇಶ ದೊಡ್ಡ ಪ್ರಮಾಣದಲ್ಲಿದ್ದಾಗ ಸಿಡಿಲು ಉಂಟಾಗುತ್ತದೆ.
ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ದಕ್ಷಿಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿದೆ. ಇದರ ನಡುವೆ ಸಿಡಿಲಿಗೆ (lightning strike) ಕುರಿ, ಜಾನುವಾರು ಮತ್ತು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲಿ ಹೆಚ್ಚಾಗಿ ರೈತರೇ ಹೆಚ್ಚು. ಗ ಮಳೆಗಾಲ ಪ್ರಾರಂಭವಾಗುತ್ತಿರುವುದರಿಂದ ಜನ ಜಾಗೃತರಾಗಿರಬೇಕು. ಅದರಲ್ಲೂ ಹೊಲ, ಜಮೀನುಗಳಲ್ಲಿ ಇರುವವರು ಮಳೆ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಯಾಕಂದ್ರೆ ಯಾವ ಸಮಯದಲ್ಲಿ ಸಿಡಿಲು ಎಲ್ಲಿ ಬಡೆಯುತ್ತೆ ಎನ್ನುವುದೇ ಗೊತ್ತಾಗಲ್ಲ.
ಸಾಮಾನ್ಯವಾಗಿ ಮುಂಗಾರು ಪೂರ್ವ ಕೆಲಸಗಳಿಗಾಗಿ ರೈತರು ಈ ಹೊತ್ತಿನಲ್ಲಿ ಹೊಲಗಳಲ್ಲಿರುತ್ತಾರೆ. ಮಳೆಯ ಸೂಚನೆ ತೋರಿಬಂದಾಗ ಮರಗಳ ಅಡಿಗೆ ಬಂದು ನಿಲ್ಲುತ್ತಾರೆ. ಆದರೆ ಹೊಲಗಳ ನಡುವೆ ಮರ ಇದ್ದರೆ, ಸಿಡಿಲು ಬಡಿಯಲು ಮರವನ್ನೇ ಆರಿಸಿಕೊಳ್ಳುತ್ತದೆ. ಹೀಗಾಗಿ ರೈತರೇ ಹೆಚ್ಚಾಗಿ ಸಾವು ನೋವಿಗೆ ತುತ್ತಾಗುತ್ತಾರೆ. ಹಾಗಾಗಿ ಜನ ಇದರಿಂದ ಎಚ್ಚರಿಕೆಯಿಂದ ಇರಬೇಕು.
Published On - 7:57 pm, Tue, 13 May 25