HSRP ನಂಬರ್ ಪ್ಲೇಟ್ ಗಡುವು ವಿಸ್ತರಣೆ: ಸಾರಿಗೆ ಇಲಾಖೆಯ ಅಧಿಕೃತ ಆದೇಶಲ್ಲೇನಿದೆ ಗೊತ್ತಾ?

| Updated By: ಗಂಗಾಧರ​ ಬ. ಸಾಬೋಜಿ

Updated on: Feb 16, 2024 | 3:44 PM

ಬೈಕ್‌, ಕಾರ್‌, ಟ್ರ್ಯಾಕ್ಟರ್‌ ಯಾವುದೇ ಆಗಿರಲಿ ಆ ನಂಬರ್‌ ಪ್ಲೇಟ್ ಇರ್ಲೇ ಬೇಕು. ಹೆಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್ ಇಲ್ಲಂದರೆ ಫೆಬ್ರವರಿ 17 ರಿಂದಲೇ ವಾಹನಗಳಿಗೆ ದಂಡ ಹಾಕುತ್ತೇವೆ ಎಂದು ಸಾರಿಗೆ ಇಲಾಖೆ ಹೇಳಿತ್ತು. ಆದರೆ ಇದೀಗ ನಾಳೆಯಿಂದ ಮೇ 31ರ ವರೆಗೆ ಡೆಡ್‌ಲೈನ್‌ ವಿಸ್ತರಣೆ ಮಾಡಿದೆ. ಆ ಮೂಲಕ ನಂಬರ್‌ ಪ್ಲೇಟ್‌ ಅಳವಡಿಕೆಗೆ ಪರದಾಡುತ್ತಿದ್ದ ವಾಹನ ಮಾಲೀಕರಿಗೆ ರಿಲೀಫ್‌ ಸಿಕ್ಕಿದೆ.

HSRP ನಂಬರ್ ಪ್ಲೇಟ್ ಗಡುವು ವಿಸ್ತರಣೆ: ಸಾರಿಗೆ ಇಲಾಖೆಯ ಅಧಿಕೃತ ಆದೇಶಲ್ಲೇನಿದೆ ಗೊತ್ತಾ?
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಫೆಬ್ರವರಿ 16: ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ (HSRP) ನಂಬರ್​ ಪ್ಲೇಟ್ ಅಳವಡಿಸುವ ಅವಧಿಯನ್ನು ನಾಳೆಯಿಂದ ಮೇ 31ರ ವರೆಗೆ ಅಂದರೆ ಮೂರು ತಿಂಗಳು ವಿಸ್ತರಿಸಲಾಗಿದೆ. ಈ ಕುರಿತಾಗಿ ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್​ ಅವರು ಅಧಿಕೃತ ಆದೇಶವನ್ನು ಶುಕ್ರವಾರ ಹೊರಡಿಸಿದ್ದಾರೆ. ಇತ್ತೀಚೆಗೆ ಸದನದಲ್ಲಿ ಗಡುವು ವಿಸ್ತರಣೆ ಬಗ್ಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಮಾಹಿತಿ ನೀಡಿದ್ದರು. ಇಂದು ಗಡುವು ವಿಸ್ತರಣೆ ಮಾಡಿ ರಾಜ್ಯ ಸಾರಿಗೆ ಇಲಾಖೆಯಿಂದ ಅಧಿಕೃತ ಆದೇಶ ನೀಡಿದ್ದು, ಆ ಮೂಲಕ ನಾಲ್ಕನೇ ಬಾರಿಗೆ ಗಡುವು ವಿಸ್ತರಣೆ ಮಾಡಲಾಗಿದೆ. ಗಡುವು ವಿಸ್ತರಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ವಾಹನ ಸವಾರರು ಮನವಿ‌ ಮಾಡಿದ್ದರು.

ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್‌ ಪ್ಲೇಟ್​​ ವಾಹನಗಳ ಸುರಕ್ಷತೆಗಾಗಿ ಈ ಪ್ಲೇಟ್‌ ಅಳವಡಿಕೆಯನ್ನ ಕಡ್ಡಾಯ ಮಾಡಲಾಗಿದೆ. 2019ರ ಏಪ್ರಿಲ್‌ ಬಳಿಕ ಖರೀದಿ ಮಾಡಿರುವ ವಾಹನಗಳಿಗೆ ರಿಜಿಸ್ಟ್ರೇಷನ್‌ ವೇಳೆಯೇ HSRP ಪ್ಲೇಟ್ ಅಳವಡಿಸಲಾಗಿದೆ. ಹೀಗಾಗಿ 2019 ರ ಏಪ್ರಿಲ್‌ಗೂ ಮುನ್ನ ಖರೀದಿಸಿರುವ ಎಲ್ಲಾ ವಾಹನಗಳಿಗೂ ಅತೀ ಸುರಕ್ಷತಾ ನೋಂದಣಿ ಫಲಕ ಅಳವಡಿಕೆ ಕಡ್ಡಾಯವಾಗಿದೆ.

ಇದನ್ನೂ ಓದಿ: ವಾಹನ ಮಾಲಿಕರಿಗೆ ಗುಡ್​​ ನ್ಯೂಸ್​: ಹೆಚ್​​​ಎಸ್​ಆರ್​ಪಿ ನಂಬರ್​ ಪ್ಲೇಟ್​​ ಅಳವಡಿಸುವ ಅವಧಿ ವಿಸ್ತರಣೆ

ನಂಬರ್‌ ಪ್ಲೇಟ್‌ ಅಳವಡಿಕೆಗೆ ಫೆಬ್ರವರಿ 17 ರ ಡೆಡ್‌ಲೈನ್‌ ನೀಡಲಾಗಿತ್ತು. ಆದರೆ ಜಿಲ್ಲೆ ಜಿಲ್ಲೆಗಳಲ್ಲೂ ಈ ಪ್ಲೇಟ್‌ ಅಳವಡಿಕೆ ಆಗಿಲ್ಲ. ಇನ್ನೂ ಒಂದೂವರೆ ಕೋಟಿಗೂ ಹೆಚ್ಚು ವಾಹನಗಳಿಗೆ ಈ ಪ್ಲೇಟ್‌ ಅಳವಡಿಕೆ ಆಗಬೇಕಿದೆ ಎಂದು ಕಾಂಗ್ರೆಸ್‌ನ ಪರಿಷತ್‌ ಸದಸ್ಯ ಮಧು ಮಾದೇಗೌಡ ಸದನದಲ್ಲಿ ಪ್ರಸ್ತಾಪಿಸಿದ್ದರು.

ರಾಜ್ಯದಲ್ಲಿ 18 ಲಕ್ಷ ವಾಹನಗಳಿಗೆ ಮಾತ್ರ ಪ್ಲೇಟ್ ಅಳವಡಿಕೆ: ಸಚಿವ ರಾಮಲಿಂಗಾ ರೆಡ್ಡಿ

ಮಧು ಮಾದೇಗೌಡ ಪ್ರಶ್ನೆಗೆ ಉತ್ತರಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ರಾಜ್ಯದಲ್ಲಿ ಸದ್ಯ 18 ಲಕ್ಷ ವಾಹನಗಳಿಗೆ ಮಾತ್ರ ಈ ಪ್ಲೇಟ್ ಅಳವಡಿಕೆ ಆಗಿದೆ. ಇನ್ನೂ ಒಂದು ಕೋಟಿ 82 ಲಕ್ಷ ವಾಹನಗಳಿಗೆ ಈ ಪ್ಲೇಟ್ ಅಳವಡಿಸಬೇಕಿದೆ. ಹೀಗಾಗಿ 3 ತಿಂಗಳ ವರೆಗೆ ಗಡುವು ವಿಸ್ತರಣೆ ಮಾಡುತ್ತೇವೆ ಎಂದು ಹೇಳಿದ್ದರು.

ಇದನ್ನೂ ಓದಿ: ಹೆಚ್ಎಸ್ಆರ್​ಪಿ ನಂಬರ್​ ಪ್ಲೇಟ್​ ಅಳವಡಿಕೆಗೆ ಡೆಡ್​ಲೈನ್​ ನೀಡಿದ ಸಾರಿಗೆ ಇಲಾಖೆ

ಈ ಪ್ಲೇಟ್‌ಗಳನ್ನ ಅಳವಡಿಸಲು ಎಲ್ಲರಿಗೂ ಅವಕಾಶ ನೀಡಲಾಗಿಲ್ಲ. ಸರ್ಕಾರವೇ ಕೆಲ ಏಜೆನ್ಸಿಗಳನ್ನ ನೇಮಕ ಮಾಡಿದೆ. ಅದರಲ್ಲೂ ಆನ್‌ಲೈನ್‌ನಲ್ಲೇ ನೋಂದಣಿ ಮಾಡಿಕೊಂಡು ನಂಬರ್‌ ಪ್ಲೇಟ್‌ಗೆ ಆರ್ಡರ್‌ ಕೊಡಬೇಕು. ಬೆಂಗಳೂರು ಸೇರಿ ಮಹಾನಗರಗಳಲ್ಲಿ ಪ್ಲೇಟ್‌ ಅಳವಡಿಕೆ ವೇಗ ಪಡೆದುಕೊಂಡಿದೆ. ಆದರೆ ಹಳ್ಳಿಗಳಲ್ಲಿ ಜಾಗೃತಿಯೇ ಆಗಿಲ್ಲ. ಇದರ ನಡುವೆ ಕೆಲ ಫೇಕ್‌ ವೆಬ್‌ಸೈಟ್‌ಗಳು ಹುಟ್ಟಿಕೊಂಡಿದ್ದು, ಈ ಬಗ್ಗೆಯೂ ಗಮನ ಹರಿಸುತ್ತೇವೆ ಎಂದಿದ್ದರು.

HSRP ನಂಬರ್‌ ಪ್ಲೇಟ್‌ ಅಳವಡಿಕೆಗೆ ಸರ್ವರ್‌ ಪ್ರಾಬ್ಲಂ, ಎರರ್‌ ಸಂದೇಶದಿಂದಾಗಿ ಜನ ಪರದಾಡುತ್ತಿದ್ದರು. ಹೀಗಾಗಿ ಸರ್ಕಾರ 3 ತಿಂಗಳು ವಿಸ್ತರಣೆ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:43 pm, Fri, 16 February 24