ಹುಬ್ಬಳ್ಳಿ, ಡಿಸೆಂಬರ್ 04: ಬೈಕ್ ಕಳ್ಳತನ ಆರೋಪಿ ಅನುಮಾನಸ್ಪದವಾಗಿ ಸಾವನ್ನಪಿರುವಂತಹ (death) ಘಟನೆ ಆನಂದ ನಗರದಲ್ಲಿ ನಡೆದಿದೆ. ಮಹಾಂತೇಶ್ ಕಲಾಲ್ ಮೃತ ವ್ಯಕ್ತಿ. ಸದ್ಯ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಒಂದು ಸಿಕ್ಕಿದೆ. ಸಾವಿಗೆ ಹುಬ್ಬಳ್ಳಿ ಪೊಲೀಸರೇ ಕಾರಣ ಎಂದು ಮಹಾಂತೇಶ್ ಡೆತ್ ನೋಟ್ ಬರೆದು ಸಾವನ್ನಪ್ಪಿದ್ದಾರೆ. ಹುಬ್ಬಳ್ಳಿ ಉಪನಗರ ಠಾಣೆಯ ಮಲ್ಲಿಕಾರ್ಜುನ, ರೇಣು, ದಾನೇಶ್, ಅರುಣ್, ಮಂಜುನಾಥ, ಕುದರಿ ಮತ್ತು ಗೋವಿಂದ್ ಹೆಸರು ಉಲ್ಲೇಖಿಸಲಾಗಿದೆ.
ನವೆಂಬರ್ 19 ರಂದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ಕಳೆದ ತಿಂಗಳು 22 ರಂದು ಮತ್ತೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚಿಕಿತ್ಸೆ ಫಲಿಸದೆ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದೀಗ ಮಹಾಂತೇಶ್ ಸಾವಿಗೆ ಅಸಲಿ ಕಾರಣ ಬಹಿರಂಗವಾಗಿದೆ. ಹುಬ್ಬಳ್ಳಿಯ ಉಪನಗರ ಪೊಲೀಸರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಗದಗಿನಲ್ಲಿ ಆನ್ಲೈನ್ ಗೇಮಿಂಗ್ಗೆ ವ್ಯಕ್ತಿ ಬಲಿ: ಬ್ಯಾನ್ ಮಾಡುವಂತೆ ಡೆತ್ ನೋಟ್ನಲ್ಲಿ ಮನವಿ
ಕಳೆದ ಕೆಲ ದಿನಗಳ ಹಿಂದೆ ಉಪನಗರ ಪೊಲೀಸರು ಬೈಕ್ ಕಳ್ಳತನ ಆರೋಪದಡಿ ಮಹಾಂತೇಶ್ ಬಂಧಿಸಿದ್ದರು. ಜಾಮೀನಿನ ಮೇಲೆ ಹೊರ ಬಂದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿನ ಕಾರ್ಯಕ್ಕೆ ಹಿನ್ನೆಲೆ ಮನೆ ಸ್ವಚ್ಚಗೊಳಿಸುವ ವೇಳೆ ಡೆತ್ ನೋಟ್ ಸಿಕ್ಕಿದೆ. ಇದೀಗ ಮಹಾಂತೇಶ್ ಸಾವಿಗೆ ಪೊಲೀಸರೇ ಕಾರಣವೆನ್ನಲಾಗುತ್ತಿದ್ದು, ಪೊಲೀಸರು ಕಿರುಕುಳ ನೀಡಿರುವ ಬಗ್ಗೆ ಉಲ್ಲೇಖಿಸಲಾಗಿದೆ.
ಪೊಲೀಸರು ಹಣಕ್ಕೆ ಡಿಮ್ಯಾಂಡ್ ಮಾಡಿ ನನಗೆ ಟಾರ್ಚರ್ ಕೊಟ್ಟಿದ್ದಾರೆ. ಬೃಂದಾವನ ಲಾಡ್ಜ್ಗೆ ಕರೆತಂದು ಪೊಲೀಸರು ಥಳಿಸಿದ್ದಾರೆ. ಇನ್ನು ಡೆತ್ ನೋಟ್ ಯಾರಿಗೂ ಕೊಡಬೇಡಿ ಎಂದು ಮಹಾಂತೇಶ್ ಕುಟುಂಬಕ್ಕೆ ಪೊಲೀಸರು ಧಮ್ಕಿ ಹಾಕಿದ್ದಾರೆ. ಹಣಕ್ಕಾಗಿ ಹುಬ್ಬಳ್ಳಿ ಉಪನಗರ ಪೊಲೀಸರಿಂದ ಮಹಾಂತೇಶ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ನನ್ನ ಗಂಡನ ಸಾವಿಗೆ ಪೊಲೀಸರೇ ಕಾರಣ ಎಂದು ಮಹಾಂತೇಶ್ ಕಲಾಲ್ ಪತ್ನಿ ಪೂಜಾ ಕಣ್ಣೀರು ಹಾಕಿದ್ದಾರೆ. ನನಗೆ ನ್ಯಾಯ ಸಿಗಬೇಕು. ಮಹಾಂತೇಶ್ ಮೂರು ಮಕ್ಕಳ ತಂದೆಯಾಗಿದ್ದರು. ಮಕ್ಕಳನ್ನು ಸಾಕಲು ಕಷ್ಟವಾಗಿದೆ. ಅಮಾಯಕ ಗಂಡನ ಪ್ರಾಣ ತೆಗೆದುಕೊಂಡಿದ್ದಾರೆ. ಆ ಪೊಲೀಸರನ್ನು ಅಮಾನತ್ತು ಮಾಡುವಂತೆ ಆಗ್ರಹಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:15 pm, Wed, 4 December 24