ಹುಬ್ಬಳ್ಳಿ ಕಿಮ್ಸ್ ಕೆಲಸಗಳ್ಳ ವೈದ್ಯರ ಪ್ರಕರಣ: ತಪ್ಪಿತಸ್ಥರ ರಕ್ಷಣೆಗೆ ಆಸ್ಪತ್ರೆ ನಿರ್ದೇಶಕ ಉಪಾಯ ಶಂಕೆ
ಈ ಬಗ್ಗೆ ಸಾಕ್ಷ್ಯ ಸಮೇತ ಟಿವಿ9 ವರದಿ ಮಾಡಿತ್ತು. ಕೆಲಸಗಳ್ಳರ ಬಗ್ಗೆ ಟಿವಿ9 1 ವಾರದ ಕಂಪ್ಲೀಟ್ ಮಾಹಿತಿ ನೀಡಿತ್ತು. ವಾರ ಪೂರ್ತಿ ಕೆಲಸಗಳ್ಳರನ್ನ ಫಾಲೋ ಮಾಡಿ ಮಾಹಿತಿ ಸಂಗ್ರಹ ಮಾಡಲಾಗಿತ್ತು. ಎಲ್ಲ ಸಾಕ್ಷ್ಯಗಳನ್ನು ಟಿವಿ9 ರಹಸ್ಯ ಕಾರ್ಯಾಚರಣೆ ಬಹಿರಂಗಪಡಿಸಿತ್ತು.
ಹುಬ್ಬಳ್ಳಿ: ಇಲ್ಲಿನ ಕಿಮ್ಸ್ ಕೆಲಸಗಳ್ಳರ ಪ್ರಕರಣ ಮುಚ್ಚಿಹಾಕಲು ಸಂಸ್ಥೆಯ ನಿರ್ದೇಶಕರಿಂದಲೇ ಪ್ರಯತ್ನವಾಗಿದೆ ಎಂಬ ವಿಚಾರ ತಿಳಿದುಬಂದಿದೆ. 11 ವೈದ್ಯರ ಪೈಕಿ ಕೆಲವರ ವಿರುದ್ಧ ಮಾತ್ರ ಕ್ರಮ ಕೈಗೊಂಡು, ಉಳಿದ ತಪ್ಪಿತಸ್ಥರ ರಕ್ಷಣೆಗೆ ನಿರ್ದೇಶಕ ಪ್ಲ್ಯಾನ್ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಕಿಮ್ಸ್ ನಿರ್ದೇಶಕರು ನೀಡಿದ ವರದಿಯಲ್ಲಿ ತಪ್ಪಿತಸ್ಥರ ರಕ್ಷಣೆ ಮಾಡಲಾಗಿದೆ. ಕೇವಲ 3-4 ವೈದ್ಯರ ವಿರುದ್ಧ ಮಾತ್ರ ವರದಿ ಸಲ್ಲಿಕೆ. ಉಳಿದವರ ಬಗ್ಗೆ ಸಕಾರಾತ್ಮಕ ವರದಿ ನೀಡಿರುವ ನಿರ್ದೇಶಕ ಎಂದು ಅನುಮಾನ ಮೂಡಿದೆ.
3 ವಿಭಾಗಗಳ ಹೆಚ್ಒಡಿಗಳ ರಕ್ಷಣೆಗಾಗಿ ನಿರ್ದೇಶಕರು ಯತ್ನಿಸಿದ್ದಾರೆ. ಡಾ. ನರೇಂದ್ರ ಹಿರೇಗೌಡರ್, ಡಾ. ದತ್ತಾತ್ರೇಯ ಬಂಟ್ ಸೇರಿದಂತೆ ಕೆಲವು ವೈದ್ಯರ ಪರ ಕಿಮ್ಸ್ ನಿರ್ದೇಶಕರು ಇದ್ದಾರೆ. ವರದಿ ಕೊಡುವಲ್ಲೂ ತಾರತಮ್ಯ ಮಾಡಿದ್ದಾರೆ ಎಂದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ನಿರ್ದೇಶಕ ಡಾ.ರಾಮಲಿಂಗಪ್ಪ ಮೇಲೆ ಅನುಮಾನ ಮೂಡಿದೆ.
ಈ ಬಗ್ಗೆ ಸಾಕ್ಷ್ಯ ಸಮೇತ ಟಿವಿ9 ವರದಿ ಮಾಡಿತ್ತು. ಕೆಲಸಗಳ್ಳರ ಬಗ್ಗೆ ಟಿವಿ9 1 ವಾರದ ಕಂಪ್ಲೀಟ್ ಮಾಹಿತಿ ನೀಡಿತ್ತು. ವಾರ ಪೂರ್ತಿ ಕೆಲಸಗಳ್ಳರನ್ನ ಫಾಲೋ ಮಾಡಿ ಮಾಹಿತಿ ಸಂಗ್ರಹ ಮಾಡಲಾಗಿತ್ತು. ಎಲ್ಲ ಸಾಕ್ಷ್ಯಗಳನ್ನು ಟಿವಿ9 ರಹಸ್ಯ ಕಾರ್ಯಾಚರಣೆ ಬಹಿರಂಗಪಡಿಸಿತ್ತು.
ಕೆಲಸಗಳ್ಳ ವೈದ್ಯರ ವಿರುದ್ಧ ನಾನು ವರದಿಯನ್ನು ನೀಡಿದ್ದೇನೆ. ವರದಿಯ ಬಗ್ಗೆ ಬಹಿರಂಗ ಪಡಿಸುವುದಕ್ಕೆ ಆಗುವುದಿಲ್ಲ ಎಂದು ಟಿವಿ9ಗೆ ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಹೇಳಿಕೆ ನೀಡಿದ್ದಾರೆ. ಕೊರೊನಾ ಸಮಯದಲ್ಲಿ ವೈದ್ಯರು ಕೆಲಸ ಮಾಡಿದ್ದಾರೆ. ಅವರ ಕೆಲಸವನ್ನು ನಾವು ಪರಿಗಣಿಸಬೇಕಾದ ಅಗತ್ಯವಿದೆ. ಎಲ್ಲ ಮಾಹಿತಿ ಆಧರಿಸಿ ನಾನು ವರದಿಯನ್ನು ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಕೊರೊನಾ ಹಿನ್ನೆಲೆ ಹಾಜರಾತಿ ಬಗ್ಗೆ ನಾನು ನಿಗಾ ವಹಿಸಿಲ್ಲ. ವೈದ್ಯರ ಹಾಜರಾತಿಗೆ ನಾವು ಪ್ರಾಮುಖ್ಯತೆ ಕೊಡಲು ಆಗಲ್ಲ. ವೈದ್ಯರ ಕೆಲಸದ ಬಗ್ಗೆಯೂ ನಾವು ಪರಿಗಣಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಟಿವಿ9 ರಹಸ್ಯ ಕಾರ್ಯಾಚರಣೆ ಒಳ್ಳೆಯ ಕೆಲಸವಾಗಿದೆ. ಕೆಲಸಗಳ್ಳ ವೈದ್ಯರ ಬಗ್ಗೆ ನನಗೆ ಮೊದಲೇ ಮಾಹಿತಿ ಇತ್ತು. ಜಿಲ್ಲೆಯ ಸಚಿವರು ನನಗೆ ವೈದ್ಯರ ಬಗ್ಗೆ ದೂರು ನೀಡಿದ್ದರು. ಅಲ್ಲಿಯೇ ಅವರ ವಿರುದ್ಧ ಕ್ರಮಕೈಗೊಳ್ಳಲು ಸೂಚಿಸಿದ್ದೆವು. ವರದಿ ನೀಡುವಂತೆ ನಿರ್ದೇಶಕರಿಗೆ ಸೂಚನೆ ನೀಡಿದ್ದೆ. ಕಿಮ್ಸ್ ನಿರ್ದೇಶಕರ ವರದಿ ನಿನ್ನೆಯೇ ಬಂದಿರಬೇಕು. ಕಚೇರಿಗೆ ತೆರಳಿ ವರದಿ ಬಂದ ಬಳಿಕ ಕ್ರಮಕೈಗೊಳ್ಳುತ್ತೇವೆ. ತಪ್ಪಿತಸ್ಥರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡಿದ್ದಾರೆ.
ಈ ಸಂಬಂಧ, ವೈದ್ಯರಿಗೂ ಟ್ಯಾಗ್ ಅಳವಡಿಸುವುದಕ್ಕೆ ಚಿಂತನೆ ನಡೆಸಲಾಗಿದೆ. ಆ ಮೂಲಕ ವೈದ್ಯರಿಗೆ ಜಿಯೋ ಫೆನ್ಸಿಂಗ್ ಅಳವಡಿಸಲಾಗುವುದು. ಅದರಿಂದ ವೈದ್ಯರು 100 ಮೀಟರ್‌ಗಿಂತ ದೂರ ಹೋದ್ರೆ ತಿಳಿಯುತ್ತೆ. ತಪ್ಪಿತಸ್ಥ ವೈದ್ಯರ ವಿರುದ್ಧ ತಕ್ಷಣವೇ ಕ್ರಮಕೈಗೊಳ್ಳುತ್ತೇವೆ. ಕ್ರಮ ಕೈಗೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ. ವಾರ್ಡ್‌ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಸೂಚನೆ ಕೊಡಲಾಗಿದೆ. ಕೆಲಸಗಳ್ಳ ವೈದ್ಯರು, ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಟಿವಿ9ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ವೈದ್ಯರ ಕಳ್ಳಾಟ ಪ್ರಕರಣ; ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆ
ಕಿಮ್ಸ್‌ನ ನಿರ್ದೇಶಕರ ಶೋಕಾಸ್ ನೋಟಿಸ್ಗೆ ಉತ್ತರಿಸಿದ್ದು 9 ವೈದ್ಯರು, ಇನ್ನು ಇಬ್ಬರು ಬಾಕಿ