AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಕೊಲೆ ಮಾಡಲು ಸಂಚು ರೂಪಿಸಿದ್ರು, ಆದ್ರೆ ನನ್ನ ಮಗಳ ಕೊಲೆ ಮಾಡಿದ್ರು: ನಿರಂಜನ ಹಿರೇಮಠ

ಹುಬ್ಬಳ್ಳಿಯಲ್ಲಿ ಮಾತನಾಡಿದ ಮೃತಮೃತ ನೇಹಾ ತಂದೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಾರ್ಪೋರೇಟರ್ ನಿರಂಜನ ಹಿರೇಮಠ, ನನ್ನ ಕೊಲೆ ಮಾಡಲು ಸಂಚು ರೂಪಿಸಿದ್ದರು, ಆದರೆ ನನ್ನ ಮಗಳನ್ನು ಕೊಲೆ ಮಾಡಿದರು ಎಂದು ಹೇಳಿದ್ದಾರೆ. ಮೊದಲು ನನ್ನ ಮಗಳ ಕೊಲೆ ನಡೆಯಿತು. ಬಳಿಕ ಅಂಜಲಿ ಯುವತಿಯ ಕೊಲೆ ನಡೆಯಿತು. ಸಂಚು ರೂಪಿಸಿ ಕೊಲೆ ಮಾಡಿದ್ದಾರೆ ಎಂದಿದ್ದಾರೆ.

ನನ್ನ ಕೊಲೆ ಮಾಡಲು ಸಂಚು ರೂಪಿಸಿದ್ರು, ಆದ್ರೆ ನನ್ನ ಮಗಳ ಕೊಲೆ ಮಾಡಿದ್ರು: ನಿರಂಜನ ಹಿರೇಮಠ
ನನ್ನ ಕೊಲೆ ಮಾಡಲು ಸಂಚು ರೂಪಿಸಿದ್ರು, ಆದ್ರೆ ನನ್ನ ಮಗಳ ಕೊಲೆ ಮಾಡಿದ್ರು: ನಿರಂಜನ ಹಿರೇಮಠ
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Edited By: |

Updated on:May 18, 2024 | 5:38 PM

Share

ಹುಬ್ಬಳ್ಳಿ, ಮೇ 18: ನನ್ನ ಕೊಲೆ ಮಾಡಲು ಸಂಚು ರೂಪಿಸಿದ್ದರು, ಆದರೆ ನನ್ನ ಮಗಳನ್ನು ಕೊಲೆ ಮಾಡಿದರು ಎಂದು ಮೃತ ನೇಹಾ ತಂದೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಾರ್ಪೋರೇಟರ್ ನಿರಂಜನ ಹಿರೇಮಠ (niranjan hiremath) ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನನ್ನ ವಾರ್ಡ್​​ನಲ್ಲಿ ಎರಡು ಕೊಲೆಗಳು ಆಗಿವೆ. ಮೊದಲು ನನ್ನ ಮಗಳ ಕೊಲೆ (Murder) ನಡೆಯಿತು. ಬಳಿಕ ಅಂಜಲಿ ಯುವತಿಯ ಕೊಲೆ ನಡೆಯಿತು. ಸಂಚು ರೂಪಿಸಿ ಕೊಲೆ ಮಾಡಿದ್ದಾರೆ. ಇದೊಂದು ರಾಜಕೀಯ ಷಡ್ಯಂತ್ರ ಮಾಡುತ್ತಿದ್ದಾರೆ. ಕೊಲೆ ಮಾಡಿದ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

ಜತೆಗೆ ರಕ್ಷಣೆ ಕೊಡಲು ಸರ್ಕಾರಕ್ಕೆ ಆಗಲಿಲ್ಲ. ನಮ್ಮ‌ ಜನಾಂಗಕ್ಕೆ ಜನರು ಬೆಲೆ‌ ಕೊಡುತ್ತಾರೆ. ಆದರೆ ಕೆಲವರು ರಾಜಕೀಯ ಮಾಡಿ ಈ ರೀತಿ ಮಾಡುತ್ತಿದ್ದಾರೆ. ಕಾಣದ ಕೈ ಕೆಲಸ ಮಾಡುತ್ತಿವೆ. ಜನರೆ ನನ್ನ ಕೈ ಹಿಡಿದಿದ್ದಾರೆ. ನನ್ನ ವಾರ್ಡ್​​ನಲ್ಲೇ ಅಕ್ರಮ ಚಟುವಟಿಕೆ ಮಾಡುತ್ತಿದ್ದಾರೆ. ಸರ್ಕಾರ ದಕ್ಷ ಪೊಲೀಸ ಅಧಿಕಾರಿ ನೇಮಿಸಬೇಕು. ಸರ್ಕಾರಕ್ಕೆ ಧಮ್ಮ ಇಲ್ಲ, ಅಂದರೆ ರಾಜೀನಾಮೆ ಕೊಟ್ಟು ಹೋಗಿ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ತನ್ನ ಮಗಳಂತೆ ಮತ್ತೋರ್ವ ಯುವತಿ ಹತ್ಯೆ: ಗೃಹ ಸಚಿವರ ವಿರುದ್ಧ ನೇಹಾ ತಂದೆ ನಿರಂಜನ ಕೆಂಡಾಮಂಡಲ

ಕೂಲಿ‌ ಮಾಡಿ ಬದುಕುವ ಜನಾಂಗದ ಯುತಿ ಕೊಲೆ ಮಾಡಿದ್ದಾರೆ. ನನ್ನ ಮಗಳ ಬಲಿ ಪಡೆದಿದ್ದಕ್ಕೆ ಇಡೀ‌ ಜಗತ್ತು ಆಕ್ರೋಶ ವ್ಯಕ್ತ ಪಡಿಸಿದರು. ಅನೇಕ ರಾಜಕೀಯ ನಾಯಕರು ಮನೆ ಬರುವುದನ್ನು ತಪ್ಪಿಸಿದರು. ರೇವಣ್ಣ ಅವರು ಮನೆ ಬರುತ್ತಿದ್ದರು ಅವರನ್ನು ಬರದಂತೆ ಮಾಡಿದರು. ವೀಣಾ ಕಾಶಪ್ಪನವರ ಅವರು ಕೂಡ ಮನೆ ಬರುವುದಾಗಿ ಹೇಳಿದ್ದರು. ಆದರೆ ಅವರು ಬರದಂತೆ‌ ಮಾಡಿದರು. ಯಾರೊಂದಿಗೆ ಯಾರು ಮಾತನಾಡಿದ್ದಾರೆ ಎಂದು ಎಲ್ಲ ಫೋನ್ ರೆಕಾರ್ಡ್ ಇವೆ. ಗೃಹ ಸಚಿವರು ಏಕೆ ಸುಮ್ಮನಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ನೇಹಾ ಕೊಲೆಯ ಬಳಿಕ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಶನರ್ ಟ್ರಾನ್ಸ್ ಫರ್ ಆಗಿದ್ದರೆ ಅಂಜಲಿ ಹತ್ಯೆ ನಡೆಯುತ್ತಿರಲಿಲ್ಲ: ನಿರಂಜನ್ ಹಿರೇಮಠ

ಜಂಗಮ, ಅಂಬಿಗರ ಸಮುದಾಯ ಸೇರಿ ಮುಂದೆ ಉಗ್ರ ಹೋರಾಟ ಮಾಡುತ್ತೇವೆ. ಸರ್ಕಾರ ಗುಂಡಾ, ರೌಡಿ ಶೀಟರ್​ಗಳ ದಂಧೆ ಬಂದ್ ಮಾಡಬೇಕು. ಅಲ್ಲದೆ ರೌಡಿಗಳ ಚಲನವಲನ ಮೇಲೆ‌ ಕಣ್ಣಿಡಬೇಕು. ಅಂಜಲಿ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಬೇಕು. ಅಂಜಲಿ ಕುಟುಂಬಕ್ಕೆ ಭದ್ರತೆ ನೀಡಬೇಕು. ಅವರು ಕುಟುಂಬಕ್ಕೆ ಒಂದು‌ ಮನೆ, ತಾತ್ಕಾಲಿಕ ಕೆಲಸ ನೀಡಬೇಕು. ಈ ಬಗ್ಗೆ ವಾಗ್ದಾನ ಪತ್ರ ನೀಡಬೇಕು ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:36 pm, Sat, 18 May 24

Follow Us
Narasimha Murti Pyati
Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More